ತಾಲೂಕ ಆಡಳಿತದಿಂದ ವೇಮನ ಜಯಂತಿ ಆಚರಣೆ

ಸಂಜೆವಾಣಿ ವಾರ್ತೆ
ಮಾನ್ವಿ.ಜ.೧೯- ಜನಸಾಮಾನ್ಯರ ಕವಿಯಾದ ಮಹಾಯೋಗಿ ವೇಮನರು ಜಾತೀಯತೆ, ಅಂಧಶ್ರದ್ಧೆ, ಮೇಲು ಕೀಳುಗಳನ್ನು ತಮ್ಮ ಕಾವ್ಯದ ಮೂಲಕ ಧಿಕ್ಕರಿಸಿದವರು ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದ ಅವರು ಅಪೂರ್ವ ಸಮಾಜ ಸುಧಾರಕ ಗುರುಸಿದ್ದಪ್ಪ ಕಣ್ಣೂರು ತಿಳಿಸಿದರು.
ಮಾನ್ವಿ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿಯಲ್ಲಿ ಮಾತಾನಾಡಿದ ಅವರು ವೇಮನರ ಮಾತುಗಳು ಬರಿಯ ಮಾತುಗಳಲ್ಲ ಅವುಗಳು ವೇದವೇ ಆಗಿವೆ. ಹೀಗಾಗಿ ವೇಮನರ ಸಾಹಿತ್ಯ ಈ ಎಲ್ಲ ಭಾಷಾ ಸಾಹಿತ್ಯಗಳನ್ನು ಶ್ರೀಮಂತಗೊಳಿಸಿರುವುದಲ್ಲದೆ, ವಿಶ್ವ- ಸಾಹಿತ್ಯಕ್ಕೂ ಭೂಷಣಪ್ರಾಯವಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ರಾಜು ಪೀರಂಗಿ ಹಾಗೂ ಸಿಬ್ಬಂದಿಗಳು ಸೇರಿದಂತೆ ಸಮಾಜದ ಅಧ್ಯಕ್ಷ ಶರಣಪ್ಪ ಗೌಡ ಸುಲ್ತಾನ್ ಪುರ್, ತಿಮ್ಮರೆಡ್ಡಿ ಗೌಡ ಭೋಗವತಿ, ಶರಣಪ್ಪ ಗೌಡ ನಕ್ಕುಂದಿ, ಹೀರಾ ರಾಮನಗೌಡ, ಹರಿಹರ ಪಾಟೀಲ್, ಬಿವಿಆರ್ ರೆಡ್ಡಿ, ಚಂದ್ರಪ್ಪ ಗೌಡ ಚಿಕಲಪರ್ವಿ, ಮಹಾಬಲೇಶ್ವರ ಗೌಡ, ಹಂಪಣ್ಣ ಬಲ್ಲಟಗಿ, ವಿರುಪಣ್ಣಗೌಡ ಕಾತರಕಿ, ಅಮರೇಶ ಚಿಂಚಲ, ಶಂಕರಗೌಡ ಜಕ್ಕಲದಿನ್ನಿ, ರಾಜಶೇಖರ್ ಕಪಗಲ್, ಹೊಸಮನಿ ತಿಪ್ಪಣ್ಣ, ವೀರೇಶ್ ಎನ್.ಹೊಸೂರು ಇತರರು ಉಪಸ್ಥಿತರಿದ್ದರು.