ತಾಲ್ಲೂಕಿನಲ್ಲಿ ಆನೆ ದಾಳಿಗೆ ಮಹಿಳೆ ಸಾವು

ಹುಣಸೂರು,ಡಿ.30:- ಜಮೀನಿನಲ್ಲಿ ರಾಗಿ ಒಕ್ಕಣೆ ಮಾಡುತ್ತಿದ ಮಹಿಳೆ ಮೇಲೆ ಒಂಟಿ ಸಲಗ ದಾಳಿ ನಡೆಸಿ ಮಹಿಳೆ ಬಲಿಯಾಗಿರುವ ಘಟನೆ ತಾಲ್ಲೂಕಿನ ಬಿಳಿಕೆರೆ ಹೋಬಳಿ ಚಿಕ್ಕಬೀಚನಹಳ್ಳಿ ಗ್ರಾಮದಲ್ಲಿ ಇಂದು ಬೆಳ್ಳಿಗೆ ನಡೆದಿದೆ.
ಗ್ರಾಮದ ಯಜಮಾನ ಸಿದ್ದೇಗೌಡರ ಪತ್ನಿ ಚಿಕ್ಕಮ್ಮ 57 ವರ್ಷ ಆನೆ ದಾಳಿಗೆ ಬಲಿಯಾದ ದುರ್ದೈವಿ ಮಹಿಳೆ. ಸ್ಥಳದಲ್ಲಿದ್ದ ಚಿಕ್ಕಮ್ಮ ಹಾಗೂ ಪತಿ ಸಿದ್ದೇಗೌಡರ ಮೇಲೆ ದಾಳಿ ಮಾಡಿರುವ ಆನೆ. ಆನೆಯಿಂದ ತಪ್ಪಿಸಿಕೊಂಡ ಸಿದ್ದೇಗೌಡ. ಓಡಲು ಸಾಧ್ಯವಾಗದೆ ಆನೆ ತುಳಿತಕೊಳಗಾಗಿ ಮೃತಪಟ್ಟ ಮಹಿಳೆ ಚಿಕ್ಕಮ್ಮ.
ಅರಣ್ಯ ಇಲಾಖೆಯ ಮೈಸೂರು ವಲಯ ಹಿರಿಯ ಅಧಿಕಾರಿಗಳು ಹಾಗೂ ಪೆÇಲೀಸರು ಸ್ಥಳದಲ್ಲಿ ಜಮಾಹಿಸಿದ್ದು, ಮುಂದಿನ ಕ್ರಮ ಕ್ಯೆಗೊಂಡಿದ್ದಾರೆ.
ಮೃತ ಮಹಿಳೆ ಚಿಕ್ಕಮ್ಮ ಕುಟುಂಬಸ್ಥರನ್ನು ಭೇಟಿಯಾದ ಶಾಸಕ ಜಿ.ಟಿ.ದೇವೆಗೌಡ. ಕುಟುಂಬಸ್ಥರನ್ನ ಭೇಟಿಯಾಗಿ ಸಾಂತ್ವನ ತಿಳಿಸಿದರು. ಆನೆಯನ್ನ ಹಿಡಿಯಲು ಕಾರ್ಯಚರಣೆ ಮಾಡುವಂತೆ ಅರಣ್ಯಧಿಕಾರಿಗಳಿಗೆ ಸೂಚನೆ ನೀಡಿದರು. ಸರ್ಕಾರದಿಂದ ಕೊಡುವ ಪರಿಹಾರ ಹಣವನ್ನ ತಕ್ಷಣೆ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಜಿ.ಟಿ.ದೇವೆಗೌಡ ಸೂಚಿಸಿದರು.