
ಬೀದರ್: ಮೇ.11:ಮತದಾನ ಮಾಡಲು ಜನರು ನಿರಾಸಕ್ತಿ ತೋರುತ್ತಿದ್ದಾರೆ ಎಂಬ ಅರೋಪದ ಮಧ್ಯ ತಾಳಿ ಕಟ್ಟಿ ನೇರವಾಗಿ ಮದುವೆ ಡ್ರಸ್ ನಲ್ಲೆ ವರ ಮತದಾನ ಕೇಂದ್ರಕ್ಕೆ ಬಂದು ತನ್ನ ಮತದಾನದ ಹಕ್ಕು ಚಲಾಯಿಸಿರುವ ಘಟನೆ ಬೀದರ್ ನಗರದಲ್ಲಿ ನಡೆದಿದೆ.
ಇಲ್ಲಿನ ಓಲ್ಡ್ ನಾವದಗಿಯ ತಮ್ಮ ಮನೆಯಲ್ಲಿ ಅಂಕಿತಾಗೆ ತಾಳಿ ಕಟ್ಟಿದ ಕಾರ್ತಿಕ ಪಾಟೀಲ್ ಎಂಬ ವರ ಕುಟುಂಬದ ಸಮೇತರಾಗಿ ನೇರವಾಗಿ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಿದ್ದಾನೆ.
ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಆಗಿದ್ದು, ಎಲ್ಲರೂ ತಪ್ಪದೆ ಮತದಾನ ಮಾಡಬೇಕು. ಹೀಗಾಗಿ ನಾನು ಕೂಡಾ ತಾಳಿ ಕಟ್ಟಿ ನೇರವಾಗಿ ಮತಗಟ್ಟೆ ಬಂದು ಮತದಾನ ಮಾಡಿದ್ದೇನೆ ಎಂದು ಹೇಳಿದರು.
ನಾವು ಅಭಿವೃದ್ಧಿಗಾ ಗಿ ಮತದಾನ ಮಾಡೋಣ ಎಂದು ವರ ಸಮಾಜಕ್ಕೆ ಮತದಾನ ಮಹತ್ವದ ಸಂದೇಶ ನೀಡಿದ್ದಾರೆ.