ತಾಲೂಕ ದಂಡಾಧಿಕಾರಿ, ಶಾಲಾ ಮುಖ್ಯ ಗುರುಗಳಿಂದ ಶಾಲಾ ಕಟ್ಟಡ ತಡೆ

ಜೇವರ್ಗಿ :ಮಾ.14 : ತಾಲೂಕ ದಂಡಾಧೀಕಾರಿ ಹಾಗೂ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯಗುರಗಳ ಗೊಂದಲದಿಂದ ಮಕ್ಕಳು ಹೈರಾಣಾಗುತ್ತಿದ್ದಾರೆ. ಮಕ್ಕಳು ತಮ್ಮ ಜೀವ ಭಯದಲ್ಲಿ ಶಿಕ್ಷಣ ಪಡೆಯುವ ಪರಿಸ್ಥಿತಿ ಎದುರಾಗಿದೆ.

ತಾಲೂಕಿನ ಕಟ್ಟಿಸಂಗಾವಿ ಗ್ರಾಮದಲ್ಲಿ ಶಾಲಾ ಕಟ್ಟಡ ಪ್ರಾರಂಭಿಸಲು ಮತ್ತು ಕಾಮಗಾರಿಗೆ ಗೊಂದಲ ಸೃಷ್ಠಿಸಿರುವ ಮುಖ್ಯಗುರುಗಳ ಅಮಾನತಿಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಜೇವರ್ಗಿ ಶಾಖೆ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ತಹಸೀಲ್ ಕಚೇರಿ ಮುಂದುಗಡೆ ಅನಿರ್ಧೀಷ್ಟ ಧರಣಿ ನಡೆಸುತ್ತಿದೆ.

ಗಂಡ ಹೆಂಡಿತಿ ಜಗಳದ ನಡುವೆ ಕೂಸು ಬಡವಾಯಿತು ಎಂಭಂತೆ ಕಟ್ಟಿಸಂಗಾವಿ ಗ್ರಾಮದ ಶಾಲಾ ವಿದ್ಯಾರ್ಥಿಗಳು ಕಷ್ಟ ಹಾಗೂ ಭಯದ ವಾತವರಣದಲ್ಲಿ ಶೀಕ್ಷಣವನ್ನು ಪಡೆಯುವಂತಾಗಿದೆ. ತಾಲೂಕ ದಂಡಾಧೀಕಾರಿ ಶ್ರೀಮತಿ ರಾಜೇಶ್ವರಿ ಪಿ. ಎಸ್. ರವರು ಶಾಲಾ ಕಟ್ಟಡ ಕಾಮಗಾರಿಗೆ ತಾತ್ಕಾಲಿಕವಾಗ ತಡೆ ಹಿಡಿಯುವಂತೆ ಕ್ಷೇತ್ರ ಶಿಕ್ಷಣಾಧೀಕಾರಿಗಳಿ ದೂರವಾಣಿ ಕರೆಯ ಮುಲಕ ತಿಳಿಸದ್ದಾರೆ. ಅದರಂತೆ ಶಾಲೆಯ ಮುಖ್ಯಗುರುಗಳಾದ ವಿಜಯಲಕ್ಷ್ಮೀ ದೇಸಾಯಿ, ರವರು ನಾಲ್ಕೈದು ಬಾರಿ ಎಸ್. ಡಿ. ಎಂ. ಸಿ ಶಭೆಯನ್ನು ನಡೆಸಿ ಕಟ್ಟಡ ಕಾಮಗಾರಿಯ ದಿಕ್ಕನ್ನು ತಪ್ಪಿಸಿದ್ದಲದೆ ಮೇಲಧಿಕಾರಿಗಳಿಗೆ ತಪ್ಪು ಮಾಹೀತಿಯನ್ನಿ ನೀಡಿದ್ದರೆ.

ತಾಲೂಕ ದಂಡಾಧೀಕಾರಿ ಹಾಗೂ ಶಾಲಾ ಮುಖ್ಯಗುರುಗಳಿಂದ ಇಂದು ಮಕ್ಕಳು ಜೀವ ಭಯದಲ್ಲಿ ಶಾಲೆಯ ಒಳಗೆ ಕುಳಿತುಕೊಳಬೇಕಾದ ಪರಿಸ್ಥಿತಿ ಎದುರಾಗಿದೆ. ದಲಿತ ಸಂಘರ್ಷ ಸಮಿತಿ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ ಪ್ರಾರಂಭಿಸಲು ಮತ್ತು ಕಟ್ಟಡ ಕಾಮಗಾರಿಗೆ ಗೊಂದಲ ಸೃಷ್ಟಿಸಿದ ಮುಖ್ಯ ಗುರುಗಳ ಅಮಾನತ್ತು ಮಾಡಬೇಕು. ತಡೆ ಹಿಡಿಯಲು ಕಾರಣರಾದ ತಹಸೀಲ್ದಾರ ಅವರಿಗೆ ಸೂಚಿಸಬೇಕು. ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಮಕ್ಕಳು ಶಿಥಿಲಗೊಂಡ ಕಟ್ಟಡದಲ್ಲೇ ಜೀವಭಯದಲ್ಲಿ ಶಾಲೆ ಕಲಿಯುವಂತಾಗಿದೆ. ಮುಖ್ಯಗುರುಗಳು, ತಹಸೀಲ್ದಾರ ವಿನಾಕಾರಣ ತಡೆಯೊಡ್ಡುತ್ತಿದ್ದು ಇವರಿಬ್ಬರ ಮೇಲು ಮೇಲಧೀಕಾರಿಗಳು. ಅಧಿಕಾರಿಗಳು ಕ್ರಮಕೈಗೊಳಬೇಕೆಂದು ಹೋರಾಟಗಾರರು ಪಟ್ಟುಹಿಡಿದ್ದಾರೆ.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ತಾಲೂಕ ಸಂಚಾಲಕ ಸಿದ್ರಾಮ ಕಟ್ಟಿ, ಶಿವಕುಮಾರ್ ಹೆಗಡೆ, ಮರೇಪ್ಪ ಖಂಡಾಳಕರ್, ಸಂತೋಷ ತಳಗೇರಿ, ಗಂಗಣ್ಣ ತಳವಾರ್, ರವಿ ಕುಳಗೇರ, ಸಂಗಣ್ಣ ಹೊಸಮನಿ, ಮಲ್ಲಿಖಾರ್ಜುನ ಬಿಳವಾರ, ಪರಮಾನಂದ ಯಲಗೋಡ, ಬಾಬು ಮದರಿ, ನಿಂಗಪ್ಪ ಪೂಜಾರಿ, ಮನೋಹರ್ ಹೊಸಮನಿ, ಅಮೃತ ಹೊಸಮನಿ, ಬಾಬು ಮುತ್ತಕೊಡ, ಇಬ್ರಾಹೀಮ್ ಪಟೇಲ್ ಯಾಳವಾರ, ಬಿ. ಹೆಚ್. ಮಾಲಿಪಾಟೀಲ್, ರಾಜಾಪಟೇಲ್ ಪೊಲೀಸ್ ಪಾಟೀಲ್, ಮಹಂತೇಶ ಪವಾರ, ಕಾಸಿಂಪಟೇಲ್ ಕೂಡಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.