ತಾಲ್ಲೂಕು ಕಛೇರಿಯಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತ್ಸೋವ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಫೆ.02:- ಹಿಂದುಳಿದ ವರ್ಗಗಳ ಸಮುದಾ ಯದ ಎಲ್ಲಾ ಶಿವಶರಣರ ಜಯಂತಿಯನ್ನು ಬಯಲು ರಂಗ ಮಂದಿರದಲ್ಲಿ ಒಂದೆ ದಿನ ಒಂದೆ ವೇದಿಕೆಯಲ್ಲಿ ಕಾರ್ಯಕ್ರಮ ಮಾಡಬೇಕು ಎಂದು ತಾಲ್ಲೂಕು ಅಧ್ಯಕ್ಷ ಸಿದ್ದನಕೊಪ್ಪಲು ಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದರು.
ಪಟ್ಟಣದ ತಾಲ್ಲೂಕು ಕಛೇರಿಯ ಸಬಾಂಗಣದಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತ್ಸೋವ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮುದಾ ಯದ ಬಹುದಿನಗಳ ಬೇಡಿಕೆಯನ್ನು ಈಡೇರಿಸುವಂತೆ ಸಲ್ಲಿಸಿದ ಮನವಿಗೆ 2014ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನವರು ಮಾಚಿದೇವರ ಜಯಂತಿಯನ್ನು ಸರ್ಕಾರಿ ಕಛೇರಿಯಲ್ಲಿ ಕಡ್ಡಾಯವಾಗಿ ಆಚರಿಸಬೇಕೆಂದು ಆದೇಶ ನೀಡಿದರು ಇದಕ್ಕೆ ನಮ್ಮ ಸಮುದಾಯದವರಿಗೆ ಕೃತಜ್ಞತೆ ಸಲ್ಲಿಸುತ್ತದೆ ಎಂದರು.
12ನೇ ಶತಮಾನದ ಬಸವಣ್ಣನವರ ಅತ್ಯಂತ ಆತ್ಮೀಯ ಗೆಳಯನಾಗಿದ್ದ ದೀನ-ದಲಿತರ ದುರ್ಬಲರ ಶೋಷಿತರ ಹಾಗೂ ಹಿಂದುಳಿದ ವರ್ಗದವರ ಮೇಲೆ ಶೋಷಣೆಯ ವಿರುದ್ದ ಧ್ವನಿ ಎತ್ತಿದವರು ಮಡಿವಾಳ ಮಾಚಿದೇವರು ಎಂದರು. ಹಿಂದುಳಿದ ವರ್ಗಗಳು ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮುಂದೆ ಬರಲು ಶಿಕ್ಷಣಕ್ಕೆ ಹೆಚ್ಚು ಅಧ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಗ್ರೇಡ್2 ತಹಸೀಲ್ದಾರ್ ಬಾಲ ಸುಬ್ರಮಣ್ಯ, ತಾ.ಪಂ ಇಓ ಜಿ.ಕೆ.ಹರೀಶ್, ಬಿಇಓ ಆರ್.ಕೃಷ್ಣಪ್ಪ, ಪಶು ಅಧಿಕಾರಿ ಡಾ.ಬಿ.ಮಂಜುನಾಥ್, ಸಹಕಾರಿ ಇಲಾಖೆ ಅಧಿಕಾರಿ ಎಸ್.ರವಿ, ನಿವೃತ್ತ ಪಿಎಸ್‍ಐ ಬೋರ್‍ಶೆಟ್ಟಿ, ಸಾಲಿಗ್ರಾಮ ತಾ.ಅಧ್ಯಕ್ಷ ಹರ್ಷವರ್ಧನ್, ನಗರಧ್ಯಕ್ಷ ಎಂ.ಜೆ.ರಮೇಶ್, ನಗರ ಯೂತ್ ಕಾಂಗ್ರೇಸ್ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಪ್ರಕಾಶ್, ಲೋಕೇಶ್, ದರ್ಶನ್(ಮಂಡಿ)ಕುಮಾರ್, ತಿಮ್ಮಶೆಟ್ಟಿ, ಕೃಷ್ಣಯ್ಯ, ಪೆÇಲೀಸ್ ಶಿವಣ್ಣ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.