ತಾಲ್ಲೂಕು ಕಸಾಪದಿಂದ ಸಮ್ಮೇಳನಾಧ್ಯಕ್ಷರಿಗೆ  ಅಧಿಕೃತ ಆಮಂತ್ರಣ

ಸಂಜೆವಾಣಿ ವಾರ್ತೆ

ದಾವಣಗೆರೆ ಫೆ 21: ಇದೇ  ಫೆಬ್ರವರಿ 27 ರಂದು ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಗ್ರಾಮದ ಶ್ರೀ ರುದ್ರೇಶ್ವರ ಸ್ವಾಮಿ ಮಠದ ಕಲ್ಯಾಣ ಮಂದಿರದಲ್ಲಿ ನಡೆಯುವ ದಾವಣಗೆರೆ ತಾಲ್ಲೂಕು 10 ನೇ ಕನ್ನಡ ಸಾಹಿತ್ಯ ಸಮ್ಮೇಳನ ದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ದಾವಣಗೆರೆ ನಗರದ ಖ್ಯಾತ ಕಥೆಗಾರ್ತಿ, ಲೇಖಕಿ, ಬಿ ಟಿ ಜಾಹ್ನವಿ ಅವರನ್ನು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ ವಾಮದೇವಪ್ಪ ನೇತೃತ್ವದಲ್ಲಿ ತಾಲ್ಲೂಕು ಕ ಸಾ ಪ ಅಧ್ಯಕ್ಷರಾದ ಸುಮತಿ ಜಯಪ್ಪ  ಅಧ್ಯಕ್ಷತೆಯಲ್ಲಿ  ಗೌರವ ಪೂರ್ವಕವಾಗಿ ಕನ್ನಡದ ಪೇಟ ಶಾಲು ಹಾಕಿ ಅಧಿಕೃತವಾಗಿ ಆಹ್ವಾನಿಸಲಾಯಿತು.ಈ ಸಂದರ್ಭದಲ್ಲಿ ಸುಮತಿ ಜಯಪ್ಪ ಮಾತನಾಡಿ ಜಾಹ್ನವಿ ಯವರನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಯಾಗಿರುವುದು ತುಂಬಾ ಸಂತೋಷವಾಗಿದೆ, ಇದರಿಂದ ಮಹಿಳೆಯರಿಗೆ ಗೌರವ ಸಂದಿದೆ ಎಂದು ಶುಭಾಶಯ ಕೋರಿದರು.ಜಿಲ್ಲಾಧ್ಯಕ್ಷ ಬಿ ವಾಮದೇವಪ್ಪ ಮಾತನಾಡಿ  ಬಿ ಟಿ ಜಾಹ್ನವಿ ಯವರು ಲೇಖನ,ಕಥೆಗಳ ಮೂಲಕ ಸಮಾಜವನ್ನು ತಿದ್ದುವ, ಮಾರ್ಗದರ್ಶನ ಮಾಡುವ ಕೆಲಸ ಮಾಡಿದ್ದಾರೆ, ಇವರು ಬಹುಮುಖ ಪ್ರತಿಭೆಯುಳ್ಳ ಕ್ರಿಯಾಶೀಲ ಬರಹಗಾರರಾಗಿದ್ದಾರೆ.ಇಂತಹವರು ದಾವಣಗೆರೆ ತಾಲ್ಲೂಕು 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಇಡೀ ಸಾಹಿತ್ಯ ವಲಯಕ್ಕೆ ಸಂತೋಷ ತಂದಿದೆ. ಹಾಗೂ ಸಮ್ಮೇಳನಕ್ಕೆ ಮೆರಗು ಬಂದಂತಾಗಿದೆ ಎಂದು ತಿಳಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿ ಸಿ ಜಿ ಜಗದೀಶ್ ಕೂಲಂಬಿ,ಜಿಗಳಿ ಪ್ರಕಾಶ್, ಜಿಲ್ಲಾ ಕ ಸಾ ಪ ಪದಾಧಿಕಾರಿಗಳಾದ ಶ್ರೀಮತಿ ಮಲ್ಲಮ್ಮ, ರುದ್ರಾಕ್ಷಿಬಾಯಿ, ತಾಲ್ಲೂಕು ಕಸಾಪ ದ ಗೌರವ ಕಾರ್ಯದರ್ಶಿ ನಾಗರಾಜ್ ಸಿರಿಗೆರೆ, ದಾಗಿನಕಟ್ಟೆ ಪರಮೇಶಪ್ಪ, ಷಡಕ್ಷರಪ್ಪ ಎಂ ಬೇತೂರು, ಶಿವಕುಮಾರ್, ಎ ಎಂ ಸಿದ್ದೇಶ್ ಕುರ್ಕಿ,ವೀಣಾ ಕೃಷ್ಣಮೂರ್ತಿ, ನಾಗವೇಣಿ,ಎಸ್ ಸಿದ್ದೇಶಪ್ಪ,ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ ಪರಮೇಶಪ್ಪ, ಸಂಸ್ಕಾರ ಭಾರತಿ ಮಹಾಲಿಂಗಪ್ಪ,ಹರಿಹರ ತಾಲ್ಲೂಕು ಕ ಸಾ ಪ ಕಾರ್ಯದರ್ಶಿ ವಿಜಯ ಮಹಾಂತೇಶ, ಹರಿಹರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಭೂಮೇಶ್,ಮುಂತಾದವರು ಉಪಸ್ಥಿರಿದ್ದರು.ಆರಂಭದಲ್ಲಿ ಸಿ ಜಿ ಜಗದೀಶ್ ಕೂಲಂಬಿ ಸ್ವಾಗತಿಸಿದರು, ದಾಗಿನಕಟ್ಟೆ ಪರಮೇಶಪ್ಪ ನಿರೂಪಿಸಿದರು, ರುದ್ರಾಕ್ಷಿಬಾಯಿ ಪ್ರಾರ್ಥಿಸಿದರು, ಶಿವಕುಮಾರ್ ವಂದಿಸಿದರು.