ತಾ.ಪಂ. ಅನುದಾನದಲ್ಲಿ ತಾರತಮ್ಯ- ಆರೋಪ


ಬಾದಾಮಿ,ನ.19-ಇಲ್ಲಿನ ತಾಲೂಕಾ ಪಂಚಾಯತಿ ಅನುದಾನದಲ್ಲಿ ಪಕ್ಷಪಾತ ಹಾಗೂ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೆಲ ಸದಸ್ಯರು ಸಭೆಯಿಂದ ಹೊರ ನಡೆದರು ಇನ್ನು ಕೆಲ ಸದಸ್ಯರು ಸೇರಿಕೊಂಡು ಸಾಮಾನ್ಯ ಸಭೆ ನಡೆಸಿರುವ ಪ್ರಸಂಗ ಬುಧವಾರ ನಡೆಯಿತು.
ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಸಭೆಯು ಮಧ್ಯಾಹ್ನ 3 ಗಂಟೆ ಆಗ ಆರಂಭವಾದ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಕೆಲವೇ ಕೆಲ ಸದಸ್ಯರ ಹಾಗೂ ಅಧಿಕಾರಿಗಳ ಪ್ರಗತಿ ಪರಿಶೀಲನೆ ಒಂದು ರೀತಿಯಲ್ಲಿ ಕಾಟಾಚಾರಕ್ಕೆ ಮಾತ್ರ ಮೀಸಲಾಗಿದ್ದು ಕಂಡು ಬಂದಿತು.
ಸಭೆ ಬಹಿಷ್ಕಾರಕ್ಕೆ ಕಾರಣವಾಗಿದ್ದ ಫಲಾನುಭವಿಗಳ ಆಯ್ಕೆಯ ವಿಷಯಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆಯ 3 ಸ್ಪಿಂಕ್ಲರ್ ಆಯ್ಕೆಗೆ ಚೀಟಿ ಹಾಕಿ ಆಯ್ಕೆ ಮಾಡಿ ಅದರಲ್ಲೂ ಬಾದಾಮಿ ತಾಲೂಕಿಗೆ 2 ಮತ್ತು ಗುಳೇದಗುಡ್ಡ ತಾಲೂಕಿಗೆ ಒಂದು ಫಲಾನುಭವಿ ಆಯ್ಕೆ ಮಾಡಿ ಎಂದು ಸದಸ್ಯರು ಅಧಿಕಾರಿಗೆ ಸಲಹೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷೆ ರೇಖಾ ತಿರಕಪ್ಪನವರ ವಹಿಸಿದ್ದರು. ಇಒ ಡಾ.ಪುನೀತ ಸಭೆ ನಿರ್ವಹಣೆ ಮಾಡಿದರು. ಸದಸ್ಯರಾದ ಕುಮಾರ ಪಟ್ಟಣಶೆಟ್ಟಿ, ಅಂದಾನಿಗೌಡ ಪಾಟೀಲ, ನಿಂಗಪ್ಪ ಹೊಸಮನಿ, ಕುಮಾರ ರೋಣದ, ಕನಕಪ್ಪ ಮಣ್ಣೂರ, ಸುವರ್ಣಾ ಬ್ಯಾಹಟ್ಟಿ, ಲಕ್ಷ್ಮೀಬಾಯಿ ಪಾಟೀಲ, ಉಡಚವ್ವ ಮೇಟಿ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.
ಬಾಕ್ಸ್-
ಆಡಳಿತದಲ್ಲಿ ಮತ್ತು ಅನುದಾನ ಹಂಚಿಕೆಯಲ್ಲಿ ಹಾಗೂ ಸರಕಾರದ ಯೋಜನೆಗಳ ಅನುಷ್ಠಾನದಲ್ಲಿ ಆಡಳಿತರೂಢ ಪಕ್ಷದವರ ಕೈ ಮೇಲು ಮಾಡಿ ನಮಗೆ ಅನ್ಯಾಯ ಮಾಡಲಾಗುತ್ತಿದೆ. ನಾವು ಹತ್ತು ಹಲವು ಬಾರಿ ಅಭಿವೃದ್ಧಿಲ್ಲಿ ತಾರತಮ್ಯ ಮಾಡಬೇಡಿ ಮತ್ತು ಪಕ್ಷಪಾತ ಮಾಡಬೇಡಿ ಎಂದು ಹೇಳಿದರು ಕೂಡಾ ನಮ್ಮ ಮಾತಿಗೆ ಬೆಲೆ ನೀಡುತ್ತಿಲ್ಲ ಎಂದು ಸದಸ್ಯರಾದ ಸವಿತಾ ನಾರಪ್ಪನವರ, ರೇಣುಕಾ ಕೊಳ್ಳನ್ನವರ, ಕಮಲಗೌಡ ಪಾಟೀಲ, ಮಲ್ಲಮ್ಮ ಯತ್ನಟ್ಟಿ ದೂರಿ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.