ತಾ. ಪಂ. ಇ.ಓ.ರಿಂದ ಮಕ್ಕಳಿಗೆ ಮೇಷ್ಟ್ರಾಗಿ ಪಾಠ

ವಡಗೇರಾ:ಆ.23: ಪಟ್ಟಣದಲ್ಲಿರುವ ಕಸ್ತೂರಿಬಾ ಬಾಲಕಿಯರ ವಸತಿ ನಿಲಯಕ್ಕೆ ವಡಗೇರಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ್ ಸಂಗವಾರ ದಿಡೀರ್ ಭೇಟಿ ನೀಡಿ ಮಕ್ಕಳ ಊಟ. ವಸತಿ. ಕಲಿಕೆಯ ಸ್ಥಿತಿಗತಿಯನ್ನು ಪರಿಶೀಲಿಸಿದರು ಏನಾದರೂ ಸಮಸ್ಯೆಗಳಿದ್ದರೆ ತಿಳಿಸಿ ನಾನು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು. ಮಕ್ಕಳಿಗೆ ಯಾವುದೇ ರೀತಿಯ ಕುಂದು ಕೊರತೆ ಆಗದಂತೆ ಗುಣಮಟ್ಟದ ಆಹಾರವನ್ನು ನೀಡುವಂತೆ ಅಲ್ಲಿನ ಸಿಬ್ಬಂದಿ ವರ್ಗದವರಿಗೆ ಹೇಳಿದರು. ಕೆಲ ಸಮಯ ಮಕ್ಕಳಿಗೆ ಮೇಷ್ಟ್ರಾಗಿ ಪಾಠ ಮಾಡುವ ಮೂಲಕ ಮಕ್ಕಳ ಜೊತೆ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪರೀಕ್ಷೆಗಳ ಸಿದ್ದತೆ ಕುರಿತು ಮಕ್ಕಳ ಜೊತೆ ಸಂವಾದ ನಡೆಸಿದರು ಚಿಕ್ಕವಯಸಿನಿಂದಲೆ ಯಾವ ತರಹದ ಗುರಿಯನ್ನು ಹೊಂದಬೇಕು ಎಷ್ಟು ಗಂಟೆಗಳ ಕಾಲ ಅಭ್ಯಾಸ ಮಾಡಬೇಕೆಂಬುವುದರ ಬಗ್ಗೆ ತಿಳಿಸಿದರು. ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ ಸರಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ತಮಗೆ ಒದಗಿಸಿದೆ ಅದರ ಸದುಪಯೋಗ ಪಡೆದುಕೊಂಡು ಉತ್ತಮ ರೀತಿಯ ವಿದ್ಯಾಭ್ಯಾಸ ಮಾಡುವಂತೆ ಮಕ್ಕಳಿಗೆ ಕಿವಿ ಮಾತು ಹೇಳಿದರು.ಅದೆ ಸಮಯದಲ್ಲಿ ಮಕ್ಕಳು ಬಿಡಿಸಿದ ರಂಗೋಲಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು