ತಾಲ್ಲೂಕು ಎಸ್ಸಿಎಸ್ಟಿ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಸೂರ್ಯವಂಶಿ ಆಯ್ಕೆ

ವಿಜಯಪುರ, ಏ.21-ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ (ರಿ) ಬೆಂಗಳೂರು. ಜಿಲ್ಲಾ ಸಮಿತಿ ವಿಜಯಪುರ ಇದರ ಅಡಿಯಲ್ಲಿ ನಡೆದ ವಿಜಯಪುರ ತಾಲ್ಲೂಕಿನ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ತಾಲ್ಲೂಕಿನ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ವಿಜಯಕುಮಾರ್ ಸೂರ್ಯವಂಶಿ ಇವರು ಆಯ್ಕೆಯಾಗಿರುತ್ತಾರೆ .ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀಕಾಂತ್ ಬಿ ಎಂ ಉಪಾಧ್ಯಕ್ಷರಾಗಿ ರವಿ ದೊಡಮನಿ ಮಹಿಳಾ ಉಪಾಧ್ಯಕ್ಷರಾಗಿ ಶ್ರೀಮತಿ ಪ್ರಮೀಳಾ ಪ್ರಭಾಕರ್ .ಕೋಶಾಧ್ಯಕ್ಷರಾಗಿ ಶ್ರೀಮತಿ ಶೀತಲ್ ದೊಡಮನಿ ಸಹ ಕಾರ್ಯದರ್ಶಿಯಾಗಿ ಬಸವರಾಜ ದೊಡಮನಿ ಸಂಘಟನಾ ಕಾರ್ಯದರ್ಶಿಯಾಗಿ ವಿನೋದ ರಾಠೋಡ ಸಂಘಟನಾ ಕಾರ್ಯದರ್ಶಿ ಮಹಿಳಾ ಶ್ರೀಮತಿ ಪಿ .ಎಂ ಗುನ್ನಾಪೂರ .ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಜಿಲ್ಲಾ ಅಧ್ಯಕ್ಷರಾದ ಬಿ.ಎಚ್. ನಾಡಗಿರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ