ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ವಾರ್ಷಿಕ ಸಭೆ

ಚಿಂಚೋಳಿ,ಸೆ.12- ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕಾರ್ಯಾಲಯದಲ್ಲಿ ಸಂಘದ 64ನೇ ವಾರ್ಷಿಕ ಮಹಾಸಭೆ ಸಭೆ ಜರುಗಿತು.
ಈ ಸಭೆಯಲ್ಲಿ ಮಾತನಾಡಿದ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾದ ರಮೇಶ ಯಾಕಾಪೂರ, ಅವರು, ಸಂಘದಲ್ಲಿ ಈಗಿರುವ ನೂತನವಾಗಿ ರಚನೆಯಾಗಿರುವ ಕಾಳಗಿ ತಾಲೂಕ ಮತ್ತು ಕಮಲಾಪುರ್ ತಾಲೂಕಿನ ಸೇರಿದ ನಿರ್ದೇಶಕರು ಮುಂಬರುವ ದಿನಗಳಲ್ಲಿ ತಾವುಗಳು ಕೂಡ ನೂತನ ತಾಲೂಕಕ್ಕೆ ಸೇರಬೇಕೆಂದು ಬಯಸುತ್ತೀರಾ ಅಥವಾ ಚಿಂಚೋಳಿ ತಾಲೂಕ ದಲ್ಲೇ ಇರಬೇಕೆಂದು ಬಯಸುತ್ತೀರಾ ಈ ಕುರಿತು ಸಭೆಯಲ್ಲಿ ತೀರ್ಮಾನವನ್ನು ಮಾಡಬೇಕು ಎಂದರು.
ಟಿಎಪಿಸಿ-ಎಮಸ್ ಗೆ ಸೇರಿದ ಬೇಳೆ ಕಾರ್ಖಾನೆಯು ಬಹಳ ದಿನಗಳಿಂದ ಸ್ಥಗಿತವಾಗಿದೆ ಅದನ್ನು ನಿರ್ವಹಣೆ
ಮಾಡಲು ಆಗುತ್ತಿಲ್ಲ ಆದುದರಿಂದ ಸರಕಾರದ ಪರವಾನಿಗೆ ಪಡೆದು ಮಾರಾಟ ಮಾಡಬೇಕೆಂದು ನಿರ್ಣಯಿಸಲಾಯಿತು.
ಸಭೆಯಲ್ಲಿ ತಾಲೂಕಾ ಹುಟ್ಟುವಳಿ ಮಾರಾಟ ಸಹಕಾರ ಸಂಘ ಉಪಾಧ್ಯಕ್ಷ ಪೀರಪ್ಪಾ ಸಾಸರಗಾಂವ್, ತಾಲೂಕಾ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿರ್ದೇಶಕರಾದ ವೀರಶೆಟ್ಟಿ ಪಾಟೀಲ, ಬಸ್ಸಪ್ಪಾ ಮೊಘಾ ಅಮೃತ ಕುಪನೂರ, ಜಗನ್ನಾಥ ಸ್ವಾಮಿ, ಮಲ್ಲಿಕಾರ್ಜುನ ಕೊಡದೂರ, ಅಬ್ದುಲ್ ಬಾಸೀದ, ಬಿಜೆಪಿ ಪಕ್ಷದ ಮುಖಂಡರಾದ ಮುಕುಂದ್ ದೇಶಪಾಂಡೆ, ಪಿ. ಎಲ್. ಡಿ. ಬ್ಯಾಂಕ್ ನಿರ್ದೇಶಕರಾದ ಜಗದೀಶ್ ಸಿಂಗಠಾಕೂರ್, ಮಲ್ಲಿಕಾರ್ಜುನ್ ದಳಪತಿ, ಹನುಮಂತರಾವ್ ಪಾಟೀಲ್, ಚಿಂಚೋಳಿಯ ಪುರಸಭೆ ಸದಸ್ಯರಾದ ನಾಗೇಂದ್ರಪ್ಪ ಗುರಂಪಳ್ಳಿ, ಮತ್ತು ಅನೇಕ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಸಭೆಯಲ್ಲಿ ಭಾಗವಹಿಸಿದರು.