ತಾಲ್ಲೂಕು ಕೇಂದ್ರವಾಗಿ ವಿಜಯಪುರ; ಸಚಿವ ಸುಧಾಕರ್

ವಿಜಯಪುರ.ಏ೩೦:ಪಟ್ಟಣದ ಅಂಕತಟ್ಟಿ ನಂಜುಂಡಪ್ಪ ವೃತ್ತದಲ್ಲಿ ಬಿಜೆಪಿ ಅಭ್ಯರ್ಥಿ ಪಿಳ್ಳಮುನಿಶಾಮಪ್ಪ ಅವರ ಪರವಾಗಿ ಶುಕ್ರವಾರ ಸಚಿವ ಡಾ.ಕೆ.ಸುಧಾಕರ್ ಅವರು ಮತ. ಯಾಚನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ’ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದು, ದೇವನಹಳ್ಳಿ ಕ್ಷೇತ್ರದಲ್ಲಿ ಪಿಳ್ಳಮುನಿಶಾಮಪ್ಪ ಅವರನ್ನು ಗೆಲ್ಲಿಸಿ, ಮೊದಲ ಕ್ಯಾಬಿನೆಟ್ ಸಭೆಯಲ್ಲೆ ವಿಜಯಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಿಸುತ್ತೇವೆ’ ಎಂದು ಭರವಸೆ ನೀಡಿದರು.
ವಿಜಯಪುರ ಪಟ್ಟಣವು ತನ್ನದೇ ಇತಿಹಾಸ ಹೊಂದಿದ್ದು ಪಟ್ಟಣದಲ್ಲಿ ಎಲ್ಲಾ ತರಹದ ಮೂಲಭೂತ ಸೌಲಭ್ಯ ಇಲ್ಲಿಸಿಗುತ್ತದೆ. ಅದರೆ ಹಿಂದಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಸರಕಾರ ಅಧಿಕಾರ ಬಂದರೂ ಇಲ್ಲಿ ಯಾವುದೇ ಅಭಿವೃದ್ಧಿ ಹೊಂದಿಲ್ಲ, ಈ ಬಾರಿ ಬಿಜೆಪಿ ಪಕ್ಷಕ್ಕೆ ಅಧಿಕಾರ ಕೊಡಿ ಮುಂಬರುವ ಮೊದಲ ವಿಧಾನಸಭಾ ಅಧಿವೇಶನದಲ್ಲಿ ತಾಲೂಕು ಆಗಿ ಮಾಡುವುದಾಗಿ ಭರವಸೆ ನೀಡಿದರು.
ದೇಶದಲ್ಲಿ ಬಿಜೆಪಿ ಸಂವಿಧಾನ ಬದಲಾಯಿಸುತ್ತಾರೆ ಎಂದು ಅಪಪ್ರಚಾರ ಮಾಡಿದರು. ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಒಂಭತ್ತು ವರ್ಷ ಕಳೆದಿದೆ. ಸಂವಿಧಾನದ ಆಶಯಗಳಿಗೆ ದಕ್ಕೆ ತಂದಿಲ್ಲ. ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂದರು. ಮೀಸಲಾತಿ ತೆಗೆಯುತ್ತಾರೆಂದು ಅಪಪ್ರಚಾರ ಮಾಡಿದರು. ಆದರೆ ಬಿಜೆಪಿ ಸರಕಾರ ಎಲ್ಲಾ ವರ್ಗಗಳಿಗೂ ಮೀಸಲಾತಿಯನ್ನು ಹೆಚ್ಚಿಸುವ ಮೂಲಕ ಸರ್ವರಿಗೂ ನ್ಯಾಯ ಒದಗಿಸುತ್ತಿದೆ ಎಂದು ತಿಳಿಸಿದರು.
ದೇಶದ ಅಭಿವೃದ್ಧಿಯಲ್ಲಿ ಡಬಲ್ ಇಂಜಿನ್ ಸರ್ಕಾರದ ಪಾತ್ರ ಮಹತ್ವದ್ದಾಗಿರುತ್ತದೆ. ಹಾಗಾಗಿ, ದೇಶದ ಅಭಿವೃದ್ಧಿಯ ಜೊತೆಗೆ ಕರ್ನಾಟಕವೂ ದಾಪುಗಾಲು ಹಾಕಬೇಕಾದರೆ, ರಾಜ್ಯದಲ್ಲಿ ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಎಂದರು
ಬಿಜೆಪಿ ಅಭ್ಯರ್ಥಿ ಪಿಳ್ಳಮುನಿಶಾಮಪ್ಪ ಮಾತನಾಡಿ, ’ನಾನು ಶಾಸಕನಾಗಿದ್ದಾಗ ಶುದ್ಧವಾಗಿ ಕೆಲಸ ಮಾಡಿದ್ದೇನೆ. ಎಲ್ಲಾ ಸಮುದಾಯಗಳನ್ನು ಜಾತಿಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದೇನೆ.ಸಮಾಜವನ್ನು ಒಡೆಯುವಂತಹ ಕೆಲಸ ಮಾಡಲಿಲ್ಲ. ಅಭಿವೃದ್ಧಿಯ ಪರವಾಗಿ ಚಿಂತನೆ ನಡೆಸಿದ್ದೇನೆ. ಕ್ಷೇತ್ರದಲ್ಲಿ ಕಳೆದ ೫ ವರ್ಷದಲ್ಲಿ ಭ್ರಷ್ಟಾಚಾರ ಜಾಸ್ತಿಯಾಗಿದೆ. ಆದ್ದರಿಂದ ನನಗೆ ಮತ್ತೊಮ್ಮೆ ಅವಕಾಶ ಕೊಡಿ, ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿ ತೋರಿಸುತ್ತೇನೆ’ ಎಂದು ಕೋರಿದರು.
ನಮ್ಮ ದೇವನಹಳ್ಳಿ ತಾಲೂಕಿನ ಹಳ್ಳಿಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಇಟ್ಟುಕೊಂಡು ಬಂದಿರುವೆ, ಪ್ರಧಾನಿ ನರೇಂದ್ರ ಮೋದಿಗೆ ಮತ್ತು ಬಿಜೆಪಿಗೆ ಪಕ್ಷಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ನಾನು ಗೆಲುವು ಸಾಧಿಸಲು ಸ್ಪರ್ಧಿಸುತ್ತಿದ್ದೇನೆ, ಸಾಮಾಜಿಕ ರಕ್ಷಣೆ ಮತ್ತು ಕ್ಷೇತ್ರದ ಜನರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನನ್ನ ಸ್ಪರ್ಧೆ. ಸಮಾಜದ ವಿಜಯೋತ್ಸವಕ್ಕಾಗಿ ಹಾಗೂ ಕಟ್ಟ ಕಡೆಯ ವ್ಯಕ್ತಿಯ ಜೊತೆಗೂ ನಾವಿದ್ದೇವೆಂಬುದನ್ನು ತೋರಿಸಿಕೊಡಬೇಕಾಗಿದೆ, ನಿಮ್ಮ ಮನೆಯ ಮಗನೆಂದು ನೀವು ನನ್ನನ್ನು ಸ್ವೀಕರಿಸಬೇಕು ಸಮಾನತೆಯ ಅಡಿಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಸಮಾಜಕ್ಕೆ ತೋರಿಸಿ ಕೊಡೋಣ ಎಂದು ಹೇಳಿದರು.
ಮಾಜಿ ಶಾಸಕ ಜಿ.ಚಂದ್ರಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಎ.ವಿ. ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ಸುನೀಲ್ ಸುಂದರೇಶ್, ಟೌನ್ ಅಧ್ಯಕ್ಷ ಆರ್.ಸಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಡಿ.ಎಂ.ಮುನೀಂದ್ರ, ರೈತ ಮೋರ್ಚಾ ಜಿಲ್ಲಾದ್ಯಕ್ಷ ಎಚ್. ಎಂ.ರವಿಕುಮಾರ್, ಬಿ.ಚೇತನ್ ಗೌಡ, ಬುಳ್ಳಹಳ್ಳಿ ರಾಜಪ್ಪ, ಪುರಸಭೆ ಸದಸ್ಯೆ ಶಿಲ್ಪಾಅಜಿತ್, ಜೆ.ಎಸ್.ರಾಮಚಂದ್ರಪ್ಪ, ಬಿಜ್ಜವಾರ ಮಂಜುನಾಥ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ನೀಲೇರಿಮಂಜುನಾಥ್, ರವಿಕುಮಾರ್, ಜಿಲ್ಲಾ ಕಾರ್ಯದರ್ಶಿ ಕನಕರಾಜು, ಗಿರೀಶ್, ರಾಮಕೃಷ್ಣ ಹೆಗಡೆ, ವಿಮಲಾ ಶಿವಕುಮಾರ್, ರಾಮುಭಗವಾನ್ ಹಾಜರಿದ್ದರು.

ರದ್ದು: ಚಿತ್ರನಟ ದರ್ಶನ್ ಅವರು ರೋಡ್ ಶೋ ನಡೆಸಲಿದ್ದಾರೆ ಎಂದು ಸಾವಿರಾರು ಜನರು ಸೇರಿದ್ದರು. ಕೊನೆ ಕ್ಷಣದಲ್ಲಿ ರೋಡ್ ಶೋ ರದ್ದಾಗಿದ್ದು,ಕಳೆದ ಶುಕ್ರವಾರ ಅಮಿತ್ ಶಾ ರೋಡ್ ಶೋ ಮಾಡಲ್ಲಿದ್ದಾರೆ ಎಂದು ತಿಳಿಸಿದ್ದು, ಕಳೆದ ವಾರ ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಬೀದಿ ಬದಿ ಅಂಗಡಿಗಳು, ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಲಾಗಿತು. ಅದರೆ ಅಂದಿನ ಕಾರ್ಯಕ್ರಮವೂ ರದ್ದು ಆದ ಕಾರಣ ಜನರು ಇಂದು ರೋಡ್ ಶೋಗೆ ೫ ಗಂಟೆಗೆ ಬರಬೇಕಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನಗಾಗಿ ಕಾದು ಕುಳಿತ ಬೇಸತ್ತ ಸಾರ್ವಜನಿಕರು ಹಾಗೂ ಕಾರ್ಯಕರ್ತರು ಅತೀವ ಬೇಸರ ವ್ಯಕ್ತಪಡಿಸಿದರು.

ಈ ಮೇಲ್‌ನಲ್ಲಿ ಫೋಟೋ ಕಳುಹಿಸಲಾಗಿದೆ.
೨೯-ವಿಜ್.೧ಎ+೧ಬಿ+೧ಸಿ;ವಿಜಯಪುರ ಪಟ್ಟಣದ ಅಂಕತಟ್ಟಿ ನಂಜುಂಡಪ್ಪ ವೃತ್ತದಲ್ಲಿ ಬಿಜೆಪಿ ಅಭ್ಯರ್ಥಿ ಪಿಳ್ಳಮುನಿಶಾಮಪ್ಪ ಅವರ ಪರವಾಗಿ ಸಚಿವ ಡಾ.ಕೆ.ಸುಧಾಕರ್ ಅವರು ಮತ. ಯಾಚನೆ ನಡೆಸಿದರು.
೨೯-ವಿಜ್.೧ಡಿ+೧ಇ;ಚಿತ್ರನಟ ದರ್ಶನ್ ಅವರು ರೋಡ್ ಶೋ ನಡೆಸಲಿದ್ದಾರೆ ಎಂದು ನೆರೆದಿದದ್ದ ಸಾವಿರಾರು ಜನರು.