ತಾಲ್ಲೂಕಿನಾದ್ಯಂತ ಆಟೋ ಚಾಲಕರಿಗೆ ಆಹಾರದ ಕಿಟ್ ವಿತರಣೆ

ಕೆ.ಆರ್.ಪೇಟೆ. ಜೂ.06: ಕೊರೋನಾದಿಂದ ಕಂಗೆಟ್ಟಿರುವ ಆಟೋ ಚಾಲಕರ ಬದುಕು ದುಸ್ಥರವಾಗಿರುವುದನ್ನು ಗಮನಿಸಿದ ಸಚಿವ ಕೆ.ಸಿ.ನಾರಾಯಣಗೌಡ ತಾಲ್ಲೂಕಿನಾದ್ಯಂತ ಇರುವ ಆಟೋ ಚಾಲಕರುಗಳಿಗೆ ಆಹಾರದ ಕಿಟ್‍ಗಳನ್ನು ವಿತರಿಸಲು ಕ್ರಮ ಕೈಗೊಂಡಿದ್ದಾರೆ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಪುರಸಭಾ ಅದ್ಯಕ್ಷೆ ಮಹಾದೇವಿ ನೇತೃತ್ವದಲ್ಲಿ ಆಟೋ ಚಾಲಕರಿಗೆ ಆಹಾರದ ಕಿಟ್‍ಗಳನ್ನು ವಿತರಿಸಿ ಮಾತನಾಡಿದರು.
ಕಳೆದ ಒಂದು ವರ್ಷದಿಂದಲೂ ಕೊರೋನಾ ಕರಿನೆರಳಿನಿಂದಾಗಿ ಜನತೆ ಸಂಕಷ್ಟ ಪಡಬೇಕಾದ ವಾತಾವರಣ ನಿರ್ಮಾಣವಾಗಿದೆ. ಇದರಿಂಂದಾಗಿ ಇಡೀ ಜಗತ್ತು ನಲುಗುತ್ತಿದೆ. ಇಂಥಹ ಸಮಯದಲ್ಲಿ ಮಹಾಮಾರಿಯ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಮಾಡಲಾಗಿದ್ದು ದುಡಿಯುವ ಕೈಗಳಿಗೆ ಕೆಲಸವಿಲ್ಲದೇ ಮನೆಯಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಅರಿತ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ತಾಲ್ಲೂಕಿನಾದ್ಯಂತ ತೀರಾ ಸಂಕಷ್ಟದಲ್ಲಿರುವವರನ್ನು ಗುರುತಿಸಿ ಅವರುಗಳಿಗೆ ಹತ್ತು ಸಾವಿರ ಆಹಾರದ ಕಿಟ್‍ಗಳನ್ನು ವೈಯಕ್ತಿಕವಾಗಿ ನೀಡುವ ಮನಸ್ಸು ಮಾಡಿದ್ದಾರೆ.
ಆಟೋ ಚಾಲಕರು ಲಾಕ್ ಡೌನ್ ಪರಿಣಾಮದಿಂದ ಕಷ್ಟದ ದಿನಗಳನ್ನು ಎದುರಿಸುತ್ತಿದ್ದು ಇಂದು ಹೊಸಹೊಳಲು ಗ್ರಾಮದ 80 ಆಟೋ ಚಾಲಕರಿಗೆ ಹಾಗೂ ಪಟ್ಟಣದ 250 ಆಟೋ ಚಾಲಕರುಗಳಿಗೆ ಆಹಾರದ ಕಿಟ್‍ಗಳನ್ನು ವಿತರಣೆ ಮಾಡುತ್ತಿದ್ದು ಆಟೋ ಚಾಲಕರು ಸಾಮಾಜಿಕ ಅಂತರದಿಂದ ಸರತಿ ಸಾಲಿನಲ್ಲಿ ಬಂದು ಆಹಾರದ ಕಿಟ್ಟ್‍ಗಳನ್ನು ಪಡೆಯುತ್ತಿದ್ದಾರೆ. ತಾಲ್ಲೂಕಿನಾದ್ಯಂತ ಇರುವ ಕಡುಬಡವರನ್ನು ಗುರುತಿಸಲು ತಹಶೀಲ್ದಾರ್ ರವರಿಗೆ ಸೂಚನೆ ನೀಡಿದ್ದು ಅವರುಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಅವರುಗಳಿಗೂ ಕಿಟ್‍ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪುರಸಬಾ ಅದ್ಯಕ್ಷೆ ಮಹಾದೇವಿನಂಜುಂಡ, ತಾಲ್ಲೂಕು ಬಿಜೆಪಿ ಮಹಿಳಾ ಅದ್ಯಕ್ಷೆ ಲತಾಮುರುಳಿ, ಪುರಸಬಾ ಸದಸ್ಯ ಹೆಚ್.ಆರ್.ಲೋಕೇಶ್, ಶಾಮಿಯಾನ ತಿಮ್ಮೇಗೌಡ, ತಾಲ್ಲೂಕು ಬಿಜೆಪಿ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಬಿಜೆಪಿ ಮುಖಂಡರಾದ ನಂಜುಂಡ, ದಿನೇಶ್, ವಿಶ್ವನಾಥ್, ಶ್ರೀನಿವಾಸ್, ಉದ್ಯಮಿ ಕೆ.ಎಸ್.ರಾಜೇಶ್, ಕರ್ತೆನಹಳ್ಳಿ ಸುರೇಶ್ ಸೇರಿದಂತೆ ಹಲವರು ಹಾಜರಿದ್ದರು.