ತಾಲೂಕ ಆಡಳಿತದಿಂದ ಶ್ರೀ ಮಹಾಯೋಗಿ ವೇಮನ ಜಯಂತಿ

ಮಾನ್ವಿ.ಜ.೨೦- ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಶ್ರೀ ಮಹಾಯೋಗಿ ವೇಮನ ಜಯಂತಿ ಅಂಗವಾಗಿ ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್ ಶ್ರೀ ಮಹಾಯೋಗಿ ವೇಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ. ಶ್ರೀ ವೇಮನರು ೧೫ನೇಶತಮಾನದಲ್ಲಿ ಬಾಳಿದ ಶ್ರೇಷ್ಟ ವಚನಕರ ರಾಗಿದ್ದಾರೆ ತಮ ಅನುಭಾವದಿಂದ ರಚಿಸಿದ ಅನೇಕ ಕವಿತತೆಗಳ ಮೂಲಕ ಸಮಾಜದಲ್ಲಿ ಮಹತ್ತರವಾದ ಬದಲಾವಣೆಗಳನ್ನು ತಂದಿದ್ದಾರೆ ಎಂದು ತಿಳಿಸಿದರು.
ತಹಸೀಲ್ದಾರ್ ಚಂದ್ರಕಾಂತ ಎಲ್.ಡಿ. ಮಾತನಾಡಿ ತೆಲುಗು ಬಾಷೆಯಲ್ಲಿ ಅನೇಕ ಕವಿತೆಗಳನ್ನು ರಚಿಸುವ ಮೂಲಕ ಮಹಾ ಸಂತರಾಗಿ ,ವಚನಕಾರರಾಗಿ ಸಮಾಜ ಚಿಂತಕರಾಗಿ ಶ್ರೀ ಮಹಾಯೋಗಿ ವೇಮನರವರು ಸಮಾಜಕ್ಕೆ ಮಾರ್ಗದರ್ಶನವನ್ನು ನೀಡಿದ್ದಾರೆ ಅವರ ತತ್ವಗಳನ್ನು ಪ್ರತಿಯೋಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೆಡ್ಡಿ ಸಮಾಜದ ಅಧ್ಯಕ್ಷ ಎಸ್.ಶರಣಪ್ಪಗೌಡ, ಮುಖಂಡ ತಿಮ್ಮರೆಡ್ಡಿ ಭೋಗವತಿ, ಚಂದ್ರಪ್ಪಗೌಡ, ಬಿ.ವಿ.ರೆಡ್ಡಿ, ಆಶೋಕ, ಡಾ.ಶರಣಪ್ಪ ಬಲ್ಲಟ್ಟಗಿ, ರಾಮನಗೌಡ, ಶರಣಪ್ಪ, ಹರಿಹರ ಪಾಟೀಲ್, ಅಮರೇಶ, ಅಮರೇಗೌಡ, ಸಾಂಬಶಿವರೆಡ್ಡಿ, ಗುರುಸಿದ್ದಪ್ಪ ಕಣ್ಣೂರು, ಅಮರೇಗೌಡ ನಕ್ಕುಂದಿ, ಸೇರಿದಂತೆ ಇನ್ನಿತರರು ಇದ್ದರು.