ತಾಳಿಕೋಟೆ ಭಕ್ತರ ಶಕ್ತಿ ಕೇಂದ್ರವಾಗಿದೆ:ಕರಭಂಟನಾಳಶ್ರೀ

ತಾಳಿಕೋಟೆ:ನ.8: ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆ ಕುರಿತು ಜನ ಸಾಗರದಲ್ಲಿ ಜನತೆ ತಂಡ ತಂಡೋಪವಾಗಿ ಬರುತ್ತಲಿದೆ ಪಾದಯಾತ್ರಿಕರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲು ಐನಾಪೂರದಲ್ಲಿ 3 ಲೋಡ ರೋಟ್ಟಿಗಳನ್ನು ನೀಡಿದಲ್ಲದೇ ಊರು ಗ್ರಾಮದವರು 5 ಕೀಲೋ ಮೀಟರ್ ಅಂತರದಿಂದ ಸ್ವಾಗತಿಸಿಕೊಂಡು ಬರಮಾಡಿಕೊಂಡಿದ್ದನ್ನು ನೋಡಿದರೆ ಶಿವನು ಕೆಳಗಿಳಿದು ಬಂದಂತಾಗಿತ್ತೆಂದು ಕರಭಂಟನಾಳ ಶ್ರೀಗಳು ಪಾದಯಾತ್ರೆಯ ಕುರಿತು ಸ್ಥಿತಿಗತಿ ಕುರಿತು ವಿವರಿಸಿದರು.

ಪಟ್ಟಣದ ಶ್ರೀಶೈಲ ಜಗದ್ಗುರುಗಳು ಕೈಕೊಂಡಿರುವ ಪಾದಯಾತ್ರೆ ಕುರಿತು ರಾಜವಾಡೆಯಲ್ಲಿ ಏರ್ಪಡಿಸಲಾದ ಶ್ರೀಶೈಲ ಶಿವದರ್ಶನ ಪ್ರವಚನದ 2ನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಶ್ರೀಗಳು ತಾಳಿಕೋಟೆಗೆ ಬರುವ ಜಗದ್ಗುರುಗಳನ್ನು ಸ್ವಾಗತಿಸಲು ಎಲ್ಲ ಭಕ್ತಾಧಿಗಳು ಮುಂದಾಗಬೇಕು ತಾಳಿಕೋಟೆ ಪಟ್ಟಣವು ಧರ್ಮದ ತಳಹದಿಯಿಂದ ಬೆಳೆದುಬಂದಿದೆ ಒಳ್ಳೆಯ ನೀತಿಯ ಒಳ್ಳೆಯ ವಿದ್ಯಾಶಕ್ತಿಯ ತಳಹದಿಯಿಂದ ತಾಳಿಕೋಟೆ ಪಟ್ಟಣ ಬೆಳೆದಿದೆ ಎಂದು ಹೇಳಿದ ಶ್ರೀಗಳು ಆಗಮಿಸಲಿರುವ ದಿನದಂದು ಕಳಸ, ಕುಂಭ, ವಾಧ್ಯ ವೈಭವಗಳೊಂದಿಗೆ ಸ್ವಾಗತಿಸಬೇಕೆಂದ ಅವರು ಎಲ್ಲರನ್ನು ಕರೆದುಕೊಂಡು ಪಕ್ಷ ಬೇದ ಮರೆತು, ಜಾತಿ ಬೇದ ಮರೆತು ಮಾಡುವ ಕಾರ್ಯಕ್ರಮ ಇದಾಗಿದೆ ಎಂದು ನೆರೆದ ಭಕ್ತ ಸಮೂಹಕ್ಕೆ ವಿವರಿಸಿದರು.

ಇನ್ನೋರ್ವ ಸಾನಿದ್ಯ ವಹಿಸಿದ ಕೈಲಾಸಪೇಟೆಯ ಶ್ರೀ ಬಸವಪ್ರಭು ದೇವರು ಮಾತನಾಡಿ ಮಹಾತ್ಮರ ದರ್ಶನದಿಂದ ಮೋಕ್ಷ ದೊರೆಯುತ್ತದೆ ಮಹಾತ್ಮರ ನೆಲೆಸಿದ ಸ್ಥಳಗಳಲ್ಲಿ ಹಾಯ್ದು ಜಗದ್ಗುರುಗಳು ಶ್ರೀಶೈಲಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದಾರೆ ಅವರ ದರ್ಶನದಿಂದ ಅನುಗ್ರಹ ಪಡೆಯಲು ಸಾದ್ಯವಾಗುತ್ತದೆ ಎಂದರು. ಮನಸ್ಸು ಬುದ್ದಿ ಇವುಗಳು ದುರಸ್ಥಿಯಾಗಬೇಕಾದರೆ ಪ್ರವಚನಕ್ಕೆ ಬಂದರೆ ಮಾತ್ರ ಸಾದ್ಯವೆಂದು ಪುರಾಣ ಪ್ರವಚನ ಕೇಳುವದರಿಂದಾಗುವ ಜೀವನೋದ್ದಾರ ಕುರಿತು ವಿವರಿಸಿದರು.

ಇನ್ನೋರ್ವ ಮುಸ್ಲಿಂ ಧರ್ಮ ಗುರುಗಳಾದ ಶ್ರೀ ಸೈಯದಶಕೀಲ ಅಹ್ಮದ ಖಾಜಿ ಅವರು ಮಾತನಾಡಿ ಶ್ರೀಶೈಲ ಜಗದ್ಗುರುಗಳ ಆಗಮಿಸಲಿರುವ ಪಾದಯಾತ್ರೆಯಲ್ಲಿ ನಾವು ಕೂಡಾ ಆಗಮಿಸಿ ಸ್ವಾಗತಿಸುತ್ತೇವೆ ತಾಳಿಕೋಟೆ ಪಟ್ಟಣಕ್ಕೆ ಬರುವ ಎಲ್ಲ ಶ್ರೀಗಳು ಶ್ರೀಖಾಸ್ಗತೇಶ್ವರ ಶ್ರೀಗಳ ಪರಚಯದಿಂದಲೇ ಆಗಮಿಸುತ್ತಿದ್ದಾರೆಂದು ಹೇಳಿದ ಅವರು ಒಳ್ಳೆಯ ಜಗದೋದ್ದಾರಕ್ಕಾಗಿ ಶ್ರೀಗಳು ಕೈಕೊಂಡ ಪಾದಯಾತ್ರೆ ಎಲ್ಲರೂ ಒಗ್ಗೂಡಿ ಯಶಸ್ವಿ ಮಾಡೋಣವೆಂದರು.

ಪ್ರವಚನಕಾರರಾದ ಕೊಣ್ಣೂರ ಹಿರೇಮಠದ ಪೂಜ್ಯಶ್ರೀ ಆಯ್.ಬಿ.ಹಿರೇಮಠ ಅವರು ಮಾತನಾಡಿ ಐತಿಹಾಸಿಕ ಪಾದಯಾತ್ರೆಯನ್ನು ಶ್ರೀಶೈಲ ಜಗದ್ಗುರುಗಳು ಕೈಕೊಂಡಿದ್ದಾರೆ ಪಂಚಪೀಠ ಇತಿಹಾಸದಲ್ಲಿ ಮನಕುಲದ ಇತಿಹಾಸದಲ್ಲಿ ಆದಿ ಶಂಕರಾಚಾರ್ಯರ ನಂತರ ಅಡ್ಡ ಫಲ್ಲಕ್ಕಿಯಲ್ಲಿ ಮೆರೆಯುತ್ತಿರುವ ಜಗದ್ಗುರುಗಳು ದೂರದಿಂದ ಪಾದಯಾತ್ರೆ ಕೈಕೊಂಡಿದ್ದು ಆ ಕ್ಷೇತ್ರ ಸುಕ್ಷೇತ್ರವಾಗಬೇಕು ಇವರು ಪಾದವಿಟ್ಟ ಸ್ಥಳವೆಲ್ಲವೂ ಉದ್ದಾರವಾಗುವಂತಾಗಬೇಕು ಎಲ್ಲ ಧರ್ಮಗಳಿಗೆ ಸಮಾನತೆ ಹೇಳುವ ಸಿಖರ ಶ್ರೀಶೈಲ ಸಿಖರವಾಗಿದೆ ವ್ಯಾಸರು ಹೇಳಿದಂತೆ ಶ್ರೀಶೈಲವೆನ್ನುವದನ್ನು ದರ್ಶನ ಮಾಡಿದರೆ ಮೋಕ್ಷವಾಗುತ್ತದೆ ಅಂತೆಯೇ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಶ್ರೀರಾಮ ಚಂದ್ರನು ಪತ್ನಿ ಸೀತೆಯೊಂದಿಗೆ ಲಕ್ಷ್ಮಣ ಅವರು ಸಾವಿರ ಸಾವಿರ ಲಿಂಗಗಳನ್ನು ಸೃಷ್ಠಿಸಿರುವದು ನೊಡಲಿಕ್ಕೆ ಶ್ರೀಶೈಲದಲ್ಲಿ ಸಿಗುತ್ತವೆ ಎಂದರು. ರಾಮನು ಹೇಳಿದ್ದಾನೆ ಜನನ ಜನ್ಮಭೂಮಿ ಎಂದು ಹುಟ್ಟಿರುತ್ತಕ್ಕಂತಹ ನೆಲ ಮತ್ತು ಹಡೆದ ತಾಯಿ ಎರಡೂ ಎಲ್ಲಕ್ಕಿಂತ ಮಿಗಿಲೆಂದು ಹೇಳುತ್ತಾರೆಂದು ಶ್ರೀರಾಮ ಚಂದ್ರನ ಇತಿಹಾಸ ವಿವರಿಸಿದ ಅವರು ಭಾರದ್ವಜರೊಂದಿಗೆ ಆದ ಮಾತುಕಥೆಗಳನ್ನು ವಿವರಿಸಿದರಲ್ಲದೇ ಯಾವುದೇ ಬಾಳು ಒಡೆಗಳಾಗಬಾರದು ಹಿಡಿಗಳಾಗಬೇಕೆಂದು ಕಿರುಕಥೆಗಳೊಂದನ್ನು ಹೇಳಿದ ಶ್ರೀಗಳು ಪುರಾಣ ಪ್ರವಚನ ಮಹಾತ್ಮರ ವಿಚಾರ ಕೇಳುವದರಿಂದ ಸಂಸಾರ ವ್ಯವಸ್ಥಿತವಾಗಿ ನಡೆಯುತ್ತದೆ ಎಂದು ಕಥೆಯೊಂದನ್ನು ವಿವರಿಸಿದರು.

ಇದೇ ಸಮಯದಲ್ಲಿ ಜಗದ್ಗುರುಗಳು ಕೈಕೊಂಡ ಪಾದಯಾತ್ರೆಯ ಸವಿಸ್ತಾರ ಕಾರ್ಯಕ್ರಮದ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು.

ವೇದಿಕೆಯ ಮೇಲೆ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಗುಂಡಕನಾಳ ಹಿರೇಮಠದ ಶ್ರೀ.ಷ.ಬ್ರ.ಗುರುಲಿಂಗ ಶಿವಾಚಾರ್ಯರು ಉಪಸ್ಥಿತರಿದ್ದರು.

ಶಿಕ್ಷಕ ಅಶೋಕ ಹಂಚಲಿ ಸ್ವಾಗತಿಸಿ ನಿರೂಪಿಸಿದರು.