ತಾಳಿಕೋಟೆ : ಶೇ.62.24ರಷ್ಟು ಮತದಾನ

ತಾಳಿಕೋಟೆ:ಮೇ.11: ಮುದ್ದೇಬಿಹಾಳ ವಿಧಾನ ಸಭಾ ಚುನಾವಣೆ ಸಂಬಂದಿಸಿ ಶೇ.62.24 ರಷ್ಟು ಮತದಾನವಾಗಿದ್ದು ತಾಳಿಕೋಟೆ ಪಟ್ಟಣದ ಟಿಪ್ಪು ನಗರ ಬಡಾವಣೆಯ ಮತಗಟ್ಟೆ 29 ರಲ್ಲಿ ವಿವಿಪ್ಯಾಟ್ ಸಾಯಂಕಾಲ 5-30 ಗಂಟೆಯ ಸುಮಾರಿಗೆ ತಾಂತ್ರಿಕ ತೊಂದರೆಯಿಂದ ಕ್ಯಕೊಟ್ಟಿದ್ದು ಬಿಟ್ಟಿರೆ ಬಹುತೇಕ ಈ ಭಾಗದಲ್ಲಿ ಶಾತಿಯುತ ಮತದಾನ ನಡೆದಿದೆ.

ಸಾಯಂಕಾಲ 5-30 ಗಂಟೆಯ ವೇಳೆ ಟಿಪ್ಪುನಗರ ಬಡಾವಣೆಯ ಮತಗಟ್ಟೆ 29ರಲ್ಲಿ ವಿವಿಪ್ಯಾಟ್ ಯಂತ್ರದಲ್ಲಿ ದೋಷಕಂಡು ಬಂದು ಮತದಾನವು ಸ್ಥಗಿತಗೊಂಡಿತ್ತು ನಂತರ ಅಧಿಕಾರಿಗಳು ಮತ್ತೊಂದು ವಿವಿಪ್ಯಾಟ್ ಜೋಡಿಸಿ ಮತಚಲಾವಣೆಗೆ ಉಳಿದಿದ್ದ 24 ಜನ ಮತದಾರರ ಮತದಾನಕ್ಕೆ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ.

ಒಟ್ಟಾರೆ ಮತದಾನವು ಶಾಂತಿಯುತವಾಗಿ ನಡೆದಿದ್ದು ಯಾವುದೇ ತರಹದ ಅಹೀತಕರ ಘಟನೆ ಜರುಗದಂತೆ ಪೊಲೀಸ್ ಬಂದೋಬಸ್ತ ಆಯೋಜಿಸಲಾಗಿತ್ತು.