ತಾಲೂಕ ಮಟ್ಟದ ಪೆÇೀಷಣ ಮಾಸಾಚರಣೆ

(ಸಂಜೆವಾಣಿ ವಾರ್ತೆ)
ಇಂಡಿ: ಸೆ.14:ಗರ್ಭಿಣಿಯರು ಹಾಗೂ ಮಕ್ಕಳಲ್ಲ ಪೌಷ್ಠಿಕಾಂಶ ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆÇೀಷಣ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು,ತಾಯಿ ಮತ್ತು ಶಿಶು ಉತ್ತಮ ಪೌಷ್ಠಿಕ ಆಹಾರ ಸೇವನೆ ಮಾಡುವುದು ,ರಕ್ತಹೀನತೆ,ಅತಿಸಾರ ಭೇದಿ ತಡೆಗಟ್ಟುವುದು ,ಪೌಷ್ಠಿಕ ಆಹಾರ ಪೆÇರೈಕೆ ಮಾಡುವುದರ ಮೂಲಕ ತಾಯಿ ಮತ್ತು ಶಿಶುವಿನ ಉತ್ತಮ ಆರೋಗ್ಯ ಕಾಪಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಶಿಶಿ ಅಭಿವೃದ್ದಿ ಯೋಜನಾ„ಕಾರಿ ಎಸ್.ಜಿ.ಹಿರೇಮನಿ ಹೇಳಿದರು.
ಅವರು ಪಟ್ಟಣದ ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಮ್ಮಿಕೊಂಡ ತಾಲೂಕ ಮಟ್ಟದ ಪೆÇೀಷಣ ಮಾಸಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುರಾತನ ಕಾಲದಿಂದಲೂ ನಮ್ಮ ಅಜ್ಜಿಯಂದಿರು ಗರ್ಭಿಣಿಯರ,ಬಾಣಂತಿಯರಿಗೆ ಯಾವ ರೀತಿಯಾಗಿ ಸಮತೋಲನ ನೀಡಿ ಆರೈಕೆ ಮಾಡಬೇಕೆಂದು ನಮಗೆ ಹೇಳಿಕೊಡುತ್ತಿದ್ದರು.ಆದರೆ ಈಗ ಮತ್ತಷ್ಟು ಅರಿವು ಬೇಕಾಗಿರುವುದರಿಮದ ಸರ್ಕಾರ ಈ ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.
ಮಕ್ಕಳಲ್ಲಿ ಅಪೌಷ್ಠಿಕ ಹೋಗಲಾಡಿಸಲು ಮಕ್ಕಳು,ಗರ್ಭಿಣಿಯರಲ್ಲಿ ಮತ್ತು ಕಿಶೋರಿಯರಲ್ಲಿ ಕಂಡು ಬರುವ ರಕ್ತಹೀನತೆಯನ್ನು ಹೋಗಲಾಡಿಸಲು ಪೌಷ್ಠಿಕ ಆಹಾರ ಸೇವನೆ ಮಾಡಬೇಕು.ನೈಸರ್ಗಿಕವಾಗಿ ಸಿಗುವ ತರಕಾರಿ ಹಣ್ಣುಗಳು,ಹೈನು,ದವಸ ಧಾನ್ಯ,ಕಾಳುಗಳು ಎಲ್ಲವನ್ನೂ ನಮ್ಮ ದಿನನಿತ್ಯದ ಆಹಾರದಲ್ಲಿ ಬಳಸಬೇಕು.ಅಂದಾಗ ಮಾತ್ರ ತಾಯಿ,ಮಗು ಆರೋಗ್ಯ ಕಾಪಾಡಲು ಸಾಧ್ಯ ಎಂದು ಹೇಳಿದರು.
ತಾಲೂಕ ಆರೋಗ್ಯಾ„ಕಾರಿ ಡಾ.ಅರ್ಚನಾ ಕುಲಕರ್ಣಿ ಮಾತನಾಡಿ,ಗರ್ಭಿಣಿಯರ ನೊಂದಣಿಯಾದ ತಕ್ಷಣ ಗರ್ಭಿಣಿಯರ ನಿಯಮಿತ ಆರೋಗ್ಯ ತಪಾಸಣೆ ಮಾಡುವುದು ಉತ್ತಮ.ಆರೋಗ್ಯವಂತ ಮಗು ಜನನವಾಗುವಂತೆ,ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಅಕ್ಷರಾಸೋಹ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಯರಗುದ್ರಿ ಮಾತನಾಡಿ,6 ವರ್ಷದ ಮಕ್ಕಳು ಹಾಗೂ ಶಾಲೆಗೆ ಬರುವ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ.ಅಂತೆಯೇ ಮೊಟ್ಟೆ ಪೆÇರೈಕೆ ಮಾಡುವ ಮೂಲಕ ಮಕ್ಕಳಲ್ಲಿ ಅಪೌಷ್ಠಿಕತೆ ಹೋಗಲಾಡಿಸಲು ಹಾಗೂ ಜಾಗ್ರತಿ ಮೂಡಿಸಲು ಎಲ್ಲರು ಇಂತಹ ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂದು ಹೇಳಿದರು.
ಡಾ.ಸಂತೋಷ ಶಿಂಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಡಾ.ಸವಿತಾ,ಎಂ.ಎಸ್.ಬೆಲ್ಲದ ಕಾರ್ಯಕ್ರಮದಲ್ಲಿ ಇದ್ದರು.ಮೆಲ್ವಿಚಾರಕಿ ಹಲೀಮಾ ಮುಲ್ಲಾ ಸ್ವಾಗತಿಸಿದರು.ಎಸ್.ಎಸ್.ಪಾಟೀಲ ನಿರೂಪಿಸಿದರು.ಸಿ.ಎಂ.ಕಾಳೆ ವಂದಿಸಿದರು.ಇದೆ ಸಂದರ್ಭದಲ್ಲಿ ಪೌಷ್ಠಿಕ ಆಹಾರ ಪ್ರದರ್ಶನ ಮಾಡುವುದರ ಜೊತೆಗೆ ,ಚೊಚ್ಚಲ ಗರ್ಭಿಣಿಯರ ಸೀಮಂತ ಕಾರ್ಯಕ್ರಮ ಹಾಗೂ 6 ತಿಂಗಳ ಮೆಲ್ಪಟ್ಟ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ಮಾಡಲಾಯಿತು.