ತಾಲೂಕ ಆಡಳಿತದಿಂದ ಡಾ ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ

ಮಾನ್ವಿ,ಏ.೦೫- ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರ್ಕಾರಿ ನಿಯಮದಂತೆ ತಾಲೂಕ ಆಡಳಿತ ಕಛೇರಿಯಲ್ಲಿ ಬಹಳ ಸರಳವಾಗಿ ಡಾ ಬಾಬು ಜಗಜೀವನ್ ರಾಮ್ ಅವರ ೧೧೬ ನೇ ಜನ್ಮದಿನವನ್ನು ಆಚರಣೆ ಮಾಡಿದರು.
ಪಟ್ಟಣದ ತಾಲೂಕ ಆಡಳಿತ ಕಛೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರವೀಂದ್ರ ಉಪ್ಪಾರ ಇವರು ಡಾ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತಾನಾಡಿದ ಅವರು ಭಾರತದ ಉಪ ಪ್ರಧಾನಿಗಳು ಹಾಗೂ ಹಸಿರು ಕ್ರಾಂತಿ ಹರಿಕಾರದ ಇವರ ಆದರ್ಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕ ದಂಡಧಿಕಾರಿ ಚಂದ್ರಕಾಂತ ಎಲ್ ಡಿ, ಉಪ ದಂಡಧಿಕಾರಿ ವಿರುಪಣ್ಣ,ಪುರಸಭೆ ಅಧಿಕಾರಿ, ಇತರೆ ಸರ್ಕಾರಿ ಅಧಿಕಾರಿಗಳು ಸೇರಿದಂತೆ ವಿವಿಧ ದಲಿತ ಸಂಘಟನೆ ಮುಖಂಡರು, ಉಪಸ್ಥಿತರಿದ್ದರು.