
ಬೆಳಗಾವಿ,ಫೆ.25: ಜಿಲ್ಲೆಯ ಚೆನ್ನಮ್ಮನ ಕಿತ್ತೂರು ತಾಲೂಕು ಕೆ.ಬಿ . ಪಟ್ಟಿಹಾಳ ಗ್ರಾಮದಲ್ಲಿ ನಡೆದ ಯೋಜನಾ ಕಚೇರಿಯ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡರವರು ಉದ್ಘಾಟನೆ ಮಾಡಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ.ಮೈತ್ರಯಿಣಿ ಗದಿಗೆಪ್ಪಗೌಡರ ಪ್ರಸುತ್ತ ಜಗತ್ತಿನಲ್ಲಿ ಮಕ್ಕಳ ಶಿಕ್ಷಣದಲ್ಲಿ ಪೆÇೀಷಕರ ಪಾತ್ರದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ರೋಹಿಣಿ ಬಾಬಾಸಾಹೇಬ ಪಾಟೀಲ ಕೆ.ಪಿ.ಸಿ.ಸಿ ಸದಸ್ಯರು ಬೆಂಗಳೂರು ,ಶ್ರೀಮತಿ ಬಸಮ್ಮಾ ಶಿವಾನಂದ ಗುರ್ಲಕಟ್ಟಿ ಮಾಜಿ ತಾಲೂಕು ಪಂಚಾಯತ ಅಧ್ಯಕ್ಷರು, ಪ್ರದೀಪ್ ಜಿ ಶೆಟ್ಟಿ ನಿರ್ದೇಶಕರು ಶ್ರೀ ಕ್ಷೇ ಧ ಗ್ರಾ ಯೋ (ರಿ.) ಬೆಳಗಾವಿ ಕ್ಷೇತ್ರ ಯೋಜನಾಧಿಕಾರಿಗಳಾದ ಪ್ರಶಾಂತ ನಾಯ್ಕ ,ತಾಲೂಕಿನ ಎಲ್ಲಾ ಮೇಲ್ವಿಚಾರಕರ ಶ್ರೇಣಿಯ ಸಿಬ್ಬಂದಿಗಳು,ಸೇವಾಪ್ರತಿನಿಧಿಗಳು ಮತ್ತು ತಾಲೂಕಿನ ಎಲ್ಲಾ ಜೆ.ವಿ.ಕೆ ಕೇಂದ್ರದ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.