ತಾಲೂಕ ಅಭಿವೃದ್ಧಿಯೇ ಕಂಕಣ ಬದ್ಧರಾಗಿರುವೆ-ಆರ್.ವಿ.ಎನ್

ಆರ್.ವಿ.ಎನ್ ರಿಂದ ೨ ಕೋಟಿ ವೆಚ್ಚದ ಡಿವೈಡರ್, ಹೈಮಾಸ್ ದೀಪ ಉದ್ಘಾಟನೆ
ಸಿರವಾರ.ನ.೦೬- ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲರುವ ಮಾನ್ವಿ ಹಾಗೂ ಸಿರವಾರ ತಾಲೂಕಗಳಿಗೆ ಕ್ರೀಡಾಂಗಣ, ಮಿನಿವಿಧಾನಸೌಧ ನಿರ್ಮಾಣ ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಕಂಕಣ ಬದ್ದರಾಗಿರುವೆ ಎಂದು ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪನಾಯಕ ಹೇಳಿದರು.
ಪಟ್ಟಣದಲ್ಲಿ ೨ ಕೋಟಿ ವೆಚ್ಚದಲ್ಲಿ ಮುಖ್ಯರಸ್ತೆಯಲ್ಲಿ ನೂತನವಾಗಿ ನಿರ್ಮಾಣಮಾಡಿರುವ ಡಿವೈಡರ್ ಹಾಗೂ ಹೈಮಾಸ್ ವಿದ್ಯುತ್ ದೀಪಗಳನ್ನು ಉದ್ಘಾಟಿಸಿ ನಂತರ ಮಾತನಾಡಿದ ದೀಪಾವಳಿ ಹಬ್ಬವೆಂದರೆ ಕತ್ತಲಿನಿಂದ ಬೆಳಕಿನಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ ಹೋಗುವ ಹಬ್ಬವಾಗಿದೆ ಇಂತಹ ದಿನದಂದು ಈ ಪಟ್ಟಣದ ಹೃದಯಭಾಗವಾಗಿರುವ ಮುಖ್ಯರಸ್ತೆಯಲ್ಲಿ ೨ ಕೊ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಡಿವೈಡರ್, ಹೈಮಾಕ್ಸ್ ದೀಪಗಳನ್ನು ಉದ್ಘಾಟಿಸುತ್ತಿರುವುದಕ್ಕೆ ಸಂತೋಷ ಆಗುತ್ತಿದೆ. ಎಪಿಎಂಸಿ ಕ್ರಾಸ್ ನಿಂದ ಬಸವೇಶ್ವರ ವೃತ್ತದ ವರೆಗೂ ಹಾಗೂ ಮರಾಟ ರಸ್ತೆಯಿಂದ ಮಾನ್ವಿ ಕ್ರಾಸ್ ವರೆಗೂ ರಸ್ತೆ ನಿರ್ಮಿಸುವಂತೆ ತಿಳಿಸಿದ್ದಾರೆ ಅದನ್ನು ಸಹ ನಿರ್ಮಾಣ ಮಾಡಲಾಗುವುದು. ಪಟ್ಟಣದ ಬಸ್ ನಿಲ್ದಾಣ ನಿರ್ಮಾಣಕ್ಕೆ ೩ಕೋ. ಟೆಂಡರ್ ಪ್ರಕ್ರೀಯೆ ಪೂರ್ಣಗೊಂಡಿದೆ, ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು. ೧.೩೧ ಕೋಟಿ ವೆಚ್ಚದಲ್ಲಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಕಾಲೇಜು ಕೊಠಡಿಗಳನ್ನು ನಿರ್ಮಾಣಕಾರ್ಯಪೂರ್ಣಗೊಂಡಿದೆ ಶೀಘ್ರದಲ್ಲಿ ಉದ್ಘಾಟನೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಲಾಗುತ್ತೆ, ಡಿಗ್ರೀ ಕಾಲೇಜು ನಿರ್ಮಾಣ ಹಂತದಲ್ಲಿದ್ದು ೪ ಕೋಟಿ ಅನುದಾನ ನೀಡಲಾಗಿದೆ. ಮಿನಿ ವಿಧಾನಸೌಧ ಹಾಗೂ ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ಮಿಸಲು ಇದೆ ಸ್ಥಳದ ಹೆಸರು ಬದಲಾವಣೆ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು. ನವಲಕಲ್ ಚಿಂಚರಕಿ ರಸ್ತೆ ನಿರ್ಮಾಣಕ್ಕೆ ಹಿಂದಿನ ಲೋಕೊಪಯೋಗಿ ಸಚಿವರ ಅನುದಾನ ನೀಡಿದ್ದಾರೆ. ನಮ್ಮ ಕಾರ್ಯಕರ್ತರಿಗೆ ನಾಮನಿಧೇರ್ಶನ ಮಾಡಲು ನಮ್ಮ ಸರ್ಕಾರ ಇಲ್ಲ. ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೇಲವರನ್ನು ನಾಮನಿರ್ಧೇಶನ ಮಾಡಲಾಗಿದೆ ಎಂದರು.
ವಾಣಿಜ್ಯೋದ್ಯಮಿ ಜಿ.ಲೋಕರೇಡ್ಡಿ ಮಾತನಾಡಿ ಸಿರವಾರ ಪಟ್ಟಣದ ಅಭಿವೃದ್ದಿಗೆ ಶಾಸಕರ ಹಗಲಿರುಳು ಶ್ರಮಿಸುತ್ತಿದ್ದಾರೆ. ಹಿಂದೆ ಕುಮಾರ ಸ್ವಾಮಿ ಸಿಎಂ ಇದ್ದಾಗ ಸಿರವಾರ ತಾಲೂಕಿಗೆ ೯೭ ಕೊ. ಪ್ರಸ್ತಾವನೆಯನ್ನು ಸಲ್ಲಿಸಲಾಗಿತು. ಸರ್ಕಾರ ಬದಲಾವಣೆ ಆಗದಿದ್ದರೆ ಇಷ್ಟೊತ್ತಿಗೆ ಅನುದಾನ ಮಂಜುರಾಗಿ ಕಾಮಗಾರಿ ಪ್ರಾರಂಭವಾಗುತ್ತಿದ್ದವು ಎಂದರು.
ಜೆಡಿಎಸ್ ಮಾನ್ವಿ ತಾಲೂಕು ಅಧ್ಯಕ್ಷ ಟಿ.ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ,ತಹಸೀಲ್ದಾರ ವಿಜಯೇಂದ್ರಹುಲಿನಾಯಕ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ, ಜಂಬುನಾಥ ಯಾದವ್ ಮಾತನಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ರಾಜಾರಾಮಚಂದ್ರ ನಾಯಕ, ಖಲೀಲ್ ಖುರೇಷಿ, ಮೌಲಾಸಾಬ, ಎಂ.ನಿಂಬಯ್ಯಸ್ವಾಮಿ, ಈಶಪ್ಪ ಹೂಗಾರ್, ಖಾಶಿನಾಥ ಸರೋಧೆ,ತಾ.ಪಂ ಮಾಜಿ ಅದ್ಯಕ್ಷ ಹಾಗೂ ಗುತ್ತೆದಾರ ದಾನನಗೌಡ, ಸಿರವಾರ ತಾಲೂಕ ಅಧ್ಯಕ್ಷ ನಾಗರಾಜಗೌಡ, ಗೋಪಾಲ ನಾಯಕ ಹರವಿ, ಪ್ರಭುಗೌಡ ಎನ್.ಹೊಸೂರು, ಎಂ.ಪ್ರಕಾಶಪ್ಪ, ದಾನಪ್ಪ ಸಿರವಾರ, ಸೂಗರಯ್ಯಸ್ವಾಮಿ ಗಣದಿನ್ನಿ, ಗ್ಯಾನಪ್ಪ, ಅಮರೇಶ ಸೂರಿ, ರಂಜೀತ್, ಯಲ್ಲಪ್ಪ ನಾಯಕ, ಬಂದೇನವಾಜ್, ಭೀಮರಾಜ್, ಮೈಬೂಬ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಇದ್ದರು.