ತಾಲೂಕ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಶಹಾಬಾದ:ಆ.25:ಚಿತ್ತಾಪೂರ ಪಟ್ಟಣದ ಕ್ರೀಡಾಂಗಣದಲ್ಲಿ ನಡೆದ ಚಿತ್ತಾಪೂರ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ರಾವೂರಿನ ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳು ಭಾಗಿಯಾಗಿ ಕ್ರೀಡಾಕೂಟದ ವಿವಿಧ ವಿಭಾಗಗಳಲ್ಲಿ ಆಯ್ಕೆಯಾಗುವುದರ ಮೂಲಕ ತಾಲೂಕ ಮಟ್ಟಕ್ಕೆ ಆಯ್ಕೆಯಾಗಿ ವಿಭಾಗಗಳು: ಥ್ರೋಬಾಲ್-ಬಾಲಕರ ಮತ್ತು ಬಾಲಕಿಯರು(ಪ್ರಥಮ), ಬಾಲಕರ 4*100 ರೀಲೆ-ಯೊಗೇಶ, ಸಾಹಿಲ್, ತಾಯಪ್ಪ,ದೇವರಾಜ (ಪ್ರಥಮ), ಬಾಲಕಿಯರ ಗುಂಡು ಎಸೆತ ಮತ್ತು ಚಕ್ರ ಎಸೆತ- ತೇಜಸ್ವಿನಿ (ಪ್ರಥಮ), ಬಾಲಕರ 1500ಮೀ ಓಟ- ನಂದೀಶ (ದ್ವೀತಿಯ), 800ಮೀ- ಪ್ರವೀಣ (ದ್ವೀತಿಯ), 400ಮೀ- ಸಾಹೀಲ್ (ದ್ವೀತಿಯ), ಬಾಲಕಿಯರ ತ್ರಿವಿಧ ಜಿಗಿತ-ತ್ರಿವೇಣಿ(ದ್ವೀತಿಯ), ಬಾಲಕರ ತ್ರಿವಿಧ ಜಿಗಿತ: ಶ್ರೀನಾಥ (ದ್ವೀತಿಯ)

ಮಕ್ಕಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ ಶುಭಕೋರಿದ್ದಾರೆ. ಶಾಲೆಯ ಮುಖ್ಯಗುರು ವಿಧ್ಯಾಧರ ಖಂಡಾಳ, ದೈಹಿಕ ಶಿಕ್ಷಕ ಶಿವಕುಮಾರ ಸರಡಗಿ, ಈಶ್ವರಗೌಡ ಪಾಟೀಲ, ಸಿದ್ಧಲಿಂಗ ಬಾಳಿ, ಶರಣು ಸಜ್ಜನ, ಸೋಮಶೇಖರ ಬಾಳಿ, ಅನೀಲ,ಸುಗುಣಾ ಕೋಳ್ಕೂರ, ಭುವನೇಶ್ವರಿ ಎಂ, ರಾಧಾ ರಾಠೋಡ, ಮಂಜುಳಾ ಪಾಟೀಲ, ಜ್ಯೋತಿ ತೆಗನೂರ, ಭಾರತಿ ಪರೀಟ, ಬಾಬು ಕಣ್ಣೂರ ಉಪಸ್ಥಿತರಿದ್ದರು.