ತಾಳಿಪಟ್ಟು ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು:
ಅನ್ನ: ಒಂದು ಕಪ್
ಅಕ್ಕಿ ಹಿಟ್ಟು : ಅರ್ಧ ಕಪ್
ಮೈದಾ ಹಿಟ್ಟು (ಗೋದಿ ಹಿಟ್ಟು) : ಕಾಲು ಕಪ್
ಹೆಚ್ಚಿದ ಈರುಳ್ಳಿ : ಎರಡು
ಹೆಚ್ಚಿದ ಟೊಮೆಟೋ : ಒಂದು
ಹೆಚ್ಚಿದ ಕರಿಬೇವು, ಕೊತ್ತಂಬರಿ – ಸ್ವಲ್ಪ
ಹೆಚ್ಚಿದ ಹಸಿಮೆಣಸು – ಎರಡು
ತುರಿದ ಕ್ಯಾರೆಟ್ : ಒಂದು
ತುರಿದ ಶುಂಠಿ : ಒಂದು ಇಂಚು
ಉಪ್ಪು : ರುಚಿಗೆ ತುಪ್ಪ: ಸ್ವಲ್ಪ
ಮಾಡುವ ವಿಧಾನ:
ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಚೆನ್ನಾಗಿ ಸ್ಮ್ಯಾಶ್ ಮಾಡಿರುವ ಅನ್ನ, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಈರುಳ್ಳಿ, ಹೆಚ್ಚಿದ ತರಕಾರಿಗಳು, ಉಪ್ಪು, ಶುಂಠಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವು ಎಲ್ಲವನ್ನೂ ಹಾಕಿ ಅಗತ್ಯವಿದ್ದರೆ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮಧ್ಯಮ ಗಾತ್ರದ ಉಂಡೆಯನ್ನಾಗಿ ಮಾಡಿ ಅದನ್ನು ರೊಟ್ಟಿಯ ಆಕಾರಕ್ಕೆ ತಟ್ಟಿ ಕಾದ ಕಾವಲಿಯ ಮೇಲೆ ಹಾಕಿ ಒಂದು ಚಮಚ ತುಪ್ಪವನ್ನು ಸವರಿ ಬೇಯಿಸಿದರೆ ತಾಳಿಪಟ್ಟು ರೆಡಿಯಾಗುತ್ತದೆ. ಹೀಗೆ ನೀವು ಇದರಲ್ಲಿ ಸೊಪ್ಪು ಅಥವಾ ಇನ್ನು ಯಾವುದೇ ತರಕಾರಿಗಳನ್ನು ಬಳಸಬಹುದು.