ತಾಳಿಕೋಟೆಯಲ್ಲಿ ಶ್ರೀ ವಾಸವಿ ಜಯಂತಿ ಆಚರಣೆ

ತಾಳಿಕೋಟೆ :ಮೇ.1: ಪಟ್ಟಣದ ಆರ್ಯವೈಶ್ಯ ಸಮಾಜ ಬಾಂದವರ ಕುಲದೇವತೆಯಾದ ಶ್ರೀ ವಾಸವಿ ಜಯಂತಿಯನ್ನು ಶ್ರದ್ದಾ ಭಕ್ತಿಯಿಂದ ರವಿವಾರರಂದು ಆಚರಿಸಲಾಯಿತು.

ಜಯಂತ್ಯೋತ್ಸವ ಅಂಗವಾಗಿ ಬೆಳಿಗ್ಗೆ ಗಂಗಸ್ಥಳ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಕುಂಕುಮಾರ್ಚನೆ, ಮತ್ತು ಮಹಾ ಮಂಗಳಾರತಿ ಕಾರ್ಯಕ್ರಮವು ಜರುಗಿತು. ಜಯಂತ್ಯೋತ್ಸವ ಅಂಗವಾಗಿ ಪಟ್ಟಣದ ಶ್ರೀ ಅಂಬಾಭವಾನಿ ಮಂದಿರದಿಂದ ಸುಮಂಗಲೆಯರ ಕುಂಭದ ಮೆರವಣಿಗೆಯು ಶ್ರೀ ವಾಸವಿ ಮಂದಿರದ ವರೆಗೆ ಜರುಗಿತು. ನಂತರ ಸಮಸ್ತ ಭಕ್ತಾಧಿಗಳಿಗೆ ಮಹಾ ಪ್ರಸಾದ ವಿತರಿಸಲಾಯಿತು.

ಜಯಂತ್ಯೋತ್ಸವದ ನಿಮಿತ್ಯ ಮಂದಿರದಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗಿದವು. ವೇ.ವಸಂತಬಟ್ ಜೋಶಿ, ಶ್ರೀಧರ ಜೋಶಿ, ಶ್ರೀನಿವಾಸ ಜೋಶಿ, ಅವರು ಪೂಜಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಜಯಂತ್ಯೋತ್ಸವದ ನೇತೃತ್ವವನ್ನು ಸಮಾಜದ ಮುಖಂಡರುಗಳಾದ ಡಾ.ಎನ್.ಎಲ್.ಶೆಟ್ಟಿ, ದತ್ತು ಹೆಬಸೂರ, ಅಶೋಕ ಶೆಟ್ಟಿ, ರವಿ ತಾಳಪಲ್ಲೆ, ವಾಸುದೇವ ಹೆಬಸೂರ, ವೆಂಕಣ್ಣ ತಾಳಪಲ್ಲೆ, ಗೋವಿಂದ ಶೆಟ್ಟಿ, ವಿಧ್ಯಾಧರ ಗೊಟಗುಣಕಿ, ಅರುಣ ಕನಕಗಿರಿ, ಕೃಷ್ಣಾ ಮಾನ್ವಿ, ಪ್ರಶಾಂತ ಜನಾದ್ರಿ, ಮೊದಲಾದವರು ಇದ್ದರು.