ತಾಳಮಡಗಿ ಸರ್ಕಾರಿ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ

ಚಿಟಗುಪ್ಪ,ಏ.15 : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.81.25 ಫಲಿತಾಂಶ ಲಭಿಸಿದೆ.ಒಟ್ಟು 32 ವಿದ್ಯಾರ್ಥಿಗಳ ಪೈಕಿ 26 ವಿದ್ಯಾರ್ಥಿಗಳು ಪಾಸ್ ಆಗಿದ್ದು,ಅದರಲ್ಲಿ 11 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾಗಿದ್ದಾರೆ.
ಕಾಲೇಜಿಗೆ ವಿಜಯಲಕ್ಷ್ಮೀ ಕಲ್ಲಪ್ಪ (500) 83.33ಪ್ರಥಮ ಸ್ಥಾನ, ಮಾಲಾಶ್ರೀ ಪ್ರಭು (483) ಶೇ.80.5ದ್ವಿತೀಯ ಸ್ಥಾನ
ಮತ್ತು ಅನಿತಾ ಜ್ಞಾನೇಶ್ವರ (465) 77.5 ತೃತೀಯ ಸ್ಥಾನ ಗಿಟ್ಟಿಸಿಕೊಂಡರೆ ಅಂಜಲಿ ಮಲ್ಲಯ್ಯ ಸ್ವಾಮಿ,ಮವಿತಾ ಸುಭಾಷ,ಪೂಜಾ ವೀರಶೆಟ್ಟಿ, ರಾಜೇಶ್ವರಿ ಧೂಳಪ್ಪ,ರುಕ್ಮಿಣಿ ಸಂತೋಷ,ಸಾನಿಯ ಶ್ರೀಮಂತ, ವೈಷ್ಣವಿ ಶ್ರೀಕೃಷ್ಣ,ಪ್ರಣೀತಾ ಪ್ರದೀಪ ಇವರೆಲ್ಲರೂ ಪ್ರಥಮ ದರ್ಜೆಯಲ್ಲಿ ಉತ್ತಿರ್ಣಗೊಂಡು ತಮ್ಮ ಕಾಲೇಜಿಗೆ ಕೀರ್ತಿ ತಂದಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯಹಣಮಂತ ಪಿ.ಗೌಡಗಾಂವಕರ,ಉಪನ್ಯಾಸಕರಾದ ರವೀಂದ್ರ ರೆಡ್ಡಿ, ಅಂಬಿಕಾ,ಸಂಜುಕುಮಾರ ಜುಮ್ಮಾ,ಶ್ರೀನಾಥ, ರಾಜಕುಮಾರ,ಸಿಬಿಸಿ ಉಪಾಧ್ಯಕ್ಷ ಈಶ್ವರ ನೇಳಗಿ ಸೇರಿ ಗ್ರಾಮದ ಗಣ್ಯರು ಹಾಗು ಶಿಕ್ಷಣ ಪ್ರೇಮಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.