ತಾವು ಸಚಿವ ಸ್ಥಾನದ ಆಕಾಂಕ್ಷಿ- ಎಚ್ .ವಿಶ್ವನಾಥ್

ಮೈಸೂರು, ನ‌ -20- ಸಚಿವ ಸಂಪುಟದಲ್ಲಿ ತಮಗೂ ಅವಕಾಶವಿದೆ‌‌ ಎಂದು ಬಿಜೆಪಿ‌ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್ .ವಿಶ್ವನಾಥ್ ಹೇಳಿದ್ದಾರೆ.
ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಕುರಿತು ಪಕ್ಷಿದ ವರಿಷ್ಠರಿಂದ ಇನ್ನೂ ಹಸಿರು ನಿಶಾನೆ ಸಿಕ್ಕಿಲ್ಲ. ಆದರೆ ಮಂತ್ರಿ ಪಟ್ಟ ಗಿಟ್ಡಿಸಲು ಭಾರೀ ಲಾಬಿ ನಡೆಯುತ್ತಿರುವ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಅಥವಾ ಪುನಾರಚನೆಯೋ ಯಾವಾಗ ಆಗುತ್ತದೆ ಎಂಬುದು ಅಮಿತ್ ಶಾ , ಪ್ರಧಾನಿಯವರಿಗೆ ಅಥವಾ ದೇವರಿಗೆ ಗೊತ್ತು ಎಂದರು.
ಜನರು ಮೆಚ್ಚುವಂತಹ ರೀತಿಯಲ್ಲಿ ಪರಿಪೂರ್ಣ ಸಂಪುಟ ರಚನೆಯಾಗುವುದು ಅವಶ್ಯಕ ಎಂದು ಅವರು ಪ್ರತಿಪಾದಿಸಿದರು.
ಜಾತಿಗೊಂದು ಅಭಿವೃದ್ಧಿ ನಿಗಮ ಸ್ಥಾಪಿಸುವುದು ಸರಿಯಲ್ಲ. ಕರ್ನಾಟಕ ರಾಜ್ಯ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ನಮ್ಮದು ಚೆಲುವ ಕನ್ನಡ ನಾಡು. ಶಾಂತಿಯ ತೋಟದಲ್ಲಿ ಜಾತಿಗೊಂದು ಪ್ರಾಧಿಕಾರ ಸ್ಥಾಪಿಸುವುದು ಅಶಾಂತಿಗೆ ಕಾರಣವಾಗಬಹುದು ಎಂದು ಅವರು ತಿಳಿಸಿದರು.