ತಾಳಿಕೋಟೆಯಲ್ಲಿ ಸಿದ್ದರಾಮಯ್ಯಗೆ ಅದ್ಧೂರಿ ಸ್ವಾಗತ

ತಾಳಿಕೋಟೆ:ಜು.15:ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಗುರುವಾರರಂದು ಸಾಯಂಕಾಲ ತಾಳಿಕೋಟೆಯ ಮೂಲಕ ಸಂಚರಿಸುತ್ತಿದ್ದ ಸಮಯದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸುವದರೊಂದಿಗೆ ಹೂಗುಚ್ಚ ನೀಡಿ ಸನ್ಮಾನಿಸಿ ಗೌರವಿಸಿದರು.

ಇದೇ ಸಮಯದಲ್ಲಿ ಪುರಸಭಾ ಸದಸ್ಯರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರು ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರಲ್ಲದೇ ತಾಳಿಕೋಟೆಯ ಡೋಣಿ ನಧಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಗೆ ನೇರ ರಸ್ತೆ ಕಲ್ಪಿಸುವ ಬದಲು ಅಂಕುಡೊಂಕು ರಸ್ತೆ ನಿರ್ಮಿಸುತ್ತಿದ್ದಾರೆ ಮತ್ತು ಪಟ್ಟಣದ ಪುರಸಭೆಯಲ್ಲಿ ಅವ್ಯವಹಾರಗಳು ಮತ್ತು ಹಗರಣಗಳನ್ನು ತನಿಖೆಗೆ ಒಳಪಡಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಮನವಿ ಸಲ್ಲಿಸಿ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅವರು ಸರಕಾರದ ಗಮನ ಸೇಳೆಯುವಂತಹ ಕಾರ್ಯ ಮಾಡುತ್ತೇನೆಂದರು.

ಇದಕ್ಕೂ ಮೊದಲು ಬಂಡೆಪ್ಪನಹಳ್ಳಿ ಗ್ರಾಮದಲ್ಲಿ ದೇವರ ಹಿಪ್ಪರಗಿ ಮತಕ್ಷೇತ್ರದ ಕಾಂಗ್ರೇಸ್ ಮುಖಂಡ ಬಿ.ಎಸ್.ಪಾಟೀಲ(ಯಾಳಗಿ) ಅವರು ಸಿದ್ದರಾಮಯ್ಯನವರನ್ನು ಸನ್ಮಾನಿಸಿದರು.

ಈ ಸಮಯದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೈಹಿಬೂಬ ಚೋರಗಸ್ತಿ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ, ಪುರಸಭೆ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಶ್ರೀಮತಿ ಅಕ್ಕಮಹಾದೇವಿ ಕಟ್ಟಿಮನಿ, ಶ್ರೀಮತಿ ಶೋಭಾ ಕಟ್ಟಿಮನಿ, ಬಾಬುಗೌಡ ಬಿರಾದಾರ(ಫೀರಾಪೂರ), ಮೈಹಿಬೂಬ ಕೇಂಭಾವಿ, ನಬಿ ಹುಣಶ್ಯಾಳ, ಮಶಾಕ ಚೋರಗಸ್ತಿ, ಕಾಂಗ್ರೇಸ್ ಯುತ್ ಅಧ್ಯಕ್ಷ ಫಯಾಜ್ ಉತ್ನಾಳ, ಮುನ್ನಾ ಅರ್ಜುಣಗಿ, ಪ್ರಭುಗೌಡ ಮದರಕಲ್ಲ, ಪರಶುರಾಮ ತಂಗಡಗಿ, ಪುರಸಭೆ ಉಪಾಧ್ಯಕ್ಷ ಮುಸ್ತಫಾ ಚೌದ್ರಿ, ಹುಸೇನ ಜಮಾದಾರ, ಶರಣುಧನಿ ದೇಶಮುಖ, ವಿಜಯಸಿಂಗ್ ಹಜೇರಿ, ಸಂಗನಗೌಡ ಅಸ್ಕಿ, ಜಿ.ಎಸ್.ಕಶೆಟ್ಟಿ, ಬಿ.ಎಸ್.ಗಬಸಾವಳಗಿ, ಎಂ.ಜಿ.ಪಾಟೀಲ, ಯಮನಪ್ಪಸಾಹುಕಾರ ಮಸರಕಲ್ಲ, ಸಿದ್ದನಗೌಡ ಪಾಟೀಲ, ಬಿ.ಎನ್.ಹಿಪ್ಪರಗಿ, ಮಿರಾಜ ಬೇಪಾರಿ, ಸತ್ತಾರ ಅವಟಿ, ಮೊದಲಾದವರು ಇದ್ದರು.