ತಾಲ್ಲೂಕಾಧ್ಯಕ್ಷ ಆಯ್ಕೆ

ಜಗಳೂರಿನಲ್ಲಿ ಸಾಮಾಜಿಕ ಸಂಘರ್ಷ ಸಮಿತಿಯ ತಾಲ್ಲೂಕಾಧ್ಯಕ್ಷರನ್ನಾಗಿ ಅಸಗೋಡು ಮರುಳಸಿದ್ದಪ್ಪನವರನ್ನು ಆಯ್ಕೆ ಮಾಡಲಾಯಿತು. ಈ ವೇಳೆ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಪಿ.ಎನ್.ನಾಗೇಶ್, ಜಿಲ್ಲಾಧ್ಯಕ್ಷ ತಿಪ್ಪೇರುದ್ರಪ್ಪ ಪಿ., ಪ್ರಧನ ಕಾರ್ಯದರ್ಶಿ, ಗುಂಬನೂರು ಪರಶುರಾಮ್, ಉಪಾಧ್ಯಕ್ಷ ಕಾಳಪ್ಪ, ಸಾಮಿಲ್, ನಗರ ಸಮಿತಿ ಎಲ್.ಬಿ.ಹನುಮಂತಪ್ಪ, ಪದಾದಿಕಾರಿಗಳಾದ ಜಯ್ಯಪ್ಪ, ಪರಶುರಾಮ್, ಕೆ.ಪಿ.ಪಾಲಯ್ಯ, ಮಾದಿಹಳ್ಳಿ ಗೋಣೇಶ್, ಗಿರೀಶ್ ಒಡೆಯರ್, ಮಾಳಮ್ಮನಹಳ್ಳಿ ವೆಂಕಟೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.