ತಾಳೂರು ಗ್ರಾಮದಲ್ಲಿ ಗೋದಾಮು, ವ್ಯಾಪಾರ ಮಳಿಗೆ ಉದ್ಘಾಟನೆ


ಸಂಜೆವಾಣಿ ವಾರ್ತೆ
ಸಂಡೂರು :4) ದಿನಾಂಕ 03-9-2023 ರಂದು ನಬಾರ್ಡ್ ಬಹು ಸೇವಾ ಕೇಂದ್ರ ಯೋಜನೆ ಅಡಿಯಲ್ಲಿ, ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ  ಆರ್ಥಿಕ ನೆರವಿನಿಂದ ಸಂಡೂರು ತಾಲ್ಲೂಕಿನ ತಾಳೂರು ಗ್ರಾಮದ,”ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ” ನಿರ್ಮಿಸಲಾದ ಗೋದಾಮು ಮತ್ತು ಗ್ರಾಮೀಣ ವ್ಯಾಪಾರ ಮಳಿಗೆಯನ್ನು ಈ ತುಕಾರಾಮ್ ಶಾಸಕರು ಹಾಗೂ ಕೆ.ತಿಪ್ಪೇಸ್ವಾಮಿ. ಅಧ್ಯಕ್ಷರು .ಬಿ.ಡಿ.ಸಿ.ಸಿ ಬ್ಯಾಂಕ್ ನಿಯಮಿತ ಹೊಸಪೇಟೆ ಇವರು ಉದ್ಘಾಟಿಸಿದರು ,ಈ ಸಂದರ್ಭದಲ್ಲಿ ಜೆ.ಎಂ.ವೃಷಭೇಂದ್ರಯ್ಯ ಸ್ವಾಮಿಯವರು ಅಧ್ಯಕ್ಷರು ಕೃಷಿ ಪತ್ತಿನ ಸಹಕಾರ ಸಂಘ ತಾಳೂರು. ಇವರು ಅಧ್ಯಕ್ಷತೆ ವಹಿಸಿದ್ದರು “ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಅಭಿವೃದ್ಧಿಗೆ ಜೀವನಾಡಿ ಇದಂತೆ   ರೈತರು ಸದರಿ ಸಂಘದ ಉದ್ದೇಶಗಳನ್ನು ಅಳವಡಿಸಿಕೊಂಡು ಪ್ರಗತಿಪರರಾಗಲು ಸನ್ಮಾನ್ಯ ಶ್ರೀ ಈ ತುಕಾರಾಮ್ ಶಾಸಕರು ಆಶಿಸಿದರು”.