ತಾಳಿಕೋಟೆ ಭಾಗದಲ್ಲಿ ಶ್ರೀ ಖಾಸ್ಗತರ ಹೊರತಾಗಿ ದೇವರಿಲ್ಲಾ:ಇಂಗಳೇಶ್ವರಶ್ರೀ

ತಾಳಿಕೋಟೆ:ಸೆ.17: ತಾಳಿಕೋಟೆಯ ಶ್ರೀ ಖಾಸ್ಗತ ಮಹಾ ಶಿವಯೋಗಿಗಳು ಪೂಜಾ ನಿಷ್ಠರು, ವೈರಾಗಿಗಳಾದ ಅವರು ಭಕ್ತೋದ್ದಾರ ಜನೋದ್ದಾರ ಮಾಡುವದೇ ಅವರ ಕಾಯಕವಾಗಿತ್ತೆಂದು ಇಂಗಳೇಶ್ವರ ವಿರಕ್ತಮಠದ ಶ್ರೀ ಮ.ನಿ.ಪ್ರ.ಚನ್ನಬಸವ ಮಹಾಸ್ವಾಮಿಗಳು ನುಡಿದರು.
ಗುರುವಾರರಂದು ಪೂಜ್ಯ ಶ್ರೀ ಖಾಸ್ಗತ ಶಿವಯೋಗಿಗಳವರ 126ನೇಯ ಹಾಗೂ ಶ್ರೀ ಮ.ನಿ.ಪ್ರ. ವಿರಕ್ತ ಮಹಾಸ್ವಾಮಿಗಳವರ 8ನೇಯ ಪುಣ್ಯ ಸ್ಮರಣೋತ್ಸವ ಕುರಿತು ಶ್ರೀ ಮಠದಲ್ಲಿ ಏರ್ಪಡಿಸಲಾದ ಧರ್ಮ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಶ್ರೀಗಳು ಬಸವಣ್ಣನವರ ಕಾಲದಿಂದಲೂ ಶ್ರೀ ಮಠ ಮಾನ್ಯಗಳು ಫಲಾಪೇಕ್ಷೆ ಪಟ್ಟಿಲ್ಲಾ ಮಾನವನಲ್ಲಿಯ ಕೆಟ್ಟ ಕಲ್ಪನೆಗಳನ್ನು ಹಾಗೂ ದುರ್ಗುಣಗಳನ್ನು ಅಡಿಷಡ್ ವರ್ಗಗಳನ್ನು ಅಲ್ಲದೇ ಮಾನವನಲ್ಲಿರುವ ಅಲ್ಪ ಸ್ವಲ್ಪ ಜ್ಞಾನವನ್ನು ಪುಣ್ಯದ ಫಲವನ್ನು ನಾಶಪಡಿಸುವದನ್ನು ದೂರಿಕರಿಸುವ ಕಾರ್ಯ ಮಾಡಿವೆ ಅಂತಹ ಮಠಗಳಲ್ಲಿ ಶ್ರೀ ಖಾಸ್ಗತರ ಮಠ ಒಂದಾಗಿದೆ ಎಂದ ಶ್ರೀಗಳು ಶ್ರೀ ಖಾಸ್ಗತರ ಹಾಗೂ ವಿರಕ್ತಶ್ರೀಗಳ ಮಾರ್ಗದರ್ಶನದಲ್ಲಿ ಈಗೀನ ಶ್ರೀ ಸಿದ್ದಲಿಂಗ ದೇವರು ನಡೆಯುತ್ತಾ ಸಾಗಿದ್ದಾರೆ ಈ ಕಾರ್ಯದಿಂದಲೇ ತಾಳಿಕೋಟೆಯು ಭಕ್ತಿಯ ಊರಾಗಿ ಪರಿಣಮಿಸಿದೆ ಎಂದ ಅವರು ಶ್ರೀ ಖಾಸ್ಗತರ ಹೊರತಾಗಿ ಈ ಭಾಗದಲ್ಲಿ ಬೇರೆ ದೇವರಿಲ್ಲಾವೆಂಬದು ಈ ಭಾಗದ ಭಕ್ತರಲ್ಲಿದೆ ಎಂದರು.
ಸಾನಿದ್ಯ ವಹಿಸಿದ ಗುಳೇದಗುಡ್ಡ ಗಚ್ಚಿನಮಠದ ಶ್ರೀ ಮ.ನಿ.ಪ್ರ. ಕಾಶಿನಾಥ ಮಹಾ ಸ್ವಾಮಿಗಳು ಮಾತನಾಡಿ ಇಂದಿನ ದಿನಮಾನದಲ್ಲಿ ಆದ್ಯಾತ್ಮೀಕ ವಿಚಾರದಿಂದ ದೂರ ಉಳಿಯಲಾಗುತ್ತದೆ ಪುರಾಣ ಪುಣ್ಯಕಥೆಗಳು ಮಹಾತ್ಮರ ನೆನಪುಗಳು ದೂರಾಗಲಿಕ್ಕೆ ಹತ್ತಿವೆ ಎಂದು ವಿಷಾದಿಸಿದ ಶ್ರೀಗಳು ಪ್ರತಿಯೊಬ್ಬ ಮಾನವನಲ್ಲಿ ಧರ್ಮದ ವಿಚಾರ ಬರಬೇಕು ಆತ್ಮ ಸ್ವರೂಪವಿದ್ದ ವಸ್ತು ಶ್ರೀ ಖಾಸ್ಗತನನ್ನು ನೆನೆಯಬೇಕು ತನು ಮನ ಧನ ಇವೇಲ್ಲವೂ ನಾಶವಗುವುಗಳಾಗಿವೆ ಹುಟ್ಟೆಂಬ ಊರಿನಿಂದ ಸಾವೆಂಬ ಊರಿಗೆ ಹೊರಟಿದ್ದೇವೆಂಬುದನ್ನು ಅರೀತು ನಡೆಯಬೇಕೆಂದ ಶ್ರೀಗಳು ಈ ಭಾಗದ ಶ್ರೀ ಖಾಸ್ಗತರ ಶ್ರೀ ವಿರಕ್ತ ಶ್ರೀಗಳ ಪ್ರತಿರೂಪವೇ ಶ್ರೀ ಸಿದ್ದಲಿಂಗ ದೇವರಾಗಿದ್ದಾರೆ ಮಾನವರಾದ ನಾವು ಮನುಷ್ಯತ್ವದೊಂದಿಗೆ ನಡೆಯಬೇಕು ಹಡೆದ ತಂದೆ ತಾಯಿಗಳಲ್ಲಿ ಕಣ್ಣೀರು ಬರದಂತೆ ನೋಡಿಕೊಳ್ಳಬೇಕು ಕೆಟ್ಟದನ್ನು ಮಾಡಬೇಡಾ ಒಳ್ಳೆಯದ್ದನ್ನೇ ಮಾಡು ಎಂದು ಧರ್ಮ ಹೇಳುತ್ತದೆ ಎಂದರು.
ಇನ್ನೋರ್ವ ಸಾನಿದ್ಯ ವಹಿಸಿದ್ದ ನಾವದಗಿ ಬೃಹನ್ ಮಠದ ಶ್ರೀ ರಾಜೇಂದ್ರ ಒಡೆಯರ ಅವರು ಮಾತನಾಡಿ ಮಹಾತ್ಮರ ಹಾಗೂ ಶರಣರ ಪುಣ್ಯ ಸ್ಮರಣೆ ಮಾಡುವ ಉದ್ದೇಶ ಆದ್ಯಾತ್ಮಕ್ಕೆ ಶಕ್ತಿಯನ್ನು ಅಲ್ಲದೇ ಮಹಾನ್ ಶ್ರೀಗಳ ಪವಾಡವನ್ನು ಅರೀತು ಸನ್ಮಾರ್ಗದ ದಾರಿ ಕಾಣುವ ಉದ್ದೇಶವಾಗಿದೆ ಅಂತಹ ಮಹಾ ತಪಸ್ವಿಗಳಲ್ಲಿ ಶ್ರೀಖಾಸ್ಗತರು, ವಿರಕ್ತ ಶ್ರೀಗಳಾಗಿದ್ದಾರೆ ಅವರ ಮಾರ್ಗದತ್ತ ಈಗೀನ ಪೀಠಾಧಿಪತಿ ಶ್ರೀ ಸಿದ್ದಲಿಂಗ ದೇವರು ನಡೆದಿದ್ದಾರೆಂದ ಶ್ರೀಗಳು ಭರತಭೂಮಿ ಇದು ಮಹ ಸಂತ ಸತ್ಪುರುಷರು ನಡೆದಾಡಿದ ಪುಣ್ಯಭೂಮಿ ಇದಾಗಿದೆ ಈ ಭೂಮಿಯಲ್ಲಿ ವಿದೇಶಿಗರು ಬರುವಾಗ ದೇವತಾ ಭೂಮಿ ಎಂಬ ಭಾವನೆಯೊಂದಿಗೆ ನಮಿಸಿ ಬರುತ್ತಿದ್ದಾರೆಂಬ ಘಟನೆಯೊಂದನ್ನು ಭಕ್ತ ಸಮೂಹಕ್ಕೆ ತಿಳಿಸಿದ ಶ್ರೀಗಳು ಆದ್ಯಾತ್ಮ ಚಿಂತನೆಯನ್ನು ಮಾಡಿ ಅದರ ಸವಿಯನ್ನು ಸವಿದು ಜೀವನ ಸಾರ್ಥಕಪಡಿಸಿಕೊಳ್ಳುವ ಕಾರ್ಯ ಮಾಡಬೇಕೆಂದರು.
ಇನ್ನೋರ್ವ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಶ್ರೀ ಖಾಸ್ಗತ ಮಹಾ ಶಿವಯೋಗಿಗಳು ಹಾಗೂ ಶ್ರೀ ವಿರಕ್ತ ಶ್ರೀಗಳು ತಪಸ್ಸು ಗೈದಿರುವದು ಜನೋದ್ದಾರ ಹಿತಕ್ಕಾಗಿ ಆಗಿದೆ ಅವರು ಅಸಂಖ್ಯಾತ ಪವಾಡ ಗೈದಿದ್ದಾರೆಂದ ಶ್ರೀಗಳು ಮಾನವನ ನಿಜವಾದ ಆಸ್ತಿ ಒಳ್ಳೆಯತನವಾಗಿದೆ ಹಣ, ಮನೆ, ಹೊಲ, ಇವ್ಯಾವವೂ ನಿಜವಾದ ಆಸ್ತಿಗಳಲ್ಲಾ ಯಾಕೆಂದರೆ ಒಳ್ಳೆಯತನ ವಿಲ್ಲದಿದ್ದರೂ ಇವುಗಳಿಂದ ಮಾರಕವಾಗಿ ಕಷ್ಟ ನಷ್ಟಗಳು ಉಂಟಾಗಿ ಮಾನಸಿಕತೆ ಕಳೆದು ಹೋಗಬಹುದೆಂದು ಕಿರು ಕಥೆಯೊಂದನ್ನು ಹೇಳಿದ ಶ್ರೀಗಳು ಒಳ್ಳೆಯತನ ವೆಂಬುದರಲ್ಲಿ ಅಪಾರ ಶಕ್ತಿವಿದೆ ಆ ಶಕ್ತಿ ಕಣ್ಣಿಗೆ ಕಾಣಿಸುವದಿಲ್ಲಾ ಒಳ್ಳೆಯತನದ ಪ್ರತಿಫಲವೂ ಕೂಡಾ ಕಾಣಿಸುವದಿಲ್ಲಾ ಆದುದ್ದರಿಂದಲೇ ಒಳ್ಳೆಯತನಕ್ಕೆ ಹೆಚ್ಚು ಪ್ರಾದ್ಯಾನ್ಯತೆ ಕೊಡದೇ ಅದನ್ನು ಅಳವಡಿಸಿಕೊಳ್ಳದೇ ಮೋಸ ಹೋಗುತ್ತಿರುವದು ಕಾರಣವಾಗಿದೆ ಎಂದರು.ಉಪನ್ಯಾಸಕ ಎ.ಬಿ.ಇರಾಜ ಪ್ರಾಸ್ಥಾವಿಕ ಮಾತನಾಡಿದರು.
ಇದೇ ಸಮಯದಲ್ಲಿ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಅವರಿಗೆ, ಪುರಸಭೆ ನೀರು ಸರಬರಾಜು ಮುಖ್ಯಸ್ಥ ಶಂಕರಗೌಡ ಬಿರಾದಾರ, ಆರೋಗ್ಯ ಇಲಾಖೆಯ ಎಸ್.ಎ.ಘತ್ತರಗಿ, ಹಾಗೂ ಉಪನ್ಯಾಸಕ ಎಸ್.ಎಸ್.ನಾಡಗೌಡ ಅವರಿಗೆ ಶ್ರೀಮಠದ ವತಿಯಿಂದ ಶ್ರೀಗಳು ಸನ್ಮಾನಿಸಿ ಗೌರವಿಸಿದರು.
ಇದೇ ಸಮಯದಲ್ಲಿ ಶ್ರೀಶೈಲ ಹಿರೇಮಠ ಅವರು ರಚಿಸಿದ “ಕರುಳು ಬಾ ಬೆಳಕೆ” ಎಂಬ ಸಿಡಿಯನ್ನು ಉಬಯ ಶ್ರೀಗಳು ಬಿಡುಗಡೆಗೊಳಿಸಿದರು.
ವೇದಿಕೆಯ ಮೇಲೆ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಚಲನಚಿತ್ರ ನಟ ರಾಜು ತಾಳಿಕೋಟಿ, ಉಪಸ್ಥಿತರಿದ್ದರು.
ಗವಾಯಿಗಳಾದ ಗುಂಡಣ್ಣ ಹಂದಿಗನೂರ, ದೀಪಕಸಿಂಗ್ ಹಜೇರಿ, ಸಂಗಡಿಗರು ಭಕ್ತಿ ಗೀತೆಯೊಂದಿಗೆ ಸ್ವಾಗತಿಸಿದರು.
ಆರ್.ಬಿ.ದಾನಿ ನಿರೂಪಿಸಿ ವಂದಿಸಿದರು.