ತಾಲೂಕ ಆಡಳಿತದಿಂದ ಗಣರಾಜ್ಯೋತ್ಸವ ಆಚರಿಸಲು ತೀರ್ಮಾನ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜ.17 ಇದೇ ತಿಂಗಳು ಜನವರಿ 26 ಗಣರಾಜ್ಯೋತ್ಸವವನ್ನು ಆಚರಿಸಲು ತಾಲೂಕ ಆಡಳಿತದಿಂದ ಪೂರ್ವಭಾವಿ ಸಭೆ ಕರೆಯಲಾಗಿತ್ತು.
 ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕರೆದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ತಹಸೀಲ್ದಾರ್ ವಿ ಕಾರ್ತಿಕ್ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಪ್ರಜಾ ರಾಜ್ಯೋತ್ಸವವನ್ನು ಜನವರಿ 26ರಂದು ಆಚರಿಸಲಾಗುತ್ತದೆ. ಎರಡು ವರ್ಷದಿಂದ ಕರೋನಾ ಕರಿ ನೆರಳೆ  ಬಿದ್ದ ಕಾರಣ ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ತಾಲೂಕ ಆಡಳಿತದಿಂದ ಅದ್ದೂರಿಯಾಗಿ ಪ್ರಜಾ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಗಂಗಾವತಿ ಭೀಮಪ್ಪನವರ ಪದವಿಪೂರ್ವ ಕಾಲೇಜ್ ಮೈದಾನದಲ್ಲಿ ನಡೆಯುವ ಅಂದಿನ ಕಾರ್ಯಕ್ರಮದಲ್ಲಿ ಶಾಸಕ ಭೀಮಾ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ, ಕಾರ್ಯಕ್ರಮದಲ್ಲಿ ಪಥ ಸಂಚಲನ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಹೆಸರು ಮಾಡಿರುವ ಐದು ಸರ್ಕಾರಿ ನೌಕರರನ್ನು ಗುರುತಿಸಿ ಸನ್ಮಾನಿಸಲಾಗುವುದು. ಸಮಾರಂಭದಲ್ಲಿ 10 ತಂಡಗಳ  ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸರ್ಕಾರಿ ಕಚೇರಿ ಸೇರಿದಂತೆ ಸರ್ಕಲ್ ಗೆ ವಿದ್ಯುತ್ ಅಲಂಕಾರ ಮಾಡಲಾಗುವುದು. ಮೈದಾನದ ಸುತ್ತ ಶಾಮಿಯಾನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
 ಈ ಸಂದರ್ಭದಲ್ಲಿ ತಾ ಪಂ ಇ ಒ ಡಾ.ಜಿ  ಪರಮೇಶ್ವರಪ್ಪ, ಸಿಪಿ ಐ  ಮಂಜಣ್ಣ, ಟಿಎಚ್ಒ  ಡಾ. ಶಿವರಾಜ್, ಲೋಕೋಪಯೋಗಿ ಇಲಾಖೆಯ  ಎ ಇ ಇ ಪುರುಷೋತ್ತಮ್, ಬಿ ಇ ಒ ಎಂ ಸಿ ಆನಂದ್, ಶಿರಸ್ದಾರ್ ಅನ್ನದಾನೇಶ್ವರ, ಸಿಬ್ಬಂದಿ ನಾಗರಾಜ್ ಗೋಪಾಲ್   ಇತರರಿದ್ದರು.