ತಾಲ್ಲೂಕಿನ ಮೊದಲನೇ ತ್ರೈಮಾಸಿಕ ಕೆಡಿಪಿ ಸಭೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.09:  ತಾಲ್ಲೂಕು ಪಂಚಾಯಿತಿ ಸಭಾಂಗಣದ ಆವರಣದಲ್ಲಿ ಶುಕ್ರವಾರ ಕರೆಯಲಾಗಿದ್ದ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
 ನೂತನ ಶಾಸಕ ಬಿ.ಎಂ ನಾಗರಾಜ ಅವರ ಅಧ್ಯಕ್ಷತೆ ವಹಿಸಿ  ಮಾತನಾಡಿದರು ತಾಲ್ಲೂಕಿನ ಆಡಳಿತದ ಹಿತದೃಷ್ಟಿಯಿಂದ ಕೆಡಿಪಿ ಸಭೆ ಬಹುಮುಖ್ಯವಾಗಿದ್ದು ಎಂದು ತಿಳಿಸಿದರು.
 ತಹಶೀಲ್ದಾರ್ ಎನ್.ಆರ್ ಮಂಜುನಾಥ ಸ್ವಾಮಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ,‌ ತಾಲೂಕು ಆರೋಗ್ಯ ಅಧಿಕಾರಿ ಈರಣ್ಣ, ಸಿಡಿಪಿಒ ಪ್ರದೀಪ್ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಪಿಡಿಒಗಳು ಇದ್ದರು.