ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಜಾತ್ರಾ ಮಹೋತ್ಸವ

ತಾಳಿಕೋಟೆ:ಜೂ.18: ಸ್ಥಳೀಯ ಶ್ರೀ ಖಾಸ್ಗತೇಶ್ವರ ಮಹಾ ಶಿವಯೋಗಿಗಳ ಜಾತ್ರಾ ಮಹೋತ್ಸವವು ಪ್ರತೀ ವರ್ಷದಂತೆ ಈ ಸಲ ಜೂನ 23 ರಿಂದ ಜುಲೈ 3 ಸೋಮವಾರದವರೆಗೆ ವಿಜೃಂಭಣೆಯಿಂದ ಜರುಗಲಿದೆ.

     ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ಮಹಾ ಸ್ವಾಮಿಗಳವರ ಘನ ಅಧ್ಯಕ್ಷತೆಯಲ್ಲಿ ಜರುಗಲಿರುವ ಈ ಜಾತ್ರಾ ಮಹೋತ್ಸವದಲ್ಲಿ ಪ್ರತೀ ದಿನ ಬೆಳಿಗ್ಗೆ 6 ಘಂಟೆಗೆ ಶ್ರೀ ಖಾಸ್ಗತೇಶ್ವರ ಕತರ್ುೃ ಗದ್ದುಗೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮವನ್ನು ವೇ|| ವಿಶ್ವನಾಥ ವಿರಕ್ತಮಠ ಅವರು ನೆರವೇರಿಸುವರು.
    ಒಂಬತ್ತು ದಿನಗಳ ಕಾಲ ಜರುಗಲಿರುವ ಶ್ರೀ ನಿಜಗುಣ ಶಿವಯೋಗಿಗಳ ಶಾಸ್ತ್ರ ಪ್ರವಚನವು ಬೆಳಿಗ್ಗೆ 8-30 ರಿಂದ 9-30 ರವರೆಗೆ ಸಾಯಂಕಾಲ 6 ರಿಂದ 7 ಘಂಟೆಯವರೆಗೆ ಜರುಗುವದು. ಶಾಸ್ತ್ರ ಪ್ರವಚನವನ್ನು ಕೋರವಾರ ಚೌಕಿಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು, ಗಡಿ ಸೋಮನಾಳದ ಇಂದುಧರ ಮಹಾಸ್ವಾಮಿಗಳು, ಶಿವಶರಣೆಯರಾದ ಶಾಂತಮ್ಮ ಕೋಳೂರ, ದಾನಮ್ಮ ಮಠ, ಇಂದುಮತಿ ಬಬಲೇಶ್ವರ, ಆನಂದಾಶ್ರಮ ಶಾಸ್ತ್ರ ಸಮಿತಿ ಬಳಗದವರು ನಡೆಸಿಕೊಡುವರು.
    ಜೂನ 23 ಶುಕ್ರವಾರರಂದು ಪ್ರಾರಂಭಗೊಳ್ಳಲಿರುವ ಸಪ್ತ ಭಜನಾ ಕಾರ್ಯಕ್ರಮವು ಜೂನ 30 ಗುರುವಾರರಂದು ಮಂಗಲಗೊಳ್ಳುವದು. ಈ ಭಜನಾ ಕಾರ್ಯಕ್ರಮದಲ್ಲಿ ತಾಳಿಕೋಟೆ, ಗೊಟಗುಣಕಿ, ಮೈಲೇಶ್ವರ, ಬಿಳೇಭಾವಿ, ಹಗರಟಗಿ, ಬ.ಸಾಲವಾಡಗಿ, ಕೋ.ಬೂದಿಹಾಳ, ವಂದಗನೂರ, ಬೋಳವಾಡ, ಬೊಮ್ಮನಹಳ್ಳಿ, ಕಾ.ಬೂದಿಹಾಳ, ಅಸ್ಕಿ, ಬನ್ನೆಟ್ಟಿ, ಹೊಸಳ್ಳಿ, ಗುಂಡಲಗೇರಿ, ತುಂಬಗಿ, ಪತ್ತೇಪೂರ, ಗಡಿಸೋಮನಾಳ, ಕ್ಯಾತನಾಳ, ಹೂವಿನಹಳ್ಳಿ, ಮಿಣಜಗಿ, ಮೂಕಿಹಾಳ, ಕಲ್ಲದೇವನಹಳ್ಳಿ, ಹಡಗಿನಾಳ, ಹರನಾಳ, ಗುತ್ತಿಹಾಳ, ಶಿವಪೂರ, ಬಾವೂರ, ಬಳವಾಟ, ಲಿಂಗದಳ್ಳಿ, ಬೇನಾಳ, ಇಂಗಳಗೇರಿ, ತಾರನಾಳ, ಪಡೇಕನೂರ, ಬ್ಯಾಕೋಡ, ಸಾಲವಾಡಗಿ, ಜಮ್ಮಲದಿನ್ನಿ, ಕೂಚಬಾಳ, ಬಳಗಾನೂರ, ಕೊಡಗಾನೂರ, ಬ್ಯಾಲ್ಯಾಳ, ತಮದಡ್ಡಿ, ಚಿಕ್ಕನಹಳ್ಳಿ, ಆಲ್ಯಾಳ, ಕೊಣ್ಣೂರ, ಶರಣಸೋಮನಾಳ, ಸಿಂದಗೇರಿ, ಚೊಕಾವಿ, ನೀರಲಗಿ, ನಾವದಗಿ, ಗುಂಡಕನಾಳ, ತಳ್ಳಳ್ಳಿ, ಜಲಪೂರ, ಶಳ್ಳಗಿ, ಮಡಿಕೇಶ್ವರ, ಲಕ್ಕುಂಡಿ, ವಸಂತಾಪೂರ, ವಡವಡಗಿ, ಬಿಂಜಲಬಾವಿ, ಪೀರಾಪೂರ, ಹೂವಿನಹಳ್ಳಿ, ಭಂಟನೂರ, ಅಮಲ್ಯಾಳ, ಚಿಂಚೋಳಿ, ಕಾರಗನೂರ, ನಾಗರಾಳಹುಲಿ, ಎಂ.ಬೊಮ್ಮನಹಳ್ಳಿ, ಬಂಗಾರಗುಂಡ ಮೊದಲಾದ ಗ್ರಾಮಗಳನ್ನೊಳಗೊಂಡು ಸುಮಾರು 150 ಕ್ಕೂ ಮೇಲ್ಪಟ್ಟು ಭಜನಾ ಮಂಡಳಿಯವರು ಪಾಲ್ಗೊಂಡು ಶಿವ ಭಜನೆ ಸೇವೆ ಸಲ್ಲಿಸುವರು.
   ದಿ. 29 ಗುರುವಾರರಂದು ಸಾಯಂಕಾಲ 5 ಘಂಟೆಯಿಂದ ಶ್ರೀ ಖಾಸ್ಗತೇಶ್ವರ ಮಹಾ ಶಿವಯೋಗಿಗಳವರ ಧ್ವಜದ ಮೆರವಣಿಗೆಯು ಶ್ರೀ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು ಸಕಲ ವಾಧ್ಯ ವೈಭವಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ಶ್ರೀ ಮಠಕ್ಕೆ ತಲುಪಿ ಅಲ್ಲಿ ಧ್ವಜದ ಪ್ರತಿಷ್ಟಾಪನಾ ಕಾರ್ಯಕ್ರಮ ನೆರವೇರುವುದು.
   ದಿ. 30 ಶುಕ್ರವಾರರಂದು ಬೆಳಿಗ್ಗೆ 4 ಘಂಟೆಗೆ ಪ್ರಾರಂಭಗೊಳ್ಳಲಿರುವ ಪ್ರಭಾತಪೇರಿಯೊಂದಿಗೆ ಮೊಸರು ಗಡಿಗೆ(ಗೋಪಾಲ ಕಾವಲಿ) ಒಡೆಯುವ ಕಾರ್ಯಕ್ರಮವು ನಸುಕಿನ 5-30 ಘಂಟೆಗೆ ಜರುಗುವುದು. ಅಂದೇ ಸಪ್ತ ಭಜನಾ ಕಾರ್ಯಕ್ರಮ ಮಂಗಲಗೊಳ್ಳುವುದಲ್ಲದೇ ಮದ್ಯಾಹ್ನ 12 ಘಂಟೆಗೆ ಮಹಾಪ್ರಸಾದ ವಿತರಣೆ ನಡೆಯುವುದು. ರಾತ್ರಿ ಶ್ರೀ ಮಠದಲ್ಲಿ ಸಂಗೀತ ಕಾರ್ಯಕ್ರಮ ಜರುಗುವದು.
   ಜೂಲೈ 1 ಶನಿವಾರರಂದು ಮುಂಜಾನೆ 8 ಘಂಟೆಯಿಂದ ಶ್ರೀ ಸಿದ್ದಲಿಂಗ ಮಹಾ ಸ್ವಾಮಿಗಳನ್ನು ಆನೆ ಅಂಬಾರಿಯ ಮೇಲೆ ಕೂಡ್ರಿಸಿಕೊಂಡು ಶ್ರೀ ಮಠದಿಂದ ವಿವಿಧ ವಾಧ್ಯ ವೈಭವಗಳೊಂದಿಗೆ ಭವ್ಯ ಮೆರವಣಿಗೆಯು ರಾಜವಾಡೆಯ ಭೀಮನಭಾವಿಯಲ್ಲಿ ಗಂಗಸ್ಥಳಕ್ಕೆ ತೆರಳಿ ಗಂಗಸ್ಥಳ ಮುಗಿಸಿಕೊಂಡು ಪ್ರಮುಖ ಬೀದಿಗಳಲ್ಲಿ ಆನೆ ಅಂಬಾರಿ ಉತ್ಸವದೊಂದಿಗೆ ಶ್ರೀಗಳ ಮಠಕ್ಕೆ ತಲುಪುವದು.
   ಅಂದೇ ಸಾಯಂಕಾಲ 5 ಘಂಟೆಗೆ ಶ್ರೀ ಖಾಸ್ಗತ ಮಹಾಶಿವಯೋಗಿಗಳವರ ಮಹಾರಥೋತ್ಸವ ಅಸಂಖ್ಯಾತ ಭಕ್ತ ಸಮೂಹದ ಮದ್ಯ ಜರುಗುವದು. ನಂತರ ಶ್ರೀ ಮಠದ ಸಿದ್ದಲಿಂಗ ಮಹಾಸ್ವಾಮಿಗಳಿಂದ ಆಶಿರ್ವಚನ, ಆಶಿರ್ವಾದ ದಯಪಾಲಿಸುವರು.
   ಜೂಲೈ 3 ಸೋಮವಾರರಂದು ಹುಣ್ಣಿಮೆಯ ದಿನ ಸಾಯಂಕಾಲ 5 ಘಂಟೆಗೆ ಶ್ರೀ ಖಾಸ್ಗತ ಶಿವಯೋಗಿಗಳವರ ರಥದ ಕಳಸ ಇಳಿಸುವ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವವು ಮಂಗಲಗೊಳ್ಳಲಿದೆ. ಕಾರಣ ಪಟ್ಟಣ ಹಾಗೂ ನಗರ, ಸುತ್ತಮುತ್ತಲಿನ ಗ್ರಾಮಗಳ ಜನತೆ ಜಾತ್ರೋತ್ಸವದಲ್ಲಿ ಪಾಲ್ಗೊಂಡು ಶ್ರೀ ಖಾಸ್ಗತೇಶ್ವರ ಮಹಾ ಸ್ವಾಮಿಗಳ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ಉಸ್ತುವಾರಿ ವೇ|| ಮುರುಘೇಶ ವಿರಕ್ತಮಠ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.