ತಾಳಿಕೋಟೆ : ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ

ತಾಳಿಕೋಟೆ:ಆ.31: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೀ ಯೋಜನೆಯಾದ ಗ್ರಹ ಲಕ್ಷ್ಮೀ ಯೋಜನೆಗೆ ಪುರಸಭೆ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ ಹಾಗೂ ತಾಲೂಕಾ ತಹಶಿಲ್ದಾರ ಶ್ರೀಮತಿ ಕೀರ್ತಿ ಚಾಲಕ ಅವರು ಬುಧವಾರರಂದು ಚಾಲನೆ ನೀಡಿದರು.

ಪುರಸಭೆಯ ನೇತೃತ್ವದಲ್ಲಿ ಪಟ್ಟಣದ ಪುರಸಭೆ ಸಭಾಭವನ ಮತ್ತು ವಿಠ್ಠಲ ಮಂದಿರ ಸಭಾಭವನ, ರಾಜವಾಡೆ, ಅಲ್ಲದೇ ಟಿಪ್ಪು ನಗರ ಬಡಾವಣೆಗಳಲ್ಲಿ ಏಕಕಾಲಕ್ಕೆ ಚಾಲನೆಗೆ ವ್ಯವಸ್ಥೆ ಮಾಡಲಾಗಿತ್ತಲ್ಲದೇ ಮತ್ತು ರಾಜ್ಯ ಸರ್ಕಾರದ ಮುಖ್ಯಮಂತ್ರಿ ರಾಜ್ಯದಲ್ಲಿಯ ಎಲ್ಲ ಮನೆಯ ಯಜಮಾನಿ ಮಹಿಳೆಗೆ 2000 ರೂ. ನೀಡುವ ಗ್ರಹ ಲಕ್ಷ್ಮೀ ಯೋಜನೆಯ ಚಾಲನೆಯನ್ನು ವಿಕ್ಷೀಸಲು ಎಲ್‍ಇಡಿ ಮೂಲಕ ವ್ಯವಸ್ಥೆ ಮಾಡಲಾಗಿತ್ತು.

ಈ ಸಮಯದಲ್ಲಿ ಪುರಸಭೆ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ ಅವರು ಮಾತನಾಡಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೀ ಯೋಜನೆಯಾಗಿರುವ ಗ್ರಹ ಲಕ್ಷ್ಮೀ ಯೋಜನೆಗೆ ಇಂದು ರಾಜ್ಯಾಧ್ಯಂತ ಚಾಲನೆ ನೀಡಲಾಗಿದೆ ಅದರಂತೆ ತಾಳಿಕೋಟೆ ಪಟ್ಟಣದಲ್ಲಿಯೂ ಕೂಡಾ ಚಾಲನೆ ಸಿಕ್ಕಿದೆ ಪ್ರತಿ ತಿಂಗಳು ಸರ್ಕಾರವು ತಿಳಿಸಿದಂತೆ ಮನೆಯ ಯಜಮಾನಿ ಮಹಿಳೆಗೆ ನೇರವಾಗಿ 2000 ಸಾವಿರ ರೂ. ಹಣ ತಲುಪಲಿದೆ ಈಗಾಗಲೇ ಗ್ರಹ ಲಕ್ಷ್ಮೀ ಯೋಜನೆಗೆ ಸಂಬಂದಿಸಿ ಆಯ್ಕೆಗೊಂಡ ಎಲ್ಲ ಮಹಿಳೆಯರಿಗೆ ಮಂಜೂರು ಪತ್ರವನ್ನು ಪುರಸಭೆಯ ವತಿಯಿಂದ ನೀಡಲಾಗಿದೆ ಎಂದರು.

ರಾಜ್ಯ ಸರ್ಕಾರದ ಗ್ರಹ ಲಕ್ಷ್ಮೀ ಯೋಜನೆಗೆ ಚಾಲನೆಯನ್ನು ಎಲ್‍ಇಡಿ ಮೂಲಕ ನೂರಾರು ಮಹಿಳೆಯರು ವಿಕ್ಷೀಸಿದರು.

ಈ ಸಮಯದಲ್ಲಿ ಪುಸರಭೆ ಸದಸ್ಯರಾದ ಶ್ರೀಮತಿ ಅಕ್ಕಮಹಾದೇವಿ ಕಟ್ಟಿಮನಿ, ಮುಸ್ತಫಾ ಚೌದ್ರಿ, ಸೈದಾಬಿ ಚಿತ್ತರಗಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಡಿ.ವ್ಹಿ.ಪಾಟೀಲ, ಅಣ್ಣಾಜಿ ಜಗತಾಪ, ಮೈಹಿಬೂಬ ಲಾಹೋರಿ, ಹುಸೇನ ಜಮಾದಾರ, ಪುರಸಭೆ ಆರೋಗ್ಯ ಅಧಿಕಾರಿ ಶಿವಾನಂದ ಜುಮನಾಳ, ಆರ್.ವಾಯ್.ನಾರಾಯಣಿ, ಎಇಇ ಶಂಕರಗೌಡ ಪಾಟೀಲ, ಸುರೇಶ ಅಮರಣ್ಣವರ, ರಾಜೇಂದ್ರ ಸುಗಂದಿ, ಡಿ.ಬಿ.ಜಾನ್ವೇಕರ, ಶ್ರೀಪಾದ ಜೋಶಿ, ಸಿದ್ದಲಿಂಗ ಚೊಂಡಿಪಾಟೀಲ, ಶಂಕರಗೌಡ ಬಿರಾದಾರ, ಸಿದ್ದಪ್ಪ ಕೊಳ್ಳಿ, ಎಸ್.ಎ.ಘತ್ತರಗಿ, ಐ.ಎಚ್.ಮಕಾಂದಾರ, ಮುತ್ತು ಕಟ್ಟಿಮನಿ, ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಮತ್ತು ಆಶಾ ಕಾರ್ಯಕರ್ತೆಯರು, ಮೊದಲಾದವರು ಇದ್ದರು.