ತಾಳಿಕೋಟೆ ಶ್ರೀ ಖಾಸ್ಗತರ ಕಾಲದಲ್ಲಿಯ ಭರತನಾಟ್ಯ ಇನ್ನೂ ಜೀವಿತ!

ಜಿ.ಪಿ. ಘೋರ್ಪಡೆ.
ತಾಳಿಕೋಟೆ:ಸೆ.17: ರಾಜ್ಯದ ಪ್ರಮುಖ ಮಠಗಳಲ್ಲಿ ಒಂದಾದ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಶ್ರೀ ಖಾಸ್ಗತೇಶ್ವರ ಶಿವಯೋಗಿಗಳು 11ನೇ ಪಟ್ಟಾಧಿಕಾರಿಗಳಾಗಿ ಸುಮಾರು 33 ವರ್ಷಗಳು ಬಾಳಿ ಬೆಳಗುವದರೊಂದಿಗೆ ಅನೇಕ ಪವಾಡಗಳನ್ನು ಗೈದು ಭಕ್ತರ ಉದ್ದಾರ ಗೈದ ಶ್ರೀ ಖಾಸ್ಗತೇಶ್ವರ ಶ್ರೀಗಳು ಅಂದಿನ ಕಾಲದಲ್ಲಿಯೂ ಭಕ್ತಸಮೂಹಕ್ಕೆ ಭರತನಾಟ್ಯವನ್ನು ಗೈದು ನೃತ್ಯ ಪ್ರದರ್ಶಿಸಿ ಭಕ್ತರಿಗೆ ಭಕ್ತಿಯ ಮಾರ್ಗದತ್ತ ಕೊಂಡೊಂಯ್ದಂತಹ ಭರತನಾಟ್ಯ ಕಲೆಯೂ ಇನ್ನೂ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಜೀವಿತವಿದೆ ಎಂದು ಹೇಳಿದರೆ ತಪ್ಪಾಗಲಿಕಿಲ್ಲವಷ್ಠೇ?.
ಶ್ರೀ ಖಾಸ್ಗತರು ಲಿಂಗೈಕ್ಯರಾದ ನಂತರ ಶ್ರೀ ಶಿವಬಸವ ಮಹಾ ಸ್ವಾಮಿಗಳು ಪಟ್ಟಾಧಿಕಾರ ವಹಿಸಿಕೊಂಡರು ನಂತರ ಅವರು ಸಂಸಾರಿಕ ಶ್ರೀಗಳಾಗಿದ್ದರಿಂದ ತಮ್ಮ ಪುತ್ರ ವಿರಕ್ತೇಶನಿಗೆ ಶ್ರೀಮಠದ ಪೀಠಾಧಿಕಾರಿಗಳನ್ನಾಗಿ ಮಾಡಿದರು. ಶ್ರೀ ಶಿವಬಸವ ಸ್ವಾಮಿಗಳಿಗೆ 3 ಜನ ಪುತ್ರರು, ಇರ್ವ ಪುತ್ರಿಯರು ಹೊಂದಿದ್ದ ಇವರಲ್ಲಿ ವಿರಕ್ತಶ್ರೀಗಳೆ ಎಂಬ ಹೆಸರಿನ ಪೀಠಾಧಿಕಾರ ವಹಿಸಿಕೊಂಡಿದ್ದ ಶ್ರೀಗಳು ತಾಳಿಕೋಟೆ ಪಟ್ಟಣವಷ್ಟೇ ಅಲ್ಲಾ ಜಿಲ್ಲೆ, ರಾಜ್ಯವನ್ನು ಬೆಳಗುವಂತೆ ಮಾಡಿದಲ್ಲದೇ ಶ್ರೀ ಮಠದ ಕಟ್ಟಡ ಶ್ರೀ ಖಾಸ್ಗತರ ಕಾಲದಲ್ಲಿ ಅರ್ದಕ್ಕೆ ನಿಂತಿದ್ದನ್ನು ಪೂರ್ಣಗೊಳಿಸಿ ತಮ್ಮ ಇಚ್ಚಾ ಅನುಸಾರ ಶ್ರೀಗಳು ಲಿಂಗೈಕ್ಯರಾದರು.
ಇಂತಹ ಮಹಾನ್ ಮಠದ ಶಿವಬಸವ ಸ್ವಾಮಿಗಳ ಹಿರಿಯ ಪುತ್ರ ವೇ.ವಿಶ್ವನಾಥ ವಿರಕ್ತಮಠ, ವೇ.ಮುರುಘೇಶ ವಿರಕ್ತಮಠ, ಹಾಗೂ ಇನ್ನೂರ್ವ ವೇ.ಸಂಗಯ್ಯ ವಿರಕ್ತಮಠ ಈ ಸಂಗಯ್ಯ ವಿರಕ್ತಮಠ ಅವರೇ ಭರತನಾಟ್ಯ ಕಲೆಯನ್ನು ಕಳೆದ 30 ವರ್ಷಗಳಿಂದ ಮುನ್ನಡೆಸಿಕೊಂಡು ಸಾಗಿದ್ದು ಸುಮಾರು ನೂರಾರು ವಿಧ್ಯಾರ್ಥಿನಿಯರುಗಳಿಗೆ ಶಿಕ್ಷಣ ನೀಡಿ ಜಿಲ್ಲೆ, ರಾಜ್ಯಮಟ್ಟದಲ್ಲಿಯೂ ಸಹ ಮಿನುಗುವ ತಾರೆಯರಂತೆ ಮಾಡಿದ್ದಾರೆಂದರೆ ತಪ್ಪಾಗಲಿಕ್ಕಿಲ್ಲಾ.
1969ನೇ ಸಾಲಿನಲ್ಲಿ ಶಿವಸವ ಅನ್ನಪೂರ್ಣ ಅವರ ಉದರದಲ್ಲಿ ಜನ್ಮ ತಾಳಿದ ಸಂಗಯ್ಯ ವಿರಕ್ತಮಠ ಅವರು ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ತಾಳಿಕೋಟೆ ಪಟ್ಟಣದಲ್ಲಿ ಮುಗಿಸಿ ಶ್ರೀಗಳ ಕಾಲದಲ್ಲಿಯ ಭರತನಾಟ್ಯ ಕಲೆ ಎಂಬುದನ್ನು ಅಳವಡಿಸಿಕೊಳ್ಳಲು ಧಾರವಾಡದ ಉಪದ್ಯಾಯ ಮಾಳಮಟ್ಟಿ ಅವರ ಭರತನಾಟ್ಯ ಶಾಲೆಯಲ್ಲಿ 5 ವರ್ಷ ತರಬೇತಿ ಶಿಕ್ಷಣ ಪಡೆದರು. ಇವರು ಬೆಂಗಳೂರಿನಲ್ಲಿಯ ಆದರ್ಶ ಫೀಲ್ಮಿ ಇನ್ಸೂಟ್ಯೂಟ್ ಪೋಲ್ಸ್ ಫಾರ್ಸ ಶಾಲೆಯಲ್ಲಿ 5 ವರ್ಷ, ಅಲ್ಲದೇ ಬೆಂಗಳೂರಿನಲ್ಲಿಯ ವಿಜಯನಗರದಲ್ಲಿಯ ಶೋಭಾ ನೃತ್ಯ ಪಾಠ ಶಾಲೆಯಲ್ಲಿಯೂ ತರಬೇತಿ ಪಡೆದ ಇವರು ಕುಚ್ಚಪುಡಿ ನೃತ್ಯ, ತಂಜಾವರ ನೃತ್ಯ, ನಾಟ್ಯ ರಜರಿ ನೃತ್ಯ, ಮಣಿಪೇರಿ ನೃತ್ಯಗಳನ್ನು ಕರಗತ ಮಾಡಿಕೊಂಡ ಇವರು ಈಗಾಗಲೇ ತಾಳಿಕೋಟೆ ಶ್ರೀ ಖಾಸ್ಗತೇಶ್ವರ ಮಠದಲ್ಲಿದ್ದ ಶ್ರೀ ಖಾಸ್ಗತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆಯ ವತಿಯಿಂದ ಸುಮಾರು ನೂರಕ್ಕೂ ಹಚ್ಚು ವಿಧ್ಯಾರ್ಥಿಗಳಿಗೆ ಭರತನಾಟ್ಯ ಕಲೆಯ ಕುರಿತು ಶಿಕ್ಷಣ ನೀಡಿದ್ದು ಇವರಿಗೆ ಧಾರವಾಡದಲ್ಲಿ ನಾಟ್ಯ ಮಯೂರ ಪ್ರಶಸ್ತಿ ಲಭಿಸಿದೆ ಅಲ್ಲದೇ ವಿಜಯಪುರದಲ್ಲಿ ನಾಟ್ಯ ಪ್ರವೀಣ್ ಪ್ರಶಸ್ತಿಯನ್ನು ಪಡೆದಿದ್ದಾರೆ ಈಗಾಗಲೇ ಜಿಲ್ಲೆ ಹಾಗೂ ತಾಲೂಕಾ ಮಟ್ಟದಲ್ಲಿಯೂ ಬಸವ ಕಲ್ಯಾಣ ಕಿರಣ ಎಂಬ ನಾಟ್ಯ ಕಲೆಯನ್ನು ಪ್ರದರ್ಶಿಸಿ ಜನಮನವನ್ನು ರಂಜಿಸಿದ ಇವರು ಕನ್ನಡ ಸಂಸ್ಕøತಿ ಇಲಾಖೆ ವಿಜಯಪುರ ಇವರ ಸಹಯೋಗದೊಂದಿಗೆ, ಬಬಲೇಶ್ವರ, ಕಾಳಗಿ, ವಿಜಯಪುರ, ಮುದ್ದೇಬಿಹಾಳ, ಹಾಗೂ ತಾಳಿಕೋಟೆ ಗ್ರಾಮದೇವಿ ಜಾತ್ರೋತ್ಸವದಲ್ಲಿಯೂ ಕೂಡಾ ಶ್ರೀ ಜಗಜ್ಯೋತಿ ಬಸವೇಶ್ವರರ ಪಾತ್ರದಾರಿಯಾಗಿ ಕಲೆಯನ್ನು ಪ್ರದರ್ಶಿಸಿದ ಇವರು ದುಶಂತ್ ಶಕುಂತಲೆ ಎಂಬ ನಾಟ್ಯವನ್ನು ಪ್ರದರ್ಶಿಸಿ ಶಂಕುತಲೆಯ ಸ್ತ್ರೀ ಪಾತ್ರದಲ್ಲಿ ಅಭಿನಯಿಸಿ ಜನಮನ ರಂಜಿಸಿದ್ದಾರೆ.
ಈಗಾಗಲೇ ವೇ. ಸಂಗಯ್ಯ ವಿರಕ್ತಮಠ ಅವರು ಶ್ರೀಮಠದ ಈಗೀನ ಪೀಠಾಧಿಪತಿಗಳಾದ ಶ್ರೀ ಸಿದ್ದಲಿಂಗ ದೇವರ ಕೃಪಾಶಿರ್ವಾದದೊಂದಿಗೆ ಪುನಃ ಶ್ರೀ ಖಾಸ್ಗತೇಶ್ವರ ಮಠದಲ್ಲಿ ತಮ್ಮ ಭರತನಾಟ್ಯ ಶಾಲೆಯನ್ನು ಪುನರ್ ಪ್ರಾರಂಬಿಸಿ ಸುಮಾರು 8 ವರ್ಷದಿಂದ 18 ವರ್ಷದ ವಿಧ್ಯಾರ್ಥಿನಿಯರಿಗೆ ಶಿಕ್ಷಣ ನೀಡುತ್ತಾ ಸಾಗಿದ ಇವರು ತಮ್ಮ ಕಲೆಯನ್ನು ಇನ್ನೂ ವಿಧ್ಯಾರ್ಥಿನಿಯರಲ್ಲಿ ಮೂಡಿಸಿ ಬೆಳಗಿಸುವ ಕಾರ್ಯ ಮಾಡುವದರೊಂದಿಗೆ ಶ್ರೀ ಖಾಸ್ಗತೇಶ್ವರ ಮಠದ ಇತಿಹಾಸ ಬಾಳಿ ಬೆಳಗಬೇಕೆಂಬ ಉದ್ದೇಶದೊಂದಿಗೆ ಮುನ್ನಡೆದ ವೇ. ಸಂಗಯ್ಯ ವಿರಕ್ತಮಠ ಇವರಲ್ಲಿ ಭರತನಾಟ್ಯ ಕಲೆಯನ್ನು ಕರಗತ ಮಾಡಿಕೊಳ್ಳುವ ವಿಧ್ಯಾರ್ಥಿ ವಿಧ್ಯಾರ್ಥಿನಿಯರಾಗಲಿ ಅವರ ಮೋ. 9980293888 ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.