ತಾಳಿಕೋಟೆಯಲ್ಲಿ ಸಂಭ್ರಮದ ಮೋಹರಂ ಆಚರಣೆ

ತಾಳಿಕೋಟೆ:ಜು.30: ಪಟ್ಟಣದಲ್ಲಿ ಮೋಹರಂ ಹಬ್ಬವು ಭಾವೈಕ್ಯತೆ ಬೆಸೆಯುವದರೊಂದಿಗೆ ಸಂಭ್ರಮ ಸಡಗರದೊಂದಿಗೆ ಆಚರಿಸಲಾಯಿತು.

    ಪಟ್ಟಣದ ಮಕಾಂದಾರ ಗಲ್ಲಿ, ಕಟಗರ ಗಲ್ಲಿ, ಮಹಲ್‍ಗಲ್ಲಿ, ಬಿಸ್ತಿ ಗಲ್ಲಿ, ಪಂಚಸಹೇದ ದರ್ಗಾ, ಕಾಮನಕಟ್ಟಿ, ಹಾಳಗೋಡ, ಆಶ್ರಯ, ಕೇಂಭಾವಿ ಗಲ್ಲಿ, ಒಳಗೊಂಡು ಸುಮಾರು 25 ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾದ ಮೋಹರ ಹಬ್ಬದ ದೇವರುಗಳು ಪಟ್ಟಣದ ಶ್ರೀ ಗ್ರಾಮದೇವತೆ ದೇವಸ್ಥಾನಕ್ಕೆ ಹಾಗೂ ಶ್ರೀ ಖಾಸ್ಗತೇಶ್ವರ ಮಠಕ್ಕೆ ಬೆಟ್ಟಿ ನೀಡಿದವಲ್ಲದೇ ಈ ಸಮಯದಲ್ಲಿ ಹಿಂದೂ-ಮುಸ್ಲಿಂ ಬಾಂದವರು ಪಾಲ್ಗೊಂಡು ಭಾವೈಕ್ಯತೆಗೆ ಸಾಕ್ಷೀಯಾದರು.
    ನಂತರ ಪ್ರತಿಷ್ಠಾಪಿಸಲಾದ ದೇವರಗಳ ದಪನ್ ಕಾರ್ಯವು ನಡೆಯಿತ್ತಲ್ಲದೇ ರಾತ್ರಿ 8-30 ಕ್ಕೆ ಡೋಲಿ ಮೇರವಣಿಗೆಯೊಂದಿಗೆ ಮೋಹರಂಬ ಹಬ್ಬವನ್ನು ಸಂಪನ್ನಗೊಳಿಸಲಾಯಿತು.

ಮೋಹರಂ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪಿ.ಎಸ್.ಆಯ್.ರಾಮನಗೌಡ ಸಂಕನಾಳ, ಅಪರಾದ ವಿಭಾಗ ಪಿ.ಎಸ್.ಆಯ್.ಆರ್.ಎಸ್.ಭಂಗಿ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಯೋಗ್ಯ ಬಂದೋಬಸ್ತ ಕೈಗೊಂಡಿದ್ದರು.