ತಾಲ್ಲೂಕು ಮಟ್ಟದ ಅಂತರ್ ಕಾಲೇಜು ಕ್ರೀಡಾಕೂಟ

oplus_0

ಆನೇಕಲ್.ಮೇ.೨೦:ಯುವಕರು ಮಾನಸಿಕವಾಗಿ, ದೈಹಿಕವಾಗಿ ಗಟ್ಟಿಯಾಗಲು ಕ್ರೀಡೆಗಳು ಬಹಳ ಉಪಯೋಗಕಾರಿಯಾಗಿದೆ ಎಂದು ಅಕ್ಷರ ಕಾಲೇಜಿನ ಪ್ರಾಂಶುಪಾಲರಾದ ವೀಣಾ ನಾಗರಾಜ್ ತಿಳಿಸಿದರು.
ಅವರು ಅಕ್ಷರ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಆವರಣದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಇಂಟರ್ ಕಾಲೇಜು ಕ್ರೀಡಾಕೂಟ (ಫೋಕಸ್ ೨೦೨೪)ದಲ್ಲಿ ಬಾಗವಹಿಸಿ ಮಾತನಾಡಿದರು. ಈವತ್ತಿನ ದಿನಗಳಲ್ಲಿ ಯುವ ಸಮ್ಮೂಹ ಒತ್ತಡದ ಬದುಕಿನಲ್ಲಿ ಬದುಕುತ್ತಿದ್ದಾರೆ ಜೊತೆಗೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಾದರೆ ಪ್ರತಿಯೊಬ್ಬರು ತಪ್ಪದೆ ದಿನದಲ್ಲಿ ಒಂದು ಗಂಟೆಗಳ ಕಾಲ ವ್ಯಾಯಾಮ, ಕ್ರೀಡೆಗಳಲ್ಲಿ ಬಾಗವಹಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆಯ ಬಹುದಾಗಿದೆ ಎಂದರು. ವಿಶೇಷವಾಗಿ ಯುವಕ/ಯುವತಿಯರಲ್ಲಿ ಕ್ರೀಡಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಹಾಗೂ ಯುವಕರನ್ನು ದುಶ್ಚಟಗಳಿಂದ ದೂರ ಮಾಡುವ ಉದ್ದೇಶದಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಅಕ್ಷರ ಪದವಿ ಪೂರ್ವ ಮತ್ತು ಪದವಿ ಕಾಲೇಜು ವತಿಯಿಂದ ತಾಲ್ಲೂಕು ಮಟ್ಟದ ಇಂಟರ್ ಕಾಲೇಜು ಕ್ರೀಡಾಕೂಟ (ಫೋಕಸ್ ೨೦೨೪) ಆಯೋಜಿಸಲಾಗಿದೆ ಎಂದು ಹೇಳಿದರು.
ಹಳ್ಳಿಕಾರ್ ಸಂತೋಷ್ ಮಾತನಾಡಿ ಪ್ರತಿಯೊಬ್ಬರು ಸಹ ಕೈಲಾದ ಮಟ್ಟಿಗೆ ನಾಲ್ಕು ಜನಕ್ಕೆ ಒಳ್ಳೆಯದನ್ನು ಮಾಡಿ, ಕೆಟ್ಟದನ್ನು ಮಾಡಬೇಡಿ. ಈ ದೇಶವನ್ನು ಬದಲಾಯಿಸುವ ಶಕ್ತಿ ಇರುವುದು ಯುವಕರಿಂದ ಮಾತ್ರ ಸಾಧ್ಯವಾಗಿದ್ದು, ಜೀವನದಲ್ಲಿ ಸಮಯ ಬಹಳ ಪ್ರಮುಖ ಪಾತ್ರ ವಹಿಸುತ್ತದೆ, ಕಲಿಕೆಯ ಸಮಯದಲ್ಲಿ ವಿದ್ಯಾರ್ಥಿಗಳು ಬೇರೆಡೆಗೆ ಹೆಚ್ಚು ಆಕರ್ಷಣೆಗೆ ಒಳಗಾಗದೆ ಶ್ರದ್ದೆಯಿಂದ ಓದಿ ಮುದೊಂದು ದಿನ ಸಾಲು ಮರದ ತಿಮ್ಮಕ್ಕನ ರೀತಿಯಲ್ಲಿ ನೀವು ಸಾಧಕರಾಗುತ್ತೀರಾ ಎಂದು ಯುವಕರಲ್ಲಿ ಸ್ಪೂರ್ತಿ ತುಂಬಿದರು.
ಇನ್ನು ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಥ್ರೋಬಾಲ್, ವಾಲಿಬಾಲ್ ಹಾಗೂ ಕಬ್ಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಹಾಗೂ ಆನೇಕಲ್ ತಾಲ್ಲೂಕಿನಲ್ಲಿರುವ ಸುಮಾರು ೧೫ ವಿವಿಧ ಕಾಲೇಜಿನ ಪದವಿ ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಬಾಗವಹಿಸಿದ್ದರು ಎನ್ನಲಾಗಿದೆ.
ಕ್ರೀಡಾಕೂಟದಲ್ಲಿ ಅಕ್ಷರ ಕಾಲೇಜಿನ ಸಂಸ್ಥಾಪಕರಾದ ನಾಗರಾಜ್ ಮತ್ತು ಶಿಕ್ಷಕರು, ಸಿಬ್ಬಂದಿ ವರ್ಗ, ವಿಧ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.