ತಾಳ ಕೇರಿ ಗ್ರಾಮದಲ್ಲಿ ಜೆಡಿಎಸ್ ಸಭೆ


ಸಂಜೆವಾಣಿ ವಾರ್ತೆ
ಯಲಬುರ್ಗಾ,ಜ.14-  ವಿಧಾನಸಭಾ ಕ್ಷೇತ್ರದ ತಾಳಕೇರಿ ಗ್ರಾಮದಲ್ಲಿ  ಜೆ ಡಿ ಎಸ್  ಪಕ್ಷದ ನಿಯೋಜಿತ ಅಭ್ಯರ್ಥಿ ಮಲ್ಲನಗೌಡ ಎಸ್ ಕೋನನಗೌಡ್ರು  ಹಾಗೂ ಪಕ್ಷದ ಪ್ರಮುಖರು ಸಭೆ ನಡೆಸಿದರು. ಪಂಚರತ್ನ ಯೋಜನೆಗಳ ಕುರಿತು ಹಾಗೂ ಕುಮಾರಣ್ಣನವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ವೇಳೆ  ರೈತರ ಸಾಲ ಮನ್ನಾ ಸರಾಯಿ ನಿಷೇಧ ಲಾಟರಿ ನಿಷೇಧದಂತ ಕಲ್ಯಾಣ ಕಾರ್ಯಗಳನ್ನು ಜಾರಿಗೆ ತಂದು ಸಾಮಾನ್ಯರ ಬದುಕನ್ನು ಹಸನಗೊಳಿಸಿದ್ದಾರೆ. 2023 ಕ್ಕೆ ಜೆಡಿಎಸ್ ಪಕ್ಷವನ್ನ ಬೆಂಬಲಿಸಿ ಕುಮಾರಣ್ಣನವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದರೆ ರೈತರ ಸಾಲ ಮನ್ನಾ ತಾಯಂದಿರ ಸ್ತ್ರೀಶಕ್ತಿ ಸಂಘಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತೇವೆ ಯುವಕರು ತಾಯಂದಿರು ಹಿರಿಯರು ಒಂದೇ ಒಂದು ಸಾರಿ ಜೆಡಿಎಸ್ ಅನ್ನು ಬೆಂಬಲಿಸಿ ಎಂದು ಮನವಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅನೇಕ ಯುವಕರು  ಜೆ ಡಿ ಎಸ್ ಪಕ್ಷವನ್ನು ಸೇರ್ಪಡೆಗೊಂಡರು.