ತಾಳಿಕೋಟೆಯಲ್ಲಿ ವಟಸಾವಿತ್ರಿ ಮಹಾ ಪೂಜೆ

ತಾಳಿಕೋಟೆ:ಜೂ.5: ಕಾರ ಹುಣ್ಣಿವೆ ದಿನದಂದು ಪಟ್ಟಣದ ಬಜಾರ ಶ್ರೀ ಹನುಮಾನ ಮಂದಿರದ ಆವರಣದಲ್ಲಿರುವ ಆಲದ ಮರದ(ವಟವೃಕ್ಷ) ಮಹಾ ಪೂಜೆಯನ್ನು ಸುಮಂಗಲೆಯರು ನೆರವೇರಿಸಿ ವಟಸಾವಿತ್ರಿಗೆ ಭಕ್ತಿಭಾವ ಮೆರೆದರು.

ಸತಿ ಸಾವಿತ್ರಿ ಎಂಬುವಳು ಮೃತಪಟ್ಟ ತನ್ನ ಪತಿಯ ಮರಳಿ ತರುವದಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸಿ ಪತಿಯ ಜೀವವನ್ನು ಮರಳಿ ಪಡೆದಿದ್ದರ ಇತಿಹಾಸವನ್ನು ಅರೀತ ಸುಮಂಗಲೆಯರು ತಮ್ಮ ಸಂಸಾರ ವ್ಯವಸ್ಥಿತವಾಗಿ ನಡೆಯಲಿ ಹಾಗೂ ತಮ್ಮ ಪತಿಗೆ ಆಯುಷ್ಯ ಆರೋಗ್ಯ ಭಗವಂತ ದಯಪಾಲಿಸಲಿ ಎಂಬ ವಿಚಾರದಿಂದ ಭಕ್ತಿಭಾವದೊಂದಿಗೆ ವಿವಿಧ ಪೂಜಾ ವಿಧಿವಿದಾನಗಳನ್ನು ಕೈಕೊಂಡು ಭಕ್ತಿಭಾವ ಮೆರೆದರು.

ಈ ಕಾರ್ಯಕ್ರಮವನ್ನು ಪ್ರತಿವರ್ಷ ತಾಳಿಕೋಟೆ ಪಟ್ಟಣದ ಸುಮಂಗಲೆಯರು ವಿವಿಧ ಬಡಾವಣೆಗಳಿಂದ ಆಗಮಿಸಿ ಮಹಾ ಪೂಜೆ ಸಲ್ಲಿಸಿ ವಟವೃಕ್ಷಕ್ಕೆ ಭಕ್ತಿಭಾವದಿಂದ ತಮ್ಮ ಬೇಕು ಬೇಡಿಕೆಗಳು ಇಡೇರಲಿ ಎಂದು ಆಸೆಹೊತ್ತು ಆಚರಿಸಿಕೊಂಡು ಬರಲಾಗುತ್ತಿರುವದು ಈ ಭಾಗದ ಮಹಿಳೆಯರು ಆಚರಿಸುತ್ತಾ ಸಾಗಿಬಂದ ವಿಶೇಷ ಪೂಜಾ ಕಾರ್ಯಕ್ರಮ ಇದಾಗಿದೆ.