ತಾ.ಪಂ.ಇಒ ಬಸವರಾಜ ಅಧಿಕಾರ ಸ್ವೀಕಾರ

ಸಿರವಾರ.ಮಾ.೨೨- ಸ್ಥಳೀಯ ತಾಲೂಕ ಪಂಚಾಯತಿಗೆ ನೂತನ ಕಾರ್ಯನಿರ್ವಾಹಕ ಅಧಿ ಕಾರಿಯಾಗಿ ಬಸವರಾಜ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು. ತಾ.ಪಂ. ಪ್ರಭಾರಿ ಇಒ ಶಶಿಧರ ಸ್ವಾಮಿ ಮಠದ ಇವರು ಕೇವಲ ಎರಡೇ ವಾರದಲ್ಲಿ ಮೂಲ ಹುದ್ದೆಗೆ ವರ್ಗಾ ವಣೆಯಾದ( ಮಾನ್ವಿಗೆ) ಹಿನ್ನಲೆ, ತೆರವಾಗಿದ್ದ ಇಒ ಸ್ಥಾನಕ್ಕೆ ಯಾದಗಿರಿ ತಾಲೂಕಿನ ತಾ.ಪಂ.ಇಒ ಬಸವರಾಜ್ ಅವರನ್ನು ಸಿರವಾರಕ್ಕೆ ವರ್ಗಾವಣೆ ಮಾಡಿದೆ.
ಅಧಿಕಾರ ಸ್ವೀಕರಿಸಿ ಮಾತನಾಡಿದ ಬಸವರಾಜ ಅವರು ಲೋಕಸಭೆ ಚುನಾವಣೆಯ ನಿಮಿತ್ತವಾಗಿ ಸರಕಾರ ಸಿರವಾರಕ್ಕೆ ವರ್ಗಾವಣೆ ಮಾಡಿದೆ. ಚುನಾವಣೆಯ ಕರ್ತವ್ಯದ ಜತೆಗೆ, ತಾಲೂಕಿನ ಗ್ರಾಮೀಣ ಭಾಗದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಸಮಸ್ಯೆಗಳಿಗೆ ಸ್ಪಂಧಿಸಲಾಗುವುದು ಎಂದರು. ಸಹಾಯಕ ನಿರ್ಧೇಶಕರಾದ(ನರೇಗಾ) ಷರ್ಪಿನುಸಾಬೇಗಂ, ಸಿದ್ದರಾಮಪ್ಪ, ಪಿಡಿಒಗಳು ಸಿಬ್ಬಂದಿ ವರ್ಗದವರು ಇದರು.