
ಮಾನ್ವಿ,ಮಾ.೦೫- ತಾಲೂಕ ಆಡಳಿತದಿಂದ ನಡೆಯಬೇಕಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿಯಲ್ಲಿ ತಾಲೂಕ ಆಡಳಿತದ ಯಾವ ಸರ್ಕಾರಿ ಅಧಿಕಾರಿಗಳು ಆಗಮಿಸದ ಕಾರಣದಿಂದಾಗಿ ಸರ್ಕಾರದ ಕಾರ್ಯಕ್ರಮವನ್ನು ರದ್ದು ಮಾಡಿ ಖಾಸಗೀಕರಣ ಕಾರ್ಯಕ್ರಮವನ್ನಾಗಿ ಘೋಷಣೆ ಮಾಡಿ ತಾಲೂಕ ಆಡಳಿತದ ವಿರುದ್ಧ ದಿಕ್ಕಾರ ಕೂಗಿದ ಘಟನೆ ಮಾನ್ವಿಯಲ್ಲಿ ನಡೆದಿದೆ.
ನಂತರ ಪುರಸಭೆ ನಾಮ ನಿರ್ದೇಶನ ಸದಸ್ಯ ಶರಣಯ್ಯ ಸ್ವಾಮಿ ಮಾತಾನಾಡಿ ಕೊಟ್ಟ ಮಾತಿನಂತೆ ತಾಲೂಕ ಅಡಳಿತ ನಡೆದುಕೊಳ್ಳದೆ ಜಗದ್ಗುರು ರೇಣುಕಾಚಾರ್ಯರ ಜಯಂತಿಗೆ ಆಗಮಿಸಿ ಅಧಿಕಾರಿಗಳು ಕೂಡಲೇ ಅಮಾನತು ಮಾಡುವಂತೆ ಜಿಲ್ಲಾಧಿಕಾರಿಗಳ ಜೊತೆಗೆ ಮಾತಾನಾಡಿದ್ದೇವೆ ಸರ್ಕಾರ ಟೌನ್ ಹಾಲಿನಲ್ಲಿ ನಡೆಯಬೇಕಿದ್ದ ಜಯಂತಿಯನ್ನು ರದ್ದು ಮಾಡಿ ಬಸವ ವೃತ್ತದಲ್ಲಿ ಶ್ರೀ ರೇಣುಕಾಚಾರ್ಯರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಯ ಮೂಲಕ ನಮ್ಮ ಸಮಾಜದಿಂದ ಖಾಸಗಿಯಾಗಿ ಕಲ್ಮಠದ ಶಾಲೆಯಲ್ಲಿ ಸಮಾಜದಿಂದ ಕಾರ್ಯಕ್ರಮ ಮಾಡಲು ನಿರ್ಧಾರ ಮಾಡಲಾಗಿದ್ದು ಇದಕ್ಕೆಲ್ಲ ಕಾರಣರಾದ ತಾಲೂಕ ಆಡಳಿತದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕಾಗಿ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶಿವಶಂಕರಯ್ಯ ಸ್ವಾಮಿ,ಶ್ರೀಧರಸ್ವಾಮಿ, ಸಮಾಜದ ಅಧ್ಯಕ್ಷ ಕೀಡಿಗೇಣಯ್ಯ ಸ್ವಾಮಿ, ಸಿದ್ದರಾಮಯ್ಯ ಸ್ವಾಮಿ, ರೇವಣ್ಣ ಸಿದ್ದಯ್ಯಸ್ವಾಮಿ,ಮಾಜಿ ಶಾಸಕ ಬಸನಗೌಡ ಬ್ಯಾಗವಾಟ,ಜೆ ಡಿ ಎಸ್ ಯುವ ಮುಖಂಡ ರಾಮಚಂದ್ರ ನಾಯಕ, ಸೇರಿದಂತೆ ಮಹಿಳೆಯರು, ಮಕ್ಕಳು, ಯುವಕರು, ಪುರಸಭೆ ಅಧಿಕಾರಿ ಗಂಗಾಧರ, ಇದ್ದರು.