ತಾಳ್ಮೆ ಇಲ್ಲದೆ ಬದುಕಿಲ್ಲ !!

ಪ್ರಸ್ತುತ ದಿನಗಳಲ್ಲಿ ಮಾನವನ ಜೀವನ ಹೇಗಾಗಿದೆಯೆಂದರೆ ಮಾನವನ ದುಡಿಯುವ ಕಾರ್ಯನಿರತೆಯಲ್ಲಿ ಆತನ ಬದುಕು ವಿಶ್ರಾಂತಿಯಿಲ್ಲದೆ ಸಿಟ್ಟು, ಕೋಪ, ಮನಸ್ತಾಪ ದಿಂದ ತನ್ನಲ್ಲಿರುವ ಅಲ್ಪ ತಾಳ್ಮೆಯನ್ನು ಕಳೆದು ಕೊಳ್ಳುತ್ತಿದ್ದಾನೆ. ತಾಳ್ಮೆ ಎಂಬುದು ಬೆಳವಣಿಗೆಯ ಪ್ರತೀಕ. ಓಡುವ ಬಾಳಬಂಡಿಗೆ ತಾಳ್ಮೆಯ ಅವಶ್ಯಕತೆ ಇದೆ ಯಾವುದೇ ಔತಣಕೂಟದಲ್ಲಿ ಎಲ್ಲರೂ ಕೂತ ನಂತರ ಆಹಾರ ಬಡಿಸುವಾಗ ನಾವು ಕಾಯುತ್ತೇವೆ ಎಲ್ಲರೂ ಊಟ ಮಾಡಿ ಮುಗಿಯುವವರೆಗೂ ಕೈತೊಳೆಯಲು ಕಾಯುತ್ತಿವೆ ಇಲ್ಲಿ ನಾವು ಜೀವನದ ತಾಳ್ಮೆ ಬೆಲೆ ಗೊತ್ತಿಲ್ಲದೆ ಅರಿಯುತ್ತೇವೆ. ಯಾರಲ್ಲಾದರೂ ಸಿಟ್ಟು ಬಂದರೆ ಅವರಿಗೆ ಸಿಟ್ಟಿನಿಂದ ನೀವು ಮರಳಿ ಕೊಡಬೇಕಾದ ಉತ್ತರದ ಬದಲು ಮೌನವಾಗಿ ಬಿಡಿ ಏಕೆಂದರೆ ಸಿಟ್ಟಿನಿಂದ ತಾಳ್ಮೆ ಕಳೆದುಕೊಂಡರೆ ನಮ್ಮ ಹತ್ತಿರದವರನ್ನು ದೂರ ಮಾಡಿಕೊಳ್ಳುವ ಸಂದರ್ಭ ಎದುರಾಗಬಹುದು. ಏಕೆಂದರೆ ನಿಮ್ಮಲ್ಲಿರುವ ಮುಗ್ಧತೆ ಎಲ್ಲಾ ಉತ್ತರವನ್ನು ನೀಡುತ್ತದೆ. ಆದರೆ ನೀವು ನುಡಿದರೆ ನಿಮ್ಮ ಮಾತು ಕೇಳುವವನ ಮನದಲ್ಲಿ ಅಚ್ಚಳಿಯದೆ ಉಳಿಯುತ್ತದೆ . ತಾಳ್ಮೆಯನ್ನು ಪ್ರಕೃತಿಯೇ ನಮಗೆ ಹೇಳಿಕೊಡುತ್ತದೆ ಅಲ್ಲವೇ ?  ಒoದು ಗಿಡ ನೆಟ್ಟ ಕೂಡಲೇ ತಕ್ಷಣ ಮರವಾಗಿ ಹೂವು ಹಣ್ಣು ಕೊಡಲು ಅಲ್ಲವೇ ?..ತಾಳ್ಮೆಯಿಂದ ಅವರಿಗೆ ಒಳ್ಳೆಯ ದೀರ್ಘ ವೀಕ್ಷಣೆ ಇರುತ್ತದೆ .ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಆ ನಿರ್ಧಾರದಲ್ಲಿ  ಅನಂತಕಾಲದ ಗುರಿಯಿರುತ್ತದೆ . ಅದು ನಮ್ಮ ಹಿರಿಯರು ಮಾಡಿದ ಕಲ್ಯಾಣ ಕಾರ್ಯಗಳಿಂದ ಅದರ ಸೌಂದರ್ಯವನ್ನು ನಾವು ಜೀವನದಲ್ಲಿ ಸುಲಭವಾಗಿ ಪಡೆಯುತ್ತಿದ್ದೇವೆ ಅದಕ್ಕೆ ನಮ್ಮ ಹಿರಿಯರ ಅನಂತಕಾಲದ ಗುರಿಯೇ ಸಾಕ್ಷಿ. ಈ ಹಿಂದೆ ಇಂಟರ್ನೆಟ್ ಆಮೆಗತಿಯ ನಿಧಾನದಲ್ಲಿ ದೊರಕುತ್ತಿದ್ದರೂ ಅದರ ಮುಂದೆ ಕೂರುತ್ತಿದ್ದವರು ನಾವು ಆದರೆ ಇಂದು ಅದು ನಿಧಾನವಾದರೆ ಮನುಷ್ಯ ತನ್ನ  ತಾಳ್ಮೆಯನ್ನು ಕಳೆದುಕೊಂಡು ಮೊಬೈಲ್ ಎತ್ತಿ ಎಸೆಯುವುದು ನಮಗೆ ಸರ್ವೇಸಾಮಾನ್ಯವಾಗಿದೆ .ಜೊತೆಗೆ ಮನುಷ್ಯ ಎಷ್ಟು ತನ್ನ ತಾಳ್ಮೆ ಕಳೆದುಕೊಂಡಿದ್ದಾನೆ ಎಂದರೆ ಟ್ರಾಫಿಕ್ ಸಿಗ್ನಲ್ ನಲ್ಲಿ ಕೇವಲ ಮೂವತ್ತು ಸೆಕೆಂಡ್ ಕಾಯದಷ್ಟು ತಾಳ್ಮೆ ಕಳೆದು ಕೊಂಡಿದ್ದಾನೆ. ಮನುಷ್ಯ ಹೇಗೆಂದರೆ ಸುಲಭ ಮತ್ತು ಸೌಲಭ್ಯತೆ ಸುಲಭವಾಗಿ ಎಲ್ಲರಿಗೂ ಲಭ್ಯವಾಗುತ್ತಾ ಹೋದರೆ ಕ್ಷಮೆಯ ಬೆಲೆ ಗೊತ್ತಿಲ್ಲದೆ ತಾಳ್ಮೆ ಕಳೆದುಕೊಂಡು ಜವಾಬ್ದಾರಿಯ ಕರ್ತವ್ಯ ಮತ್ತು ಸಂಬಂಧಗಳಿಂದ ದೂರವಾಗುವುದನ್ನು ನಾವು ಇಂದು ನೋಡುತ್ತಿದ್ದೇವೆ. 

> ಅಸ್ವಸ್ಥತೆ ನಾವು ಮಾಡುವ ಪ್ರವೃತ್ತಿಯಲ್ಲಿ

 ಮಾತು – ಕೆಲಸ – ನಡೆ  ಮನಸ್ಸು ಮಿಲನ ವಾಗದಿದ್ದಲ್ಲಿ ಕಾಟಾಚಾರಕ್ಕೆ ಅಂತ ಮುಗಿಸುವುದರಲ್ಲಿ ಸಮಾಗಮವಾಗುತ್ತದೆ .

> ಬೇಡವಾದ ಚಿಂತೆಗಳನು ಸೇರಿಸಿ ನಮ್ಮ ಗುರಿಯನ್ನು ನಾವೇ ಆಶ್ವಾದಿಸದಿರುವುದು ತಾಳ್ಮೆ ಕಳೆದುಕೊಳ್ಳಲು ಕಾರಣವಾಗುತ್ತದೆ.

> ಅವಸರವೇ ಅಪಘಾತಕ್ಕೆ ಕಾರಣ ಯಾವುದರಲ್ಲಿ ನಾವು ಅವಸರ ತೋರಿದಾಗ ಅದರ ಫಲ ಒಳ್ಳೆಯ ಗುಣಮಟ್ಟ ಕಳೆದುಕೊಳ್ಳುತ್ತದೆ .

> ಒoದು ಚಿಕ್ಕ ಪುಟ್ಟ ವಿಷಯವನ್ನು ಅರಿಯದೆ ವೈಯಕ್ತಿಕ ಮತ್ತು ಕೌಟುಂಬಿಕ ಜೀವನದಲ್ಲಿ ಚಿಕ್ಕ ಚಿಕ್ಕ ವಿಷಯಕ್ಕೆ ಮನಸ್ತಾಪಗೊಂಡು ತಾಳ್ಮೆ ಕಳೆದುಕೊಂಡರೆ ಅಲ್ಲಿ ಸಂಬಂಧಗಳು ಉಳಿಯುವುದಿಲ್ಲ .

> ಗುರು ಹಿರಿಯರು ಹೇಳಿರುವ ಹಾಗೆ ತಾಳಿದವನು ಬಾಳಿಯಾನು ನಾವು ತಾಳಿದರೆ ನಮ್ಮ ಬದುಕು ಬಂಗಾರವಾಗುತ್ತದೆ .

ವಿದ್ಯಾರ್ಥಿ ಬದುಕಿನಲ್ಲಿ ಯಶಸ್ಸು ಕೂಡ ನಾವು ಕಂಡ ಕೂಡಲೇ ಸಿಗುವ ವಸ್ತುವಲ್ಲ,, ಆ ಯಶಸ್ಸನ್ನು ಪಡೆಯಲು ನಮ್ಮಲ್ಲಿರುವ ಸತತ ಪ್ರಯತ್ನ, ಪರಿಶ್ರಮ , ನಂಬಿಕೆಯನ್ನು ತಾಳ್ಮೆಯಿಂದ ಮೈಗೂಡಿಸಿಕೊಂಡರೆ ಎಲ್ಲರ ಬದುಕಿನಲ್ಲಿ ಯಶಸ್ಸು ಖಂಡಿತ ಸಾಧ್ಯ..