ತಾಳಿಕೋಟೆ ಪಟ್ಟಣದ ಅಭಿವೃದ್ದಿಗೆ 40 ಕೋಟಿ:ಶಾಸಕ ನಡಹಳ್ಳಿ

ತಾಳಿಕೋಟೆ:ನ.21: ಪಟ್ಟಣದ ಸೌಂದರ್ಯಕರಣದ ದೃಷ್ಠಿಯಿಂದ ಅಭಿವೃದ್ದಿಯಲ್ಲಿ ವೇಗಗೊಳಿಸಲು ಈಗಾಗಲೇ ತಾಳಿಕೋಟೆ ಅಭಿವೃದ್ದಿಗೆ 40 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಹೇಳಿದರು.

ರವಿವಾರರಂದು ಪಟ್ಟಣದ ವಿವಿಧ ವಾರ್ಡಗಳಲ್ಲಿ 12 ವಿಭಾಗಗಳಲ್ಲಿ 2022-23 ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ 4ನೇ ಹಂತ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಇವತ್ತು 10 ಕೋಟಿ ರೂ.ಯ ರಸ್ತೆ ಅಭಿವೃದ್ದಿಗೆ ನಗರೋತ್ಥಾನ ಯೋಜನೆಗೆ ಚಾಲನೆ ನೀಡಿದ್ದೇನೆ ಇನ್ನೂ 10 ಕೋಟಿ ರೂ. ಅಪ್ರೂಲ್ ಆಗಿದೆ ಸೋಮವಾರ ಟೆಂಡರ್ ಕರೆಯಲಾಗುತ್ತಿದ್ದು 15 ದಿನಗಳಲ್ಲಿ ಟೆಂಡರ್ ಪೈನಲ್ ಆಗಿ 1 ತಿಂಗಳಲ್ಲಿ ಮತ್ತೇ 10 ಕೋಟಿ ರೂ. ಪೂಜೆ ಮಾಡಲಿದ್ದೇನೆ ಹಳೆಯ ಊರಿನ ರಸ್ತೆಯ ಪರಸ್ಥಿತಿ ಬಹಳೇ ಕೆಟ್ಟಿತ್ತು ಅದನ್ನು ಸರಿಪಡಿಸಲು ಸ್ವಲ್ಪ ಸಮಯ ತೆಗೆದುಕೊಂಡಿದೆ ಯಾಕೆಂದರೆ ಅನುದಾನ ಬರೇ ಶ್ರೀಮಂತರ ವಾರ್ಡಿಗೆ ಹಾಕ್ತಾರೆ ಎಂಬ ಆರೋಪ ಇತ್ತು ಅದನ್ನು ಸರಿಪಡಿಸಿ ಕೊಳ್ಳಲು ಸಮಯ ತೆಗೆದುಕೊಂಡಿದೆ ಈಗ 6 ತಿಂಗಳಲ್ಲಿ 3 ನೇ ವಾರ್ಡು ಮತ್ತು 4ನೇ ವಾರ್ಡು ಗೆ ವಿಶೇಷ ಅನುದಾನ ಕೊಡ್ತಾ ಇದ್ದೇನೆ ಅಲ್ಲದೇ 1.50 ಕೋಟಿ ರೂ. ನಗರೋತ್ತಾರನದಲ್ಲಿ ಮಂಜೂರು ಮಾಡಿಸಿದ್ದೇನೆ ಕೆಲಸ ಪ್ರಾರಂಭ ಹಂತದಲ್ಲಿದೆ ವಿಸ್ವಾಸದಿಂದ ಹೇಳುತ್ತೇನೆ ಮುಂದಿನ 3, 4 ವರ್ಷದಲ್ಲಿ ಯಾವದೇ ವಾರ್ಡಿನಲ್ಲಿ ರಸ್ತೆ, ಕುಡಿಯುವ ನೀರು, ಚರಂಡಿ, ಲೈಟಿನ್ ವ್ಯವಸ್ಥೆ ಯಾವುದೇ ಕೂಡಾ ಉಳಿಯಬಾರದು ಅನುದಾನ ತಂದ ಮೇಲೆ ಪ್ರೋಸಿಜರ್ ಫಾಲೋ ಮಾಡೋಕೆ 6 ತಿಂಗಳ ಬೇಕಾಗುತ್ತದೆ ನಗರೋತ್ತಾನ ಅಮೌಂಟ್ ಬಂದು 2 ತಿಂಗಳಾಯ್ತು ಟೆಂಡರ್ ಕರೆದು ಅಗ್ರೀಮೆಂಟ್ ಮಾಡಿಸಿ ಕೆಲಸ ಚಾಲು ಮಾಡಿಸೋಕೆ ಸ್ವಲ್ಪ ಟೈಮ್ ಹಿಡಿದಿದೆ ಮುಖ್ಯ ರಸ್ತೆಯ ಕೆಲಸಗಳು ಮುಗಿದಿವೆ ಡ್ರಿವ್ಹಾಡರ್ ನಡುವೆ ಗ್ರೀಲಿಂಗ್ ಸಿಸ್ಟಮ್ ಮಾಡಿಸ್ತಾ ಇದ್ದೇವೆ ಅಲ್ಲದೇ ಗಾರ್ಡನ್ ಟೆಂಡರ್ ಆಗಿದೆ ಅಗ್ರೀಮೆಂಟ್ ಆಗಿದೆ 4, 5 ದಿನದಲ್ಲಿ ಕೆಲಸ ಪ್ರಾರಂಭವಾಗಲಿದೆ 1 ತಿಂಗಳಲ್ಲಿ 10 ಕೋಟಿ ರೂ. ಪೂಜೆ ಮಾಡಲಿದ್ದೇನೆ ಇದು ಅಲ್ಲದೇ ತಾಳಿಕೋಟೆ ಪಟ್ಟಣಕ್ಕೆ ಇನ್ನೂ 10 ಕೋಟಿ ಅನುದಾನ ತರುವಂತಹ ಕೆಲಸ ಮಾಡುತ್ತೇನೆ ತಾಳಿಕೋಟೆ ಬಹಳೇ ಬೆಳೆದಿದೆ ಒಂದೇ ಸರಿಗೆ ಮಾಡಲು ಕಷ್ಟವಾದರೂ ಸಾಕಷ್ಟು ಅನುದಾನವನ್ನು ತಂದಿದ್ದೇನೆ ತಾಳಿಕೋಟೆಗೆ ಒಟ್ಟು 40 ಕೋಟಿ ರೂ. ಅನುದಾನ ತಂದಿದ್ದೇನೆ ಬಹುಷಃ ನನಗೆ ತಿಳಿದಂತೆ ತಾಳಿಕೋಟೆ ಹುಟ್ಟಿದ ಮೇಲೆ ಇಲ್ಲಿಯವರೆಗೂ ಇಷ್ಟೊಂದು ಅನುದಾನ ಯಾರೂ ತಂದಿದ್ದಿಲ್ಲಾ ಇಡೀ ಮುದ್ದೇಬಿಹಾಳ ಧೋಳೆದ್ದು ಹೋಗುತ್ತಿತ್ತು ಈಗ ಕ್ಲೀನ್ ಸಿಟಿಯಾಗಿ ಮಾರ್ಪಡುತ್ತಿದೆ 3 ವರ್ಷದಲ್ಲಿ 24><7 ವಿದ್ಯುತ್ ಒದಗಿಸಲು 1230 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ ಎಲ್ಲ ಹಳೆಯ ಕಂಬಗಳನ್ನು ಹೊಸದಾಗಿ ಹಾಕುವದು ಮತ್ತು ಎಲ್ಲ ಲೈನ್ ಹೊಸದಾಗಿ ಹಾಕಿಸುವ ಕಾರ್ಯ ಮಾಡಿದ್ದೇನೆ ಮುದ್ದೇಬಿಹಾಳ ಕ್ಷೇತ್ರ ಸಂಪೂರ್ಣವಾಗಿ ನೀರಾವರಿಯಾಗಬೇಕೆಂಬ ಕನಸ್ಸನ್ನು ಹೊತ್ತುಕೊಂಡಿದ್ದೇನೆ ವಿಶೇಷವಾಗಿ ಡೋಣಿ ನಧಿಯಲ್ಲಿ ಸವಳು ನೀರು ಹರಿಯುತ್ತದೆ ಅದು ಸಿಹಿ ನೀರು ಡೋಣಿಯಾಗಿ ಪರಿವರ್ತನೆಯಾಗಲಿದೆ ನನ್ನ ಕ್ಷೇತ್ರದಲ್ಲಿಯ ಎಲ್ಲ ಕೇರೆಗಳನ್ನು ತುಂಬಿಸುವಂತಹ ಕೆಲಸ ಮಾಡಿದ್ದೇನೆ ಇದರ ಪರಿಣಾಮ ಒಂದು ಕೇರೆಯ ಸುತ್ತಮುತ್ತ ಸುಮಾರು 4 ರಿಂದ 5 ಕೀಲೋ ಮೀಟರ್ ವರೆಗೆ ಹಚ್ಚು ಹಸಿರಾಗಿದೆ ಎಲ್ಲಿ ನೋಡಿದರೂ ಅಲ್ಲಿ ಕಬ್ಬನ್ನು ಬೆಳೆದಿದ್ದಾರೆ ಪಡೇಕನೂರ ಗ್ರಾಮದಲ್ಲಿ ಕಬ್ಬು ಬೆಳೆದ ರೈತರು ಒಂದೇ ಊರಿನವರು 84 ಕೋಟಿ ರೂ. ಕಬ್ಬಿನ ಬಿಲ್ಲ್ ಪಡೆದುಕೊಂಡಿದ್ದಾರೆ ಆರ್ಥಿಕವಾಗಿ ಬದಲಾವಣೆಯಾಗಬೇಕಾದರೆ ನೀರು, ವಿದ್ಯುತ್ ಸರಿಯಾಗಿರಬೇಕು ಮುಂದೆ ಇನ್ನೂ ನನಗೊಂದು ಗುರಿ ಇದೆ ಮಹಿಳೆಗೆ ಒಂದು ಹಸು ಯೋಜನೆಯನ್ನು ಜಾರಿಗೆ ತರುತ್ತಿದ್ದೇನೆ ಯಾಕೆ ಎಂದರೆ ಮಹಿಳೆ ಆರ್ಥಿಕವಾಗಿ ಸಬಲತೆ ಯಾಗಬೇಕೆಂಬ ಉದ್ದೇಶವಾಗಿದೆ ತಾಳಿಕೋಟೆಗೆ 24><7 ಕುಡಿಯುವ ನೀರಿನ ಯೋಜನೆ ಮಂಜೂರಾಗಿದೆ ಮರು ಎಷ್ಟಿಮೆಂಟ್ ಮಾಡಿ ಕಳುಹಿಸಿದ್ದೇನೆ ಸ್ವಲ್ಪ ತಡವಾದರೂ ಚಿಂತೆ ಇಲ್ಲಾ ರಸ್ತೆ ಹಾಳಾಗಬಾರದು ಎಂಬ ಉದ್ದೇಶದಿಂದ ರಸ್ತೆಯ ಎರಡೂ ಬದಿಗೂ ಪೈಪುಗಳನ್ನು ಹಾಕಲು ಇದರಲ್ಲಿ ಅಳವಡಿಸಲಾಗಿದೆ 1150 ಮನೆಗಳನ್ನು ಮಂಜೂರು ಮಾಡಿಸಿದ್ದೇನೆ 474 ಮನೆಗಳ ವರ್ಕ ಆರ್ಡರ್ ಕೊಟ್ಟಾಗಿದೆ 600 ಮನೆಗಳ ಟೆಂಡರ್ ಆಗಿದೆ ಇದು ಅಲ್ಲದೇ 200 ಮನೆಗಳ ಮಂಜೂರು ಆಗಿದೆ 28 ಗ್ರಾಂ ಪಂಚಾಯ್ತಿಗಳಿಗೆ 4000 ಮನೆಗಳನ್ನು ಮಂಜೂರು ಮಾಡಿಸಿದ್ದೇನೆ ತಾಳಿಕೋಟೆಯ ಸಮೂದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ 100 ಬೆಡ್ಡಿನ ಆಸ್ಪತ್ರೆ ಮಂಜೂರು ಮಾಡಿಸಲಿಕ್ಕೆ ಯೋಜನೆ ಇಟ್ಟುಕೊಂಡಿದ್ದೇನೆ ಇದು ಅಲ್ಲದೇ ಮಿನಿ ವಿಧಾನಸೌದ ಮಂಜೂರು ಮಾಡಿಸಿದ್ದೇನೆ ಮುಂದಿನ 10 ವರ್ಷಗಳ ಅವಧಿಯಲ್ಲಿ 10 ಸಾವಿರ ಯುವಕರಿಗೆ ಉದ್ಯೋಗ ಕೊಡಬೇಕೆಂಬ ಯೋಜನೆಯನ್ನು ಹಾಕಿಕೊಂಡಿದ್ದೇನೆ ಎಂದರು. ಜಿಲ್ಲೆಗೆ 72 ಶುಗರ್ ಪ್ಯಾಕ್ಟಿರಿಗಳು ಮಂಜೂರಾಗಿವೆ ಅದರಲ್ಲಿ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ 6 ರಿಂದ 8 ಖಾರ್ಕಾನೆಗಳು ಬರಲಿವೆ ಎಂದರು. ಮಹಿಳೆಯರ ಸಹಕಾರಿ ಸಂಘಗಳನ್ನು ಭಲಪಡಿಸುವ ಉದ್ದೇಶದಿಂದ ಒಂದು ಊರಿಗೆ ಒಂದು ಮಹಿಳಾ ಸಂಘಕ್ಕೆ 20 ಲಕ್ಷ ರೂ. ಸರ್ಕಾರದ ಸೆಕ್ಯೂರೆಟಿ ಮೇಲೆ ಕೊಡಲಿದೆ ಯುವಕರ ಸಂಘಕ್ಕೂ 20 ಲಕ್ಷ ಸಾಲ ಸಿಗಲಿದೆ ಇದರಿಂದ ಆರ್ಥಿಕವಾಗಿ ಬೆಳಯಲು ಅನುಕೂಲವಾಗಲಿದೆ ಎಂದರು. ಮಹಿಳಾ ಭವನ ಕಟ್ಟಬೇಕೆಂಬ ಆಲೋಚನೆ ಇದೆ ಎರಡು ವಾರ್ಡಿನ ನಡಬರಕೆ 1 ಭವನ ಕಟ್ಟಬಹುದು ಇದರಿಂದ ಅಲ್ಲಿ ಗಾರ್ಮೇಂಟ್ ಮಾಡಬಹುದು ಇನ್ನಿತ್ತರ ಯಾವುದಾದರೂ ಒಂದು ಕೆಲಸ ಮಾಡಬಹುದು ಎಂದರು. ನಾನು ಪ್ರತಿವರ್ಷ 400 ಶಾಲೆಗಳಿಗೆ ಬೆಟ್ಟಿ ಕೊಡುತ್ತಿದ್ದೇನೆ ಇದರಲ್ಲಿ ಮಹಿಳೆಯರ ಸಂಖ್ಯೆ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ ಮುಂದಿನ ದಿನಮಾನದಲ್ಲಿ ಹೆಣ್ಣು ಮಕ್ಕಳು ಸಾಧನೆ ಮಾಡಲಿದ್ದಾರೆಂಬುದು ಕಂಡುಬರುತ್ತಿದೆ ಹೀಗಾಗಿ ಸರ್ಕಾರ ಮಹಿಳೆಯರಿಗೆ ಉದ್ಯೋಗಕ್ಕಾಗಿ ಒತ್ತು ಕೊಡುತ್ತಿದೆ ಎಂದರು.

  ಪಟ್ಟಣದ ಸಣ್ಣ ಓಣಿಗಳಲ್ಲಿಯೂ ಸಹ ಉತ್ತಮ ರಸ್ತೆ, ಚರಂಡಿಗಳು ನಿರ್ಮಾಣವಾಗಲಿದ್ದು ಮಾದರಿ ಪಟ್ಟಣವಾಗಲಿದೆ. ಮನಗೂಳಿ ಬಿಜಾಪೂರ ರಾಜ್ಯ ಹೆದ್ದಾರಿಗೆ 69 ಕೋಟಿ ಅನುದಾನ ಬಿಡುಗಡೆಯಾಗಿದೆ. ತಾಳಿಕೋಟೆ ನೂತನ ತಾಲೂಕು ಕೇಂದ್ರವಾಗಿದ್ದು ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಅತಿ ಹೆಚ್ಚು ಅನುದಾನವನ್ನು ಪಟ್ಟಣಕ್ಕೆ ನೀಡಲಾಗಿದೆ. ರೈತರಿಗೆ ಅನಕೂಲವಾಗಿಸುವ ನಿಟ್ಟಿನಲ್ಲಿ ಬಸರಕೋಡ ಗ್ರಾಮದಲ್ಲಿ ಸಕ್ಕರೆ ಹಾಗೂ ಏಥಿನಾಲ ಕಾರ್ಖಾನೆ ನಿಮಾಣ ಮಾಡಲು ಮುಂಧಾಗಿದ್ದು ಇದರಿಂದ ಸುಮಾರು 10 ಸಾವಿರ ಯುವಕರಿಗೆ ಉದ್ಯೋಗ ದೊರಕಲಿದೆ. ಈಗಾಗಲೇ ಕಾರ್ಖಾನೆ ಆರಂಭಕ್ಕೆ ಒಪ್ಪಿಗೆ ದೊರೆಕಿದ್ದು ಶಿಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವದು ಎಂದರು.
  ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ಉಪಾಧ್ಯಕ್ಷ ಮುಸ್ತಫಾ ಚೌದ್ರಿ, ಸದಸ್ಯರಾದ ವಾಸುದೇವ ಹೆಬಸೂರ, ಅಣ್ಣಪ್ಪ ಜಗತಾಪ, ಮುದಕಪ್ಪ ಬಡಿಗೇರ, ನಿಂಗು ಕುಂಟೋಜಿ, ದುಂಡಪ್ಪಗೌಡ ಪಾಟೀಲ ಜಯಸಿಂಗ ಮೂಲಿಮನಿ, ಮುತ್ತಪ್ಪ ಚಮಲಾಪೂರ, ಅಕ್ಕಮಹಾದೇವಿ ಕಟ್ಟಿಮನಿ, ಕಾಸಿನಾಥ ಕುಂಬಾರ, ಮಂಜೂರ ಬೇಪಾರಿ, ಶರಣಗೌಡ ಗೋಟಖಂಡ್ಕಿ, ರಾಘು ವಿಜಾಪೂರ, ಮುಖ್ಯಾಧಿಕಾರಿ ಸುರೇಶ ನಾಯಕ, ಜಿಪಂ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ, ಶಿವಶಂಕರ ಹಿರೇಮಠ, ರಾಜುಗೌಡ ಕೋಳೂರ, ಮುಖಂಡರಾದ ಮಲ್ಲನಗೌಡ ಪೊಲೀಸ್‍ಪಾಟೀಲ, ರಾಜುಗೌಡ ಗುಂಡಕನಾಳ, ಮುತ್ತು ಜಾಗೀರದಾರ, ಸೋಮು ಬಿರಾದಾರ, ಪ್ರಕಾಶ ಹಜೇರಿ, ರವಿ ಕಟ್ಟಿಮನಿ, ಎಮ್.ಎಸ್.ಸರಶೇಟ್ಟಿ, ಕಾಶಿನಾಥ ಮುರಾಳ ಮೊದಲಾದವರು ಇದ್ದರು.

ಪಟ್ಟಣದ 40 ಕೋಟಿ ರೂ. ಅನುದಾನ ತಂದು ಅಭಿವೃದ್ದಿಗೆ ಶಕ್ತಿ ಮೀರಿ ಶ್ರಮಿಸಲಾಗುತ್ತದೆ. ಗಾರ್ಡನ್‍ಗಳ ಅಭಿವೃದ್ದಿಗೆ ಸೀಘ್ರದಲ್ಲಿಯೇ ಚಾಲನೆ ನೀಡಲಿದ್ದೇನೆ ಪಕ್ಷ ಬೇಧ ಮಾಡದೇ ತಾಳಿಕೋಟೆಯ ಎಲ್ಲ ವಾರ್ಡುಗಳಲ್ಲಿ ರಸ್ತೆ, ಚರಂಡಿ, ಒಳಗೊಂಡು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಅಭಿವೃದ್ದಿಗೆ ಜನರ ಸಹಕಾರ ಮುಖ್ಯವಾಗಿದೆ.

                      - ಎ.ಎಸ್.ಪಾಟೀಲ ನಡಹಳ್ಳಿ ಶಾಸಕ,