ತಾಳಿಕೋಟೆ ಬಸ್ ನಿಲ್ದಾಣದಲ್ಲಿ ಮತದಾನ ಜಾಗೃತಿ ಅಭಿಯಾನ

ವಿಜಯಪುರ, ಏ.29: ರಾಜ್ಯ ವಿಧಾನಸಭೆಗೆ ಮೇ 10 2023 ರಂದು ಜರಗುವ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಇಂದು ತಾಲೂಕಾಡಳಿತ, ತಾಲೂಕಾ ಪಂಚಾಯತ ಹಾಗೂ ತಾಲೂಕಾ ಸ್ವೀಪ್ ಸಮಿತಿ, ತಾಳಿಕೋಟೆ ರವರ ಸಹಯೋಗದಲ್ಲಿ ತಾಳಿಕೋಟಿ ಬಸ್ ನಿಲ್ದಾಣದಲ್ಲಿ ಸೇಲ್ಪಿ ಕಾರ್ನರ್ ಅಳವಡಿಸಿ ಮತದಾನ ಜಾಗೃತಿ ಮೂಡಿಸಲಾಯಿತು.
ಈ ವೇಳೆ ತಾಲೂಕಾ ಐಇಸಿ ಸಂಯೋಜಕರಾದ ಮಲಕಪ್ಪ.ಬಿ.ಎಮ್ ಅವರು ಮಾತನಾಡಿ, ಮತದಾನ ವಿಷಯದಲ್ಲಿ ಯಾರು ಮೇಲಲ್ಲ, ಯಾರು ಕೀಳಲ್ಲ, ಎಲ್ಲರಿಗೂ ಒಂದೇ ರೀತಿಯಾಗಿ ಮತ ಚಲಾಯಿಸುವ ಹಕ್ಕಿರುತ್ತದೆ. ಹೀಗಾಗಿ ಮತದಾನ ಮಾಡುವುದರಿಂದ ಯಾರು ವಂಚಿತರಾಗಬಾರದು. ಸಾರ್ವಜನಿಕರು ಮತದಾನ ವಿಷಯದಲ್ಲಿ ಹಿಂಜರಿಯದೇ ಮುಕ್ತವಾಗಿ ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಮತದಾನ ಜಾಗೃತಿ ಅಭಿಯಾನವು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಹಮ್ಮಿಕೊಳ್ಳುತ್ತಿದ್ದು ತಾಲೂಕು ಮಟ್ಟದ ಬಸ್ ನಿಲ್ದಾಣದಲ್ಲಿ ನೂರಾರು ಗ್ರಾಮದ ಜನ ಬರುವದರಿಂದ ಇಂದು ಈ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿದೆ ಎಂದರು. ಆ ಮೂಲಕ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಅದರ ಭಾಗವಾಗಿ ಇಂದು ಬಸ್ ನಿಲ್ದಾಣದಲ್ಲಿ ನಿಲ್ಲಿಸಿರುವ ಸೇಲ್ಪಿ ಕಾರ್ನರ್ ಬಳಿಸಿಕೊಂಡು ಸಾರ್ವಜನಿಕರು ಸೇಲ್ಪಿ ತಗೆದುಕೊಂಡು ತಮ್ಮ ವ್ಯಾಟ್ಸಾಪ್ ಮತ್ತು ಫೇಸ್ ಬುಕ್ ಸ್ಟೇಟಸ್ ಇಡುವ ತಾವು ತಿಳಿದುಕೊಂಡ ಮಾಹಿತಿಯನ್ನು ತಮ್ಮ ಸ್ನೇಹಿತರಿಗೂ ತಲುಪಿಸಿ ಮತದಾನದ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿಯ ಆಡಳಿತ ಸಹಾಯಕ ತೌಷಿಪ್ ಗೌಡಿಗೊಳ, ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳು, ತಾಲೂಕು ಪಂಚಾಯತಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.