ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ ಚಳ್ಳಕೆರೆ ಶಾಸಕರು

ಚಳ್ಳಕೆರೆ.ಜೂ.೫;   ಶಾಸಕರಾದ  ಟಿ ರಘುಮೂರ್ತಿರವರು ಚಳ್ಳಕೆರೆ ನಗರದ ತಾಲೂಕು ಆಸ್ಪತ್ರೆಗೆ ಭೇಟಿ ಪರಿಶೀಲನೆ ನಡೆಸಿದರು. ಈ ಸಮಯದಲ್ಲಿ ಪ್ರಕಾಶ ಸ್ಪಾಂಜ ಅಂಡ್ ಐರನ್ ಕಂಪನಿಯವರು 78 ಆಕ್ಸಿಜನ್  ಬೆಡ್ ಮತ್ತು 5 ಐಸಿಯು ಬೆಡ್ ಗಳನ್ನು ನಿರ್ಮಾಣ ಮಾಡಲು ಒಪ್ಪಿ  ಶಾಸಕರಿಂದ ಕಡತವನ್ನು ಪಡೆದುಕೊಂಡರು          ಈ ಸಮಯದಲ್ಲಿ ಪ್ರಕಾಶ್ ಸ್ಪಾಂಜ ಅಂಡ್ ಐರನ್ ಕಂಪನಿ ರುದ್ರಪ್ಪ, ತಹಶೀಲ್ದಾರ್ ಮಲ್ಲಿಕಾರ್ಜುನ್,  ಟಿಎಚ್ಒ  ಪ್ರೇಮ ಸುಧಾ ಮುಖ್ಯ ವೈದ್ಯಾಧಿಕಾರಿಗಳಾದ ವೆಂಕಟೇಶ್, ನಗರಸಭಾ ಅಧ್ಯಕ್ಷರಾದ  ಜಯಲಕ್ಷ್ಮಿ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಮೇಶ್ ಗೌಡ  ಹಾಜರಿದ್ದರು.