ತಾಳಿಕೋಟೆ ವ್ಯಾಪಾರಿಪಡಮೂಲೆ ಸ್ಥಳವಾಗಿದೆ:ಡಿಎಸ್‍ಪಿ ಅರುಣ್

ತಾಳಿಕೋಟೆ:ಆ.4: ಪಟ್ಟಣವು ವ್ಯಾಪಾರಿ ಪಡಮೂಲೆ ಸ್ಥಳವಾಗಿದ್ದು ದಿನದಿಂದ ದಿನಕ್ಕೆ ಬರದಿಂದ ಬೆಳೆಯುತ್ತಾ ಸಾಗಿದ್ದು ಇಂತಹದ್ದನ್ನು ಲಕ್ಷೀಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ತಾಳಿಕೋಟಿಯ ಸಹಕಾರಿ ಬ್ಯಾಂಕ್ ಬಸ್ ಸೇಲ್ಟರ್‍ನ್ನು ನಿರ್ಮಿಸಿ ಅನುಕೂಲ ಕಲ್ಪಿಸಿರುವದು ಅತೀವ ಮಹತ್ವದ ಕೆಲಸ ಇದಾಗಿದೆ ಎಂದು ಡಿ.ಎಸ್.ಪಿ.ಅರುಣುಕುಮಾರ ಕೊಳೂರ ಅವರು ನುಡಿದರು.
ಬುಧವಾರರಂದು ಸ್ಥಳೀಯ ದಿ.ತಾಳಿಕೋಟಿ ಸಹಕಾರಿ ಬ್ಯಾಂಕ್ ನಿ,ದ ವತಿಯಿಂದ ಶ್ರೀ ಬಸವೇಶ್ವರ ಸರ್ಕಲ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್‍ಗಳಲ್ಲಿ ನಿರ್ಮಿಸಿದ ಬಸ್ ಸೇಲ್ಟರ್(ಬಸ್ ತಂಗುದಾಣ)ಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ತಾಳಿಕೋಟಿಯ ಸಹಕಾರಿ ಬ್ಯಾಂಕ್ ವತಿಯಿಂದ ಈ ಹಿಂದೆ ಅನೇಕ ಕೊಡುಗೆ ನೀಡಲಾಗಿದೆ ಈ ಕಾರಣದಿಂದಲೇ ಅದು ಜನಮೆಚ್ಚುಗೆಗೆ ಹಾಗೂ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ ಎಂದರು, ಈಗಾಗಲೇ ನಿರ್ಮಾಣಗೊಂಡಿರುವ ಬಸ್ ಸೇಲ್ಟರ್‍ಗಳಲ್ಲಿ ಪ್ರಯಾಣಿಕರಿಗೆ ಅಷ್ಟೇ ಅನುಕೂಲವಾಗುವಂತೆ ಆಗಬೇಕು ಅಂದರೆ ಅವರಿಗೆ ಬಸ್ಸಿನಲ್ಲಿ ಹತ್ತಲು ಇಳಿಯಲು ಅನುಕೂಲವಾಗುತ್ತದೆ ಎಂದರು. ಈ ಬಸ್ ಸೇಲ್ಟರ್‍ಗಳ ಎದುರಿಗೆ ಯಾವುದೇ ತರಹದ ವ್ಯಾಪಾರ ವೈಹಿವಾಟಗಳಾಗಲಿ ದ್ವಿಚಕ್ರ ಹಾಗೂ ಇನ್ನಿತರ ವಾಹನಗಳನ್ನಾಗಲಿ ನಿಲ್ಲಿಸಿ ಹೋಗುವ ವ್ಯವಸ್ಥೆಗಳಾಗಬಾರದು ಈ ವ್ಯವಸ್ಥೆಯಾದರೆ ಪೊಲೀಸ್ ಇಲಾಖೆ ಅಂತವರ ಮೇಲೆ ಕ್ರಮ ಕೈಗೊಳ್ಳುತ್ತದೆ ಎಂದರು. ಇದು ಅಲ್ಲದೇ ಸದರಿ ಸರ್ಕಲ್‍ಗಳಲ್ಲಿ ಪೊಲೀಸ್ ಚೌಕಿ ಮಾಡಲು ಬ್ಯಾಂಕಿನ ಅಧ್ಯಕ್ಷ ವಿಠ್ಠಲಸಿಂಗ್ ಹಜೇರಿ ಅವರು ತಿಳಿಸಿದ್ದಾರೆ ಈ ವ್ಯವಸ್ಥೆ ಕುರಿತು ಸೀಘ್ರದಲ್ಲಿಯೇ ಅಧಿಕಾರಿ ವರ್ಗದವರ ಗಮನಕ್ಕೆ ತಂದು ಕಾರ್ಯ ಮಾಡಲಾಗುವದೆಂದರು. ವಾಹನ ಚಲಾಯಿಸುವವರು ವಾಹನ ಚಲಿಸುವಾಗ ಎಡ ಭಲದಲ್ಲಿ ಲಕ್ಷ ಕೊಡಬೇಕು ಉದ್ದಟತನದಿಂದ ವಾಹನ ಚಲಾಯಿಸಿದರೆ ಅಂತವರ ಮೇಲೆಯೂ ಕ್ರಮ ಜರುಗಿಸಲಾಗುವದೆಂದು ಹೇಳಿದ ಡಿ.ಎಸ್.ಪಿ.ಕೊಳೂರ ಅವರು ಸಹಕಾರಿ ಬ್ಯಾಂಕಿನ ಸೇವಾ ಕಾರ್ಯದಂತೆ ಇನ್ನಿತರ ಬ್ಯಾಂಕ್‍ಗಳು ಕೂಡಾ ಇಂತಹ ಕಾರ್ಯಗಳಿಗೆ ಮುಂದಾಗಿ ಪಟ್ಟಣದ ಶ್ರೇಯೋಭಿವೃದ್ದಿಗೆ ಶ್ರಮಿಸಬೇಕೆಂದರು.
ವಿಜಯಪೂರ ಸರ್ಕಲ್‍ದಲ್ಲಿಯ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್‍ದಲ್ಲಿಯ ಬಸ್ ಸೇಲ್ಟರ್‍ಗಳನ್ನು ಉದ್ಘಾಟಿಸಿದ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ತಾಳಿಕೋಟಿ ಸಹಕಾರಿ ಬ್ಯಾಂಕಿನಿಂದ ಬಸ್ ಸೇಲ್ಟರ್ ನಿರ್ಮಾಣದ ಕಾರ್ಯವಾಗಿರುವದು ದೊಡ್ಡ ಕೆಲಸವಾದಂತಾಗಿದೆ ಸುಮಾರು 8 ಲಕ್ಷಕ್ಕೂ ಮಿಕ್ಕಿ ಖರ್ಚು ವೆಚ್ಚಆಗಿದೆ ಇಂತಹ ಸಾರ್ವಜನಿಕ ಕಾರ್ಯದಲ್ಲಿ ತೊಡಗಿದ ಸಹಕಾರಿ ಬ್ಯಾಂಕು ತಾಳಿಕೋಟೆ ಪಟ್ಟಣದಲ್ಲಿ ಹೆಸರು ಗಳಿಸಿದೆ ಎಂದರು. ಈ ಹಿಂದಿನ ಕಾಲದಲ್ಲಿ ರಾಜ ಅಶೋಕ ಚಕ್ರವರ್ತಿಯು ರಸ್ತೆಯ ಎಡಭಲದಲ್ಲಿ ಗಿಡಗಳನ್ನು ಬೆಳೆಸುತ್ತಿದ್ದರಲ್ಲದೇ ಕುಡಿಯುವ ನೀರಿನ ವ್ಯವಸ್ಥೆ ಇಂತಹ ಪರೋಪಕಾರದ ಕೆಲಸ ಮಾಡುತ್ತಾ ಸಾಗಿದ ಅವರ ಕೀರ್ತಿಯೂ ಅಜರಾಮರವಾಗಿದೆ ಅಂತಹದ್ದೇ ಸೇವಾ ಕಾರ್ಯದಲ್ಲಿ ಮುನ್ನಡೆದ ತಾಳಿಕೋಟೆಯ ಸಹಕಾರಿ ಬ್ಯಾಂಕ್ ಸಮಾಜಕ್ಕಾಗಿ, ಜನಹಿತ್ತಕ್ಕಾಗಿ ಏನು ಮಾಡಬೇಕೆಂಬುದು ಅರೀತುಕೊಂಡು ಇಂದು ಮಾಡಿದ್ದಾರೆ. ಈ ಹಿಂದಿನಿಂದಲೂ ಧರ್ಮ ದಾನ ಪರೋಪಕಾರದ ಕಾರ್ಯದಲ್ಲಿಯೂ ಮುಂಚೂಣಿಯಲ್ಲಿರುವ ಈ ಬ್ಯಾಂಕು ಅಧ್ಯಕ್ಷರಾದ ವಿಠ್ಠಲಸಿಂಗ್ ಹಜೇರಿ ಹಾಗೂ ಅವರ ಆಡಳಿತ ಮಂಡಳಿಯ ಹಾಗೂ ಸಿಬ್ಬಂದಿವರ ಒಗ್ಗಟ್ಟಿನ ಸಾಹಸಮಯ ಕಾರ್ಯವಾಗಿದೆ ಎಂದರು.
ಇನ್ನೋರ್ವ ತಾಳಿಕೋಟೆ ಬಸ್ ಘಟಕದ ವ್ಯವಸ್ಥಾಪಕರಾದ ಅಶೋಕಕುಮಾರ ಭೋವಿ ಅವರು ಮಾತನಾಡಿ ತಾಳಿಕೋಟೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬಿಸಿಲು ಮಳೆಯಿಂದ ರಕ್ಷಣೆ ಪಡೆಯಲು ಪ್ರಯಾಣಿಕರಿಗೆ ಎರಡು ಸ್ಥಾನಗಳಲ್ಲಿ ಬಸ್ ಸೇಲ್ಟರ್‍ನ್ನು ನಿರ್ಮಿಸಿ ಅನುಕೂಲ ಕಲ್ಪಿಸಿರುವದು ಸಂತಸ ತಂದಿದೆ ಎಂದರು. ತಾಳಿಕೋಟೆಯ ಸಹಕಾರಿ ಬ್ಯಾಂಕಿನ ಇಂತಹ ಕಾರ್ಯ ಚಟುವಟಿಕೆಗಳು ಈ ಹಿಂದಿನಿಂದಲೂ ನಡೆಯುತ್ತಾ ಬಂದಿರುವದು ಮೆಚ್ಚುವಂತಹ ಕಾರ್ಯಗಳಾಗಿವೆ ಪ್ರಯಾಣಿಕರ ಹಿತದೃಷ್ಠಿಯನ್ನು ಗಮನಿಸುತ್ತಾ ಸಾಗಿರುವದು ಹಾಗೂ ಸಾಗುತ್ತಿರುವದು ನಮ್ಮ ಉದೇಶವಾಗಿದೆ ತಾಳಿಕೋಟೆಯ ಸಾರಿಗೆ ಸಂಸ್ಥೆ ಬಸ್ ಘಟಕಕ್ಕೆ ತಾಳಿಕೋಟೆಯ ಜನತೆಯ ಸಹಕಾರತನದಿಂದಲೇ ನಿರ್ಮಾಣಗೊಂಡು ಘಟಕ ಸ್ಥಾಪನೆಯಾಗಿರುವದು ಎಲ್ಲರ ಮೆಚ್ಚುಗೆಗೆಪಾತ್ರವಾಗಿದೆ ಎಂದರು.ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿಠ್ಠಲಸಿಂಗ್ ಹಜೇರಿ ಅವರು ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಪರಶುರಾಮ ತಂಗಡಗಿ, ಮೊದಲಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಕೆ.ಸಿ.ಸಜ್ಜನ, ನಿರ್ದೇಶಕರಾದ ಆಯ್.ಬಿ.ಬಿಳೇಭಾವಿ, ಎಚ್.ಬಿ.ಬಾಗೇವಾಡಿ, ಡಿ.ಎಸ್.ಹೆಬಸೂರ, ಸಿ.ಎಸ್.ಯಾಳಗಿ, ಎನ್.ಆಯ್,ಚಿನಗುಡಿ, ಎಸ್.ಸಿ.ಪಾಟೀಲ, ಶ್ರೀಮತಿ ಆರ್.ಜಿ.ಕಾರ್ಜೋಳ, ಶ್ರೀಮತಿ ಆರ್.ಎಸ್.ಹಿರೇಮಠ, ಆರ್.ಬಿ.ಕಟ್ಟಿಮನಿ, ಎಸ್.ವಾಯ್.ಬರದೇನಾಳ, ವೃತ್ತಿಪರ ನಿರ್ದೇಶಕ ಆರ್.ಎ.ಮುರಗಿ, ಮಿಣಜಗಿ ಶಾಖೆಯ ಜಿ.ಕೆ.ಬಿರಾದಾರ, ಡಿ.ಕೆ.ಪಾಟೀಲ, ಎ.ಜಿ.ಪಾಟೀಲ, ಜಿ.ಎಸ್.ಕಶೆಟ್ಟಿ, ನಿವೃತ್ತ ವ್ಯವಸ್ಥಾಪಕ ಸಿ.ಬಿ.ತಂಗಡಗಿ, ಪುರಸಭೆ ಸದಸ್ಯರು, ಬ್ಯಾಂಕ್ ಸಿಬ್ಬಂದಿಗಳು, ನಾಗರಿಕರು ಪಾಲ್ಗೊಂಡಿದ್ದರು.
ಶ್ರೀಮತಿ ಎಸ್.ಬಿ.ದೇಸಾಯಿ ಸಂಗಡಿಗರು ಪ್ರಾರ್ಥಿಸಿದರು. ಪ್ರಭಾರಿ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಬಿ.ಕೆ.ಮಣೂರ ಸ್ವಾಗತಿಸಿ ನಿರೂಪಿಸಿದರು.