
ತಾಳಿಕೋಟೆ:ಮಾ.13: ತಾಳಿಕೋಟೆಯ ಶ್ರೀ ಸಾಂಭಪ್ರಭು ಶರಣಮುತ್ಯಾರವರು ಅನೇಕ ಪವಾಡಗಳನ್ನು ಬಿತ್ತರಿಸಿ ಭಕ್ತರನ್ನು ಸನ್ಮಾರ್ಗಕ್ಕೆ ಕೊಂಡೊಯ್ಯದುದಲ್ಲದೆ ಬಸವಾದಿ ಶರಣರ ಆದೇಶದಂತೆ ಧರ್ಮವನ್ನು ಹಾಗೂ ನಮ್ಮ ಸನಾತನ ಸಂಸ್ಕøತಿಯೊಂದಿಗೆ ಇಡಿ ಭಕ್ತ ಸಮೂಹದಲ್ಲಿ ಭಾವ್ಯೈಕ್ಯತೆಯನ್ನು ಬೆಳೆಸಿದ ಮಹಾತ್ಮರೆಂದು ಜಿಲ್ಲಾಪಂಚಾಯತ ಮಾಜಿ ಸದಸ್ಯರಾದ ಬಸವನಗೌಡ ವಣಕ್ಯಾಳ ಅವರು ನುಡಿದರು.
ಶನಿವಾರರಂದು ಸಾಗಿಬಂದ ಶ್ರೀ ಸಾಂಭಪ್ರಭು ಶರಣಮುತ್ಯಾರವರ ಜಾತ್ರೋತ್ಸವ ಕುರಿತು ಫೇ21ರಿಂದ ಸಾಗಿಬಂದ ಅಲ್ಲಮಪ್ರಭು ದೇವರ ಶೂನ್ಯ ಸಂಪಾದನೆಯ ಆಧ್ಯಾತ್ಮಿಕ ಪ್ರವಚನದ ಮಹಾಮಂಗಲ ಕುರಿತು ಏರ್ಪಡಿಸಲಾದ ಧರ್ಮಸಭೆಯಲ್ಲಿ ಮುಖ್ಯಥಿತಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಜಗತ್ತಿನಲ್ಲಿಯೇ ಭಾರತ ಆಧ್ಯಾತ್ಮಿಕ ನೆಲೆಗಟ್ಟಿನ ಮೇಲೆ ತನ್ನದೇ ವಿಶಿಷ್ಟತೆಯನ್ನು ಸಾಧಿಸಿದೆ. ಪವಿತ್ರ ಈ ನಾಡಿನಲ್ಲಿ ಹಲವಾರು ಸಂತರು, ಯೋಗಿಗಳು, ಮುನಿಶ್ರೇಷ್ಟರು, ಋಷಿಗಳು ತಪಗೈದು ನಾಡನ್ನು ಧರ್ಮಕ್ಷೇತ್ರವನ್ನಾಗಿಸಿದ್ದಾರೆ. ಅಂತಹ ಯೋಗಿಗಳ ಗುಂಪಿಗೆ ತಾಳಿಕೋಟೆಯ ಶ್ರೀ ಸಾಂಭಪ್ರಭು ಶರಣಮುತ್ಯಾರವರು ಸೇರಿದವರಾಗ್ದಿರೆಂದರೇ ತಪ್ಪಾಗಲಿಕ್ಕಿಲ್ಲವೆಂದರು. ತಾಳಿಕೋಟೆಯ ಶರಣರ ಮಠವೆಂಬುದು ಪುರಾತನ ಮಠವಾಗಿದೆ ಇದರ ಜಿರ್ಣೋದ್ಧಾರ ಕಾರ್ಯ ಕೈಗೊಳ್ಳಬೇಕೆಂಬ ಅಪೇಕ್ಷೆಯು ನಮ್ಮದಾಗಿದೆ ಈ ಕುರಿತು ಶಾಸಕರಾದ ಸಹೋದರ ಎ.ಎಸ್.ಪಾಟೀಲ ನಡಹಳ್ಳಿಯವರು ಕೂಡ ಈ ಮಠದ ಜಿರ್ಣೋದ್ಧಾರ ಕಾರ್ಯಕ್ಕೆ ಮುಂದಾಗಲಿದ್ದಾರೆಂದು ಹೇಳಿದ ಅವರು ಈ ಕೂಡಲೇ ಈ ಕಾರ್ಯ ಕಾರ್ಯಗತವಾಗುವಂತೆ ಕಾರ್ಯನಿರ್ವಹಿಸಲಾಗುವುದೆಂದರು.
ಇನ್ನೊರ್ವ ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ವಡವಡಗಿ ನಂದಿ ಮಠದ ಶ್ರೀ ಮ.ನಿ.ಪ್ರ.ವೀರಸಿದ್ದ ಮಹಾಸ್ವಾಮಿಗಳು ಮಾತನಾಡಿ ಕರ್ನಾಟಕದಾದ್ಯಂತ ಅನೇಕ ಮಹಾತ್ಮರು ಉದಯಿಸಿದ್ದಾರೆ. ಅವರು ಯಾವುದೇ ಫಲಾಪೇಕ್ಷೆ ಪಟ್ಟಿಲ್ಲ. ಅವರು ಧರ್ಮರಕ್ಷಣೆಗಾಗಿ ಹಾಗೂ ಭಕ್ತೋದ್ದಾರ, ಜನೋದ್ದಾರ ಕಾರ್ಯ ಮಾಡಿದವರಾಗಿದ್ದಾರೆ. ಅತಂಹ ಮಹಾತ್ಮರ ಗುಂಪಿಗೆ ಸೇರಿದವರು ತಾಳಿಕೋಟೆಯ ಶ್ರೀ ಸಾಂಭಪ್ರಭು ಶರಣಮುತ್ಯಾರವರು ಆಗಿದ್ದಾರೆಂದರು. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಮೂಲ ಮಂತ್ರವನ್ನು ಜಗತ್ತಿಗೆ ತೋರಿಸಿ ಕೊಟ್ಟ ಕೀರ್ತಿ ಮಠಪೀಠಗಳಿಗೆ ಸಲ್ಲುತ್ತದೆ. ನಮ್ಮ ಸಂಸ್ಕøತಿಯು ಧರ್ಮದ ಆಶ್ರಯದಲ್ಲಿಯೇ ಬೆಳೆದುಕೊಂಡು ಬಂದಿದ್ದರಿಂದಲೇ ಶಾಂತಿ ಸಹಬಾಳ್ವೆ ಎಂಬ ಭಾವನೆ ನೆಲೆಗೊಳ್ಳಲು ಕಾರಣವಾಗಿದೆ ಎಂದರು. ಜೀವನದ ಧನ್ಯತೆಗೆ ಧರ್ಮ ಅತಿಮುಖ್ಯವಾಗಿದೆ. ಜಾತ್ರೋತ್ಸವ ಪುರಾಣ ಪ್ರವಚನ ಕಾರ್ಯ ಚಟುವಟಿಕೆಯಿಂದ ಜನ ಮನ್ನಣೆಗಳಿಸಿಕೊಂಡಿರುವ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠ ಹಾಗೂ ಶ್ರೀ ಸಾಂಭಪ್ರಭು ಶರಣಮುತ್ಯಾರ ಮಠ ಭಕ್ತೋದ್ಧಾರ ಹಾಗೂ ಜನೋದ್ಧಾರಕ್ಕೆ ಶ್ರಮಿಸುತ್ತ ಸಾಗಿಬಂದಿದೆ ಎಂದರು.
ಇನ್ನೊರ್ವ ಖ್ಯಾತ ಪುರಾಣ ಪ್ರವಚನಕಾರರಾದ ಪಡೆಕನೂರ ದಾಸೋಹ ವೀರಕ್ತಮಠದ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ ವೀರಶೈವಧರ್ಮದ ಇತಿಹಾಸದುದ್ದಕ್ಕೂ ಮಠಗಳು ಶ್ಲಾಘನೀಯ ಕಾರ್ಯ ನಿರ್ವಹಿಸುತ್ತಾ ಸಾಗಿಬಂದಿದೆ ಪೂರ್ವದಲ್ಲಿ ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗಿದ್ದ ಮಠಗಳು ಕಾಲಾಂತರದಲ್ಲಿ ಅನ್ನದಾಸೋಹ, ಜ್ಞಾನದಾಸೋಹ ಕೇಂದ್ರಗಳಾದವು. ಈ ವಿಸ್ಮತೆಯಿಂದ ಉಜ್ವಲ ಪರಂಪರೆಯ ಶ್ರೀಮಂತ ಸಂಸ್ಕøತಿ ಬೆಳೆದು ಬಂದಿದೆ. ಅಂತಹ ಸಂಸ್ಕøತಿಯಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟುಕೊಂಡು ಸಾಗಿಬಂದ ಶ್ರೀ ಸಾಂಭಪ್ರಭು ಶರಣ ಮುತ್ಯಾರ ಶ್ರೀ ಮಠದ ಈಗಿನ ಬಸಣ್ಣ ಶರಣರ ಹಾಗೂ ಶರಣಪ್ಪ ಶರಣರ ಕಾರ್ಯ ಶ್ಲಾಘನೀಯವಾಗಿದೆ ಅಲ್ಲದೆ ಶ್ರೀ ಮಠದ ಸೇವಾಕಾರ್ಯದಲ್ಲಿ ಕರಿಬಾವಿ ಗ್ರಾಮದ ಭಕ್ತರು ಹಾಗೂ ಗಣ್ಯರಾದ ಸಿದ್ದನಗೌಡ ಪೋಲಿಸಪಾಟೀಲ ಅವರು ಶ್ರೀ ಮಠದ ಮೇಲಿಟ್ಟ ಭಕ್ತಿಯಿಂದ ಹಾಗೂ ತಾಳಿಕೋಟೆಯ ಭಕ್ತಸಮೂಹದ ನಿಸ್ವಾರ್ಥಸೇವಾ ಕಾರ್ಯದಿಂದ ಈ ಹಿಂದಿನಿಂಲೂ ಸಾಗಿಬಂದಂತಹ ಶ್ರೀ ಶರಣಮುತ್ಯಾಋ ಜಾತ್ರೋತ್ಸವ ಹಾಗೂ ದನಗಳ ಜಾತ್ರೇಯು ಕೂಡ ವಿಜೃಂಭಣೆಯಿಂದ ಸಾಗಿಬಂದಿದೆ ಎಂದು ಹೇಳಿದ ಶ್ರೀಗಳೂ ತಾವು 20ದಿನಗವರೆಗೆ ಹೇಳಿದ ಆಧ್ಯಾತ್ಮಿಕ ಪ್ರವಚನವನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಮಾಡಿಕೊಟ್ಟಂತಹ ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆಯವರ ಕಾರ್ಯ ಗುಣಗಾನಮಯವಾಗಿದೆ ಎಂದ ಅವರು ಈ ಕಾರ್ಯಕ್ರಮದಲ್ಲಿ ಪತ್ರಕರ್ತ ಘೋರ್ಪಡೆಯವರಿಗೆ ಮಾಧ್ಯಮ ರತ್ನ ಎಂಬ ಬಿರುದು ನೀಡಿ ಸನ್ಮಾನಿಸಿ ಗೌರವಿಸಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಇದೇ ಸಮಯದಲ್ಲಿ ಶ್ರೀಗಳಿಗೆ ಹಾಗೂ ಅಥಿತಿಮಹೋದಯರಿಗೆ ಸನ್ಮಾನಿಸಿ ಗೌರವಿಸಲಾಯಿತಲ್ಲದೆ ಹಿರಿಯ ಪತ್ರಕರ್ತರಾಧ ಜಿ.ಟಿ.ಘೋರ್ಪಡೆಯವರಿಗೆ ಮಾಧ್ಯಮ ರತ್ನ ಬಿರುದು ನೀಡಿದ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ವಜ್ಜಲ ಶರಣರು, ಸಾಹಪೂರ ಶರಣರು, ಶ್ರೀ ಬಸಣ್ಣ ಶರಣರ, ಶರಣಪ್ಪ ಶರಣರ ಸಮಾಜ ಸೇವಕ ಶಂಕ್ರಯ್ಯ ಹಿರೇಮಠ, ಸಿದ್ದನಗೌಡ ಪೊಲಿಸಪಾಟೀಲ, ಗುರುರಾಜ ಶರಣರ, ಗವಾಯಿಗಳಾದ ಬಸವನಗೌಡ ಬಿರಾದಾರ, ಹಣಮಂತ ಕುಮಾರ ಬಳಗಾನೂರ, ಮಲ್ಲಣ್ಣ ಇಂಗಳಗಿ, ಸಿದ್ದಣ್ಣ ಶರಣರ, ಭೀಮಣ್ಣ ಇಂಗಳಗಿ, ಶರಣಪ್ಪ ದೊರೆ, ಮಲ್ಲಣ್ಣ ಶರಣರ, ಮಾಲಿಪಾಟೀಲ( ಕರಿಬಾವಿ), ಶ್ರೀಕಾಂತ ಕುಂಬಾರ, ಬಸವರಾಜ ಛಾಂದಕೋಟೆ, ಕಾಶಿರಾಯ ದೇಸಾಯಿ, ಗುರುಲಿಂಗಪ್ಪ ದೊಡಮನಿ, ತಿಪ್ಪಣ್ಣ ಸಜ್ಜನ, ಸುಭಾಸಗೌಡ ಹಳಿಮನಿ, ಭಾರತ ಮಂಟಪ ಮತ್ತು ಸೌಂಡ ಸಿಸ್ಟಮದ ರಫೀಕ ಮುರಾಳ ಮೊದಲಾದವರು ಉಪಸ್ಥಿತರಿದ್ದರು.
ಶರಣಗೌಡ ಪೊಲೀಸ್‍ಪಾಟೀಲ ಸ್ವಾಗತಿಸಿದರು. ವಿಜಯಪೂರ ಮಹಿಳಾ ವಿಶ್ವ ವಿದ್ಯಾಲಯದ ವಿಜಯಕುಮಾರ ಹಿರೇಮಠ ನಿರೂಪಿಸಿದರು. ಸಂಗಮೇಶ ಶರಣರ ವಂದಿಸಿದರು.