ತಾಲೂಕ ಆಡಳಿತದಿಂದ ಕೃಷ್ಣ ಜಯಂತೋತ್ಸವ ಆಚರಣೆ

ಮಾನ್ವಿ,ಸೆ.೦೬ – ಜಗತ್ತಿನ ಸೃಷ್ಟಿಕರ್ತ ಶ್ರೀಕೃಷ್ಣ ಪರಮಾತ್ಮ ಇಡೀ ಜಗತ್ತಿನ ಸಕಲ ಜೀವಿಗಳನ್ನು ಸಂರಕ್ಷಣೆ ಮಾಡುವಾತನು ಇತನ ಸ್ಮರಣೆ ನಮ್ಮನ್ನು ಕಷ್ಟದ ಸಮಯದಿಂದ ಪಾರಾಗಬಹುದು ಶ್ರೀಕೃಷ್ಣನ ಕಥೆಯೊಂದನ್ನು ಶಾಸಕ ಜಿ ಹಂಪಯ್ಯ ನಾಯಕ ಹೇಳಿದರು.
ಪಟ್ಟಣದ ಟೌನ್ ಹಾಲಿನಲ್ಲಿ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟನೆ ಮಾಡಿದರು ಮೊದಲು ಪಟ್ಟಣದ ಬಸವ ವೃತ್ತದಲ್ಲಿ ಶ್ರೀಕೃಷ್ಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಆಗಮಿಸಿದರು ನಂತರ ಶಾಸಕರು ಮಾತಾನಾಡಿ ಶ್ರೀ ಕೃಷ್ಣಂ ಒಂದೇ ಜಗದ್ಗುರು ಎಂದರು. ನಂತರ ಶ್ರೀಕೃಷ್ಣ ಜಯಂತಿಯ ಕುರಿತು ಶಿಕ್ಷಕ ವೆಂಕಟೇಶ ಉಪನ್ಯಾಸ ನೀಡಿದರು ಹಾಗೂ ಧರ್ಮಗುರುಗಳು ಆಶಿರ್ವಾಚನವನ್ನು ನೀಡಿದರು.
ನಂತರ ವೆಂಕಣ್ಣ ಯಾವದ್ ಪ್ರಾಸ್ತಾವಿಕವಾಗಿ ಮಾತಾನಾಡಿ ಕೃಷ್ಣ ಜನಾಂಗದಲ್ಲಿ ಜನ್ಮಿಸಿದ ನಾವುಗಳು ಆರ್ಥಿಕ ಸಮಾಜಿಕ ಶೈಕ್ಷಣಿಕವಾಗಿ ಹಿಂದುಳಿಯಲು ನಮ್ಮಲ್ಲಿ ಸಂಘಟನೆಯ ಕೊರತೆ ಇದೆ ದಯವಿಟ್ಟು ನಾವುಗಳು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.
ನಂತರ ಅನೇಕ ಗಣ್ಯರು ಮಾತಾನಾಡಿದರು ಹಾಗೂ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ, ಸಮಾಜದ ಗಣ್ಯರಿಗೆ, ರಾಜಕೀಯ ಜನಪ್ರತಿಗಳಿಗೆ, ವೇದಿಕೆಯಲ್ಲಿದ್ದ ಗಣ್ಯರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಯಾದವ ಸಮಾಜದ ಧರ್ಮ ಗುರುಗಳಾದ ಶಿವರಾಮನಾಂದ ಜಗದ್ಗುರು ಕಲ್ಲೂರು, ದಂಡಧಿಕಾರಿ ರಾಜು ಪೀರಂಗಿ, ಪುರಸಭೆಯ ನರಸಿಂಹ, ತಾಲೂಕ ಅಧ್ಯಕ್ಷ ಕೆ ಆರ್ ವೆಂಕಟೇಶ ಗುಡದಿನ್ನಿ. ಸಾಹೇಬಣ್ಣ ಕೆ ಗುಡದಿನ್ನಿ, ಯಮುನಪ್ಪ ಬಾಗಲವಾಡ ಪುರಸಭೆ ಸದಸ್ಯ ರಾಜಾ ಮಹೇಂದ್ರ ನಾಯಕ, ಸುಖಮುನಿ ಪುರಸಭೆ ಸದಸ್ಯ, ವೀರಭದ್ರಪ್ಪ ಆಲ್ದಾಳ್, ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.