
ಸಿರವಾರ,ಆ.೨೦-
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ರಾಯಚೂರು ಹಾಗೂ ಸ್ಥಳೀಯ ಸಂಸ್ಥೆ ಮಾನ್ವಿ ವತಿಯಿಂದ ಮಾನವಿ ನಗರದ ಕಲ್ಮಠ ಶಾಲೆಯಲ್ಲಿ ನಡೆದ ’ಸದ್ಭಾವನಾ ದಿನಾಚರಣೆ’ ಹಾಗೂ ’ತಾಲೂಕ ಮಟ್ಟದ ದೇಶಭಕ್ತಿ ಗೀತಾಗಾಯನ ಸ್ಪರ್ಧೆ’ ಯಲ್ಲಿ ಪಟ್ಟಣದ ಶಾಂತಿನಿಕೇತನ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮವಾದ ಪ್ರದರ್ಶನ ತೋರಿದ್ದಾರೆ.
ತಾಲೂಕ ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆ’ ಯಲ್ಲಿ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಬ್ಸ್ ಮತ್ತು ಬುಲ್-ಬುಲ್ಸ್ ನ ಎರಡೂ ತಂಡಗಳು ಪ್ರಥಮ ಸ್ಥಾನ ಪಡೆದಿವೆ. ಹಾಗು ಗೈಡ್ಸ್‌ನ ತಂಡ ದ್ವಿತೀಯ ಸ್ಥಾನ ಪಡೆದಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಬಸವಲಿಂಗಪ್ಪ ಸಾಹುಕಾರ ಅರಿಕೇರಿ ಹಾಗು ಪ್ರಾಚಾರ್ಯೆಯು ಅನುರಾಧಾ ಮತ್ತು ಪಾಲಕರು ಹರ್ಷ ವ್ಯಕ್ತಪಡಿಸಿ, ಪ್ರಶಂಸಿದ್ದಾರೆ. ಶಾಲೆಯ ಉಮಾದೇವಿ, ಕುಸುಮಾ ಪವಾರ್ ಇದ್ದರು.