ತಾಳಿಕೋಟೆ ಅಭಿವೃದ್ದಿಗೆ ವಿಶೇಷ ಅನುದಾನ ತಂದಿದ್ದೇನೆ:ಶಾಸಕ ನಡಹಳ್ಳಿ

ತಾಳಿಕೋಟೆ:ಜ.9: ಪಟ್ಟಣದ ಅಭಿವೃದ್ದಿ ದೃಷ್ಠಿಕೋನದಿಂದ ಸರ್ಕಾರದಿಂದ ಸಾಕಷ್ಟು ಅನುದಾನವನ್ನು ತರುವದರ ಜೊತೆಗೆ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ ಅದರ ಜೊತೆಗೆ ಪಟ್ಟಣದ ಸೌಂದರ್ಯ ಕರಣದ ದೃಷ್ಠಿಯಿಂದ ಡಿವೇಡರ್‍ನಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದೇನೆಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಹೇಳಿದರು.

ರವಿವಾರರಂದು ಪಟ್ಟಣದ ಶಿವಾಜಿ ಮಹಾರಾಜ ವೃತ್ತದಲ್ಲಿ ಡಿವೇಡರ್‍ಗಳಲ್ಲಿ ಸಸಿ ನಡುವ ಕಾರ್ಯಕ್ರಮಕ್ಕೆ ಪೂಜೆ ಸಲ್ಲಿಸಿ ಸಸಿಗಳಿಗೆ ನೀರುಣಿಸಿ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ರಸ್ತೆಯ ಮಧ್ಯದಲ್ಲಿ ನಿರ್ಮಿಸಲಾಗಿರುವ ಡಿವೇಡರ್‍ಗಳಲ್ಲಿ ಸುಮಾರು 2 ಕೀಲೋ ಮೀಟರ್ ಪ್ರಮುಖ ರಸ್ತೆಗಳಲ್ಲಿ ಸಸ್ಯಗಳನ್ನು ನೆಡುವ ಮುಖಾಂತರ ಇಡೀ ತಾಳಿಕೋಟೆ ನಗರವನ್ನು ಒಂದು ಸುಂದರವಾದಂತಹ ಹಸಿರಿನಿಂದ ಕಂಗೊಳಿಸುವಂತಹ ಕಾರ್ಯ ಮಾಡಬೇಕೆಂಬ ದೃಷ್ಠಿಯಿಂದ ವಿಶೇಷವಾದ ಅನುದಾನವನ್ನು ತಂದು ಕೆಲಸವನ್ನು ಪ್ರಾರಂಬಿಸಲಾಗಿದೆ ಇಂದು ಸಸಿಗಳ ನಡುವ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ಕೊಟ್ಟಿದ್ದೇನೆ ಇದು ಅಲ್ಲದೇ ನಗರದಲ್ಲಿರುವ ಎಲ್ಲ ಉದ್ಯಾನವನಗಳನ್ನು ಅಭಿವೃದ್ದಿಗೊಳಿಸಲು 2.50 ಕೋಟಿ ರೂ. ಬಿಡುಗಡೆಯಾಗಿದೆ ಈಗಾಗಲೇ ಟೆಂಡರ್ ಆಗಿದೆ ಸ್ವಲ್ಪ ದಿನಗಳಲ್ಲಿ ಅಗ್ರಿಮೆಂಟ್ ಆದ ಕೂಡಲೇ ಉದ್ಯಾನವನಗಳ ಅಭಿವೃದ್ದಿಗೆ ಚಾಲನೆ ನೀಡಲಿದ್ದೇನೆಂದ ಅವರು ಈಗಾಗಲೇ ಮುದ್ದೇಬಿಹಾಳದಲ್ಲಿ ಗಿಡಗಳನ್ನು ನೆಡಲಾಗಿದೆ ಸುಂದರವಾಗಿ ಕಾಣುತ್ತಿದೆ ಅದೇ ರೀತಿ ತಾಳಿಕೋಟೆ ನಗರವನ್ನು ಸುಂದರ ನಗರವನ್ನಾಗಿ ಮಾಡಲು ರಸ್ತೆಯ ಮದ್ಯದ ಡಿವೇಡರ್‍ಗಳಲ್ಲಿ ಹಾಗೂ ಎರಡು ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುವದರೊಂದಿಗೆ ಅವುಗಳನ್ನು ರಕ್ಷಣೆ ಮಾಡಿ ಬೆಳೆಸುವಂತಹ ಕಾರ್ಯಕ್ಕೆ ಅರಣ್ಯ ಇಲಾಖೆಗೆ ಸೂಚನೆಯನ್ನು ಕೊಟ್ಟಿದ್ದೇನೆ ವಿಶೇಷವಾಗಿ ಆಂದ್ರ ಪ್ರದೇಶ ರಾಜ್ಯದ ರಾಜಮುದ್ರೆಯಿಂದ ಗಿಡಗಳನ್ನು ತರಿಸಿದ್ದೇನೆ ಸಣ್ಣ ಗಿಡಗಳನ್ನು ಹಚ್ಚಿದರೆ ಬೆಳವಣಿಗೆಗೆ ಕುಂಠಿತವಾಗಬಾರದು ಎಂಬ ಉದ್ದೇಶದಿಂದ ರಾಜಮುದ್ರೆಯಿಂದ ಗಡಿಗಳನ್ನು ತರಿಸಿ ಹಚ್ಚಿಸುವಂತಹ ಕಾರ್ಯಕ್ಕೆ ಮುಂದಾಗಿದ್ದೇನೆ ಎಂದ ಅವರು ತಾಳಿಕೋಟೆ ನಗರದ ವ್ಯಾಪಾರಸ್ಥರಿಗೆ ಮನವಿಯನ್ನು ಮಾಡುತ್ತೇನೆ ಡಿವೇಡರ್‍ಗಳ ಮದ್ಯದಲ್ಲಿ ಜಾಹೀರಾತು ಬೋಲ್ಡ ಹಚ್ಚುವದು ಯಾರು ದಯಮಾಡಿ ಮಾಡಬಾರದು ಈ ವಿಷಯಕ್ಕೆ ಸಂಬಂದಪಟ್ಟಂತೆ ಪುರಸಭೆ ಅಧಿಕಾರಿಗಳಿಗೆ ಸೂಚನೆಯನ್ನೂ ಕೂಡಾ ಕೊಟ್ಟಿದ್ದೇನೆ ಯಾರಾದರು ಬೋರ್ಡ ಇನ್ನಿತರಗಳನ್ನು ಡಿವೇಡರ್‍ಗಳಲ್ಲಿ ಕಟ್ಟಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಸೂಚನೆಯನ್ನು ಕೊಟ್ಟಿದ್ದೇನೆ ಯಾವುದೇ ಕಾರಣಕ್ಕೂ ನಮ್ಮ ನಗರದ ಸೌಂದರ್ಯಕರಣ ಹಾಳಾಗಾಬಾರದು ಇದಕ್ಕೆ ಎಲ್ಲ ವ್ಯಾಪಾರಸ್ಥರು ಸಹಕರಿಸಬೇಕೆಂದು ಮನವಿ ಮಾಡಿದರು.

ಸಬ್ ರಜಿಸ್ಟರ್ ಕಚೇರಿ ಮಂಜೂರು

ತಾಳಿಕೋಟೆ ಪಟ್ಟಣದ ಅಭಿವೃದ್ದಿಯ ದೃಷ್ಠಿಯಿಂದ ಅತ್ಯವಶ್ಯಕತೆ ಇದ್ದಂತಹ ಉಪನೊಂದಣಿ ಕಚೇರಿ(ಸಬ್ ರಜಿಸ್ಟರ್)ಯನ್ನು ವಿಶೇಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡಹಾಕುತ್ತಾ ಬಂದಿದ್ದೆ ಅದರಂತೆ ಸರ್ಕಾರದ ಮಾನದಂಡಗಳ ಪ್ರಕಾರ ತಾಳಿಕೋಟೆಗೆ ಸಬ್ ರಜಿಸ್ಟರ್ ಕಚೇರಿ ಅವಶ್ಯಕತೆ ಇದೆ ಎಂಬುದನ್ನು ಮನವರಿಕೆ ಮಾಡಿದ್ದೆ ನನ್ನ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಬ್ ರಜಿಸ್ಟರ್ ಕಚೇರಿ ಮಂಜೂರು ಮಾಡುವದರ ಜೊತೆಗೆ ಕಚೇರಿಗೆ ಅವಶ್ಯವಿರುವ ಹುದ್ದೆಗಳನ್ನು ಸಹ ಸೃಜಿಸಿ ಆದೇಶ ಹೊರಡಿಸಿದ್ದಾರೆ ಅವರು ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ನನ್ನ ಮುದ್ದೇಬಿಹಾಳ ಮತಕ್ಷೇತ್ರದ ಅಭಿವೃದ್ದಿಗೆ ನಾನು ಕೇಳಿದಷ್ಟು ಅನುದಾನವನ್ನು ಮುಖ್ಯಮಂತ್ರಿಗಳು ನೀಡುತ್ತಾ ಬಂದಿದ್ದಾರೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳ ಅವಧಿಯಲ್ಲಿ ಇಷ್ಟೊಂದು ಅನುದಾನ ತರಲು ಯಾರಿಂದಲೂ ಸಾದ್ಯವಾಗಿಲ್ಲಾ ಮುಂದಿನ ದಿನಗಳಲ್ಲಿ ಇನ್ನೂ ಅನುದಾನಕ್ಕೆ ಬೇಡಿಕೆ ಸರ್ಕಾರದ ಮುಂದೆ ಇಟ್ಟಿದ್ದೇನೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆಂದು ಹೇಳಿದ್ದಾರೆಂದರು.

ಈ ಸಮಯದಲ್ಲಿ ಬಿಜೆಪಿ ಮುಖಂಡರುಗಳಾದ ಪುರಸಭಾ ಸದಸ್ಯ ವಾಸುದೇವ ಹೆಬಸೂರ, ಮಲ್ಲಪ್ಪಣ್ಣ ಕಟ್ಟಿಮನಿ, ಜೈಸಿಂಗ್ ಮೂಲಿಮನಿ, ಶಿವಶಂಕರ ಹಿರೇಮಠ, ಪರಶುರಾಮ ಕಟ್ಟಿಮನಿ, ಅಣ್ಣಾಜಿ ಜಗತಾಪ, ಶರಣಗೌಡ ಗೊಟಗುಣಕಿ, ಪ್ರಕಾಶ ಹಜೇರಿ, ಪುರಸಭಾ ಅಧ್ಯಕ್ಷ ಸಂಗಮೇಶ ಇಂಗಳಗಿ, ಈರಯ್ಯ ಹಿರೇಮಠ, ವ್ಹಿ.ಬಿ.ಲೋಕರೆ, ನಿಂಗು ಕುಂಟೋಜಿ, ಅಶೋಕ ಚಿನಗುಡಿ, ಮಲ್ಲು ಮೇಟಿ, ಗೋವಿಂದಸಿಂಗ್ ಮೂಲಿಮನಿ, ಗಂಗು ಕೊಕಟನೂರ, ಮಂಜು ಬಡಿಗೇರ, ಸೀತಾರಾಮ ಮೂಲಿಮನಿ, ಅಶೋಕ ವಠಾರ, ನಾಗರಾಜ ಬಳಿಗಾರ, ವೀರೇಶ ಸಾಸನೂರ, ಶಿವು ಹಿರೇಮಠ, ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಹಾಗೂ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಮೊದಲಾದವರು ಇದ್ದರು.