ತಾಲ್ಲೂಕಿನ ವಿವಿಧೆಡೆ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ.

ಹರಪನಹಳ್ಳಿ.ಜೂ.೧೦ :ಸ್ಥಳೀಯ ಶಾಸಕ ಜಿ.ಕರುಣಾಕರರೆಡ್ಡಿ ಅವರು  ತಾಲೂಕಿನ ವಿವಿಧೆಡೆ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.ಕಡತಿ ಗ್ರಾಮದಲ್ಲಿ ಕಡತಿ ಗ್ರಾಮದಿಂದ ನಂದ್ಯಾಲ ಕ್ಯಾಂಪ್ ವರೆಗೂ ೧.೭೫ ಕಿಲೋ ಮೀಟರ್ ಉದ್ದದ ೧.೫೦ ಕೋಟಿ ರು.ಗಳ  ಸಿಸಿ ರಸ್ತೆ ಕಾಮಗಾರಿಗೆ  ಭೂಮಿ ಪೂಜೆ ನೆರವೇರಿಸಿದರು.ಮಾದಾಪುರ ಗ್ರಾಮದಲ್ಲಿ ೧.೧೦ ಕೋಟಿ ರು. ರಸ್ತೆ ಅಭಿವೃದ್ದಿಗೆ ಶಂಕುಸ್ಥಾಪನೆ , ಕೂಲಹಳ್ಳಿ ಗ್ರಾಮದಲ್ಲಿ ಸಹ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.ಕೂಲಹಳ್ಳಿ ಗ್ರಾಮದಲ್ಲಿ  ಶಂಕುಸ್ಥಾಪನೆಯ ಪಲಕಕ್ಕೆ  ೬೦ ಕಿಲೋ ತೂಕದ ಸೇಬು ಹಾರವನ್ನು ಹಾಕಿ ಕೂಲಹಳ್ಳಿ ಗೋಣಿ ಬಸವೇಶ್ವರ ಮಠದ ಪಟ್ಟದ ಚಿನ್ಮಯ ಸ್ವಾಮೀಜಿಗಳ  ಸಮ್ಮುಖದಲ್ಲಿ   ಭೂವಿ ಪೂಜೆ ಕೈಗೊಳ್ಳಲಾಯಿತು. ನಂತರ ಆ ಹಾರವನ್ನು ಶಾಸಕರಿಗೂ ಹಾಕಿದರು.ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ,  ಮುಖಂಡರಾದ ಆರ್. ಲೋಕೇಶ, ಸಣ್ಣ ಹಾಲಪ್ಪ, ರಾಘವೇಂದ್ರಶೆಟ್ಟಿ, ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್ , ಕಿರಣ್ ಶಾನ್ಬಾಗ,  ಶಿರಗಾನಹಳ್ಳಿ ವಿಶ್ವನಾಥ, ಯು.ಪಿ.ನಾಗರಾಜ, ಎಂ.ಸಂತೋಷ ತಹಶೀಲ್ದಾರ ನಂದೀಶ, ಸಿಪಿಐ ನಾಗರಾಜ ಎಂ.ಕಮ್ಮಾರ, ಪಿಎಸ್ ಐ ಪ್ರಕಾಶ, ಪ್ರಶಾಂತ ಇತರರು ಹಾಜರಿದ್ದರು.