ತಾಲ್ಲೂಕು ಮಟ್ಟದ ಕ್ರೀಡಾಕೂಟ: ಗುರುಕುಲ ವಿದ್ಯಾರ್ಥಿಗಳಿಗೆ ಸಿಂಹಪಾಲು

ಭಾಲ್ಕಿ:ಆ.29:ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿದ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ದೈಹಿಕ ಶಿಕ್ಷಣ ನಿರ್ದೇಶಕ ಅನಿಲ್‍ಕುಮಾರ ಪಾಟೀಲ ತಿಳಿಸಿದರು.

ವೈಯಕ್ತಿಕ ವಿಭಾಗದ 100 ಮೀ. ಓಟದ ಸ್ಪಧೆ9ಯಲ್ಲಿ ಸರಸಿ ಜಾಕ್ಷಾ ನಾಗನಾಥ, 200 ಮೀ. ಮಹೇಶ ರೇವಣಪ್ಪ, 400 ಮೀ. ಅಶಿತೋಷ ಪ್ರಥಮ, 1500 ಮೀ. ಸೂಯ9ಕಾಂತ, 1500 ಮೀ ಓಟದ ಸ್ಪಧೆ9ಯಲ್ಲಿ ಪ್ರಾಥ9ನ ಪ್ರಥಮ ಸ್ಥಾನ 4×100 ಮೀ. ರಿಲೆ, 4×400 ಮೀ. ರಿಲೆಯಲ್ಲಿ ಪ್ರಾಥ9ನಾ ಮತ್ತು ತಂಡ, 4×100, 4×400 ಮೀ. ರಿಲೆಯಲ್ಲಿ ಸರಸಿ ಜಾಕ್ಷಾ ಮತ್ತು ತಂಡ , ಎತ್ತರ ಜಿಗಿತ ಸರಸಿ ಜಾಕ್ಷಾ ಪ್ರಥಮ ಸ್ಥಾನ ಗಿಟ್ಟಿಸಿದ್ದಾರೆ.
ಗುಂಪು ಆಟದ ಸ್ಪಧೆ9ಗಳಾದ ಕಬಡ್ಡಿ, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್ , ಶಟಲ್ ಬ್ಯಾಡ್ಮಿಂಟನ್ , ಫುಟ್ ಬಾಲ್ ನಲ್ಲಿ ಪ್ರಥಮ ಸ್ಥಾನ.
ಗುಂಡು ಎಸೆತ ಸ್ಪಧೆ9ಯಲ್ಲಿ ವಿಜಯಲಕ್ಷ್ಮಿ, ಚಕ್ರ ಎಸೆತದಲ್ಲಿ ನಿವೇತಿತ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿನಿಯರ ಗುಂಪು ಆಟಗಳಾದ ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್ , ಶಟಲ್ ಬ್ಯಾಡ್ಮಿಂಟನ್ ನಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ತಾಲ್ಲೂಕಿನ ಕ್ರೀಡಾಕೂಟದಲ್ಲಿಯೆ ಸಿಂಹ ಪಾಲು ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ್ ಮೊಳಕೀರೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.